ನಾಗಮಂಗಲ: ಶುಕ್ರವಾರ ಬಿರುಗಾಳಿ ಸಹಿತ ಮಳೆ ಸುರಿದ ಪರಿಣಾಮ ಪಟ್ಟಣ ಹಾಗೂ ತಾಲ್ಲೂಕಿನ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿತು.

ಪಟ್ಟಣದ ಕೆಎಸ್ಆರ್ಟಿಸಿ ಬಸ್ನಿಲ್ದಾಣದ ಚಾವಣಿಯಲ್ಲಿ ಮಳೆನೀರು ಪೈಪ್ ಮೂಲಕ ಸರಾಗವಾಗಿ ಹರಿದುಹೋಗದೆ ಚೇಂಬರ್ನಲ್ಲಿ ತುಂಬಿ ಉಕ್ಕಿ ಹರಿದು ನಿಲ್ದಾಣದಲ್ಲಿ ತುಂಬಿಕೊಂಡು, ಪ್ರಯಾಣಿಕರು ಕೂರಲಾಗದೆ, ಗೋಡೆ ಪಕ್ಕದಲ್ಲಿ ಆಶ್ರಯ ಪಡೆದರು. ಪ್ರತಿ ವರ್ಷ ಸಂಭವಿಸು ಈ ಸಮಸ್ಯೆ ಪರಿಸಹರಿಸಲು ₹ 1 ಕೋಟಿ ವೆಚ್ಚದಲ್ಲಿ ನಿಲ್ದಾಣದ ಎರಡೂ ಬದಿಯಲ್ಲಿ ದೊಡ್ಡ ಚರಂಡಿ ನಿರ್ಮಾಣ ಮಾಡಲಾಗಿದೆ. ಆದರೆ ಚರಂಡಿಗೆ ಸಂಪರ್ಕವಿಲ್ಲದ ಕಾರಣ ಮಳೆ ನೀರು ನಿಲ್ದಾಣದಲ್ಲಿಯೇ ಕಟ್ಟಿ ನಿಲ್ಲುವಂತಾಗಿದೆ ಎಂದು ಪ್ರಯಾಣಿಕರು ದೂರಿದರು. ನಿಲ್ದಾಣದ ಚಾವಣಿಯ ಸಿಮೆಂಟ್ ಶೀಟ್ಗಳು ಅಲ್ಲಲ್ಲಿ ಬಿರುಕು ಬಿಟ್ಟು ಸೋರುತ್ತದೆ. ಮೇಲ್ಛಾವಣಿಯ ಮಳೆ ನೀರು ಹರಿಯುವ ಸಲುವಾಗಿ ಅಳವಡಿಸಿರುವ ಪ್ಲಾಸ್ಟಿಕ್ ಪೈಪ್ಗಳೂ ಕಳಚಿರುವುದರಿಂದ ನಿಲ್ದಾಣದಲ್ಲಿಯೇ ನೀರು ಹರಿದು ಪ್ರಯಾಣಿಕರಿಗೆ ಸಮಸ್ಯೆ ಉಂಟಾಯಿತು. ನಾಗಮಂಗಲ ಮಂಡ್ಯ ಮುಖ್ಯ ರಸ್ತೆ ಹಾಗೂ ಮಾಗಡಿ ಜಲಸೂರು ರಾಜ್ಯ ಹೆದ್ದಾರಿ ಬದಿಯಲ್ಲಿನ ಮರದ ಕೊಂಬೆಗಳು ಬಿದ್ದು ಕೆಲಹೊತ್ತು ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು. ಚಾಲಕರೇ ಕೊಂಬೆಗಳನ್ನು ಪಕ್ಕಕ್ಕೆ ಸರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ತಾಲ್ಲೂಕಿನ ಹರಳಕೆರೆ ಗೇಟ್ನ ರಸ್ತೆಬದಿಯಲ್ಲಿರುವ ನೀಲಗಿರಿ ಮರದ ಕೊಂಬೆ 11ಕೆವಿ ವಿದ್ಯುತ್ ತಂತಿ ಮೇಲೆ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಸೆಸ್ಕ್ ಸಿಬ್ಬಂದಿ ಕೊಂಬೆಗಳನ್ನು ತೆರವುಗೊಳಿಸಿದರು. ಸಿಡಿಲಿನಿಂದಾಗಿ ದೇವಲಾಪುರ ಹ್ಯಾಂಡ್ಪೋಸ್ಟ್ 222 ಕೆವಿ ಕೇಂದ್ರದಲ್ಲಿ ವಿದ್ಯುತ್ ಸ್ಥಗಿತಗೊಳಿಸಲಾಯಿತು.

ತಾಲ್ಲೂಕಿನ ಹಲವೆಡೆ ಬೆಳೆದಿದ್ದ ತರಕಾರಿ ಬೆಳೆಗಳು ಮತ್ತು ಮುಸುಕಿನ ಜೋಳದ ಹಸಿಮೇವು ನೆಲಕಚ್ಚಿವೆ. ರೈತರಿಗೆ ನಷ್ಟ ಉಂಟಾಗಿದೆ ಎಂದು ಸ್ಥಳೀಯರು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-40-2130767980

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.