ನಾಗಮಂಗಲ: ಬೇಸಿಗೆ ಝಳ ಮುಂದುವರಿಯುತ್ತಿರುವ ಬೆನ್ನಲ್ಲೇ ತಾಲ್ಲೂಕಿನಾದ್ಯಂತ 53 ಗ್ರಾಮಗಳಲ್ಲಿ ಕುಡಿಯುವ ನೀರಿನ ಬವಣೆ ಎದುರಾಗುವ ಸಂಭವವಿದೆ.

ಬೋಗಾದಿ ಗ್ರಾಮ ಪಂಚಾಯಿತಿಗೆ ಸೇರಿದ ಟಿ.ವಿ. ಕಾಲೊನಿ ಮತ್ತು ಕುಳ್ಳನಕೊಪ್ಪಲು ಗ್ರಾಮಗಳಿಗೆ ಹೊಸದಾಗಿ ಕೊಳವೆ ಬಾವಿ ಕೊರೆಯಿಸಲು ತೀರ್ಮಾನಿಸಿದ್ದು, ಅಲ್ಲಿಯವರೆಗೆ ಪಕ್ಕದ ಸುಖಧರೆ ಗ್ರಾಮದಿಂದ ತಾತ್ಕಾಲಿಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ತಿರುಗನಹಳ್ಳಿ ಗ್ರಾಮಕ್ಕೆ ತಾತ್ಕಾಲಿಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇಲ್ಲೆಲ್ಲ ಕುಡಿಯುವ ನೀರಿನ ಪೂರೈಕೆಯಲ್ಲಿ ಸಮಸ್ಯೆ ಇದೆ.

ಕಾಂತಾಪುರ ಗ್ರಾಮ ಪಂಚಾಯಿತಿಗೆ ಸೇರಿದ ಗೊಲ್ಲರಹಳ್ಳಿ ಮತ್ತು ಬಂಕಾಪುರ ಗ್ರಾಮಗಳಿಗೆ ಗಂಗಸಮುದ್ರದಿಂದ ಹಳೇ ಪೈಪ್ಲೈನ್ನಿಂದ ತಾತ್ಕಾಲಿಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಹಂದೇನಹಳ್ಳಿ ಕಾಲೊನಿಗೆ ಎರಡು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಹುಲಿಕೆರೆ ಗ್ರಾಮ ಪಂಚಾಯಿತಿಯ ದೊಡ್ಡೇನಹಳ್ಳಿ ಬಾರೆ, ಬುಡುಬುಡುಕೆ ಕಾಲೊನಿಗಳಿಗೆ ‘ಜೆಜೆಎಂ’ (ಜಲಜೀವನ್ ಮಿಷನ್) ಯೋಜನೆಯಡಿ ಹೊಸದಾಗಿ ಕೊಳವೆಬಾವಿ ಕೊರೆಯಿಸಲಾಗಿದ್ದು ಪೈಪ್ಲೈನ್ ಅಳವಡಿಸುವ ಕಾಮಗಾರಿ ಮುಗಿಯುವ ಖಾಸಗಿ ಬೋರ್ವೆಲ್ನಿಂದ ನೀರು ಪೂರೈಸಲಾಗುತ್ತಿದೆ. ಅಂಚೆಚಿಟ್ಟನಹಳ್ಳಿ ಗ್ರಾಮ ಪಂಚಾಯಿತಿಯ ಬೇಗಮಂಗಲ ಗ್ರಾಮಕ್ಕೆ ಖಾಸಗಿ ಬೋರ್ವೆಲ್ನಿಂದ, ದೇವಲಾಪುರ ಗ್ರಾಮ ಪಂಚಾಯಿತಿಯ ಮಲ್ಲಿನಾಥಪುರ ಗ್ರಾಮಕ್ಕೆ ಅರಸೇಗೌಡನಕೊಪ್ಪಲಿನಿಂದ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಹರದನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ದಡಮುಡಿಕೆ ಗ್ರಾಮಕ್ಕೆ ಎರಡು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ.

ನೀರಿನ ಸಮಸ್ಯೆ: ಚೋಳೇನಹಳ್ಳಿ, ಎ.ಶ್ರೀರಾಮನಹಳ್ಳಿ, ಮಲ್ಲೇನಹಳ್ಳಿ, ಗೂಡೆಹೊಸಹಳ್ಳಿ, ಗಂಗಾಧರನಗರ, ಮುದಿಗೆರೆ, ಭಕ್ತನಾಥಪುರ, ಕನಗೋನಹಳ್ಳಿ, ದಡಿಮುಡಿಕೆಕೊಪ್ಪಲು, ದಡಗ, ದೇವರಮಲ್ಲನಾಯಕನಹಳ್ಳಿ, ಬೊಮ್ಮೇನಹಳ್ಳಿ, ಕುಂಬಾರಕೊಪ್ಪಲು, ಹನುಮನಹಳ್ಳಿ, ಬಂಕಾಪುರ, ಗಂಗಸಮುದ್ರ, ತಟ್ಟೆಕೆರೆ, ಬಿದರಕೆರೆ, ಅಣೆಚನ್ನಾಪುರ, ಮುಳುಕಟ್ಟೆ, ಮಾಯಿಗೋನಹಳ್ಳಿ, ನರಗಲು ಕಾಲೋನಿ, ಮುದ್ದಲಿಂಗನಕೊಪ್ಪ, ಹಾಲಾಳು, ಹೊಸಮನೆ ಹಾಗೂ ಹಾಲ್ತಿ ಸೇರಿದಂತೆ 26 ಗ್ರಾಮಗಳು ನೀರಿನ ಸಮಸ್ಯೆಯ ಅಂಚಿನಲ್ಲಿರುವ ಗ್ರಾಮಗಳ ಪಟ್ಟಿಗೆ ಸೇರಿವೆ. ತಾಲ್ಲೂಕಿನಾದ್ಯಂತ ಒಟ್ಟು 53 ಗ್ರಾಮಗಳಲ್ಲಿ ಜಲಸಂಕಟ ಉಂಟಾಗುವ ಸಾಧ್ಯತೆಯಿದೆ.

ಹಾಳಾದ ರಸ್ತೆಗಳು: ಒಂದೆಡೆ ಜೆಜೆಎಂ ಯೋಜನೆ ಕುಂಟುತ್ತಾ ಸಾಗುತ್ತಿದ್ದರೆ ಮತ್ತೊಂದೆಡೆ ಯೋಜನೆಗಾಗಿ ರಸ್ತೆಗಳು ಹಾಳಾಗುತ್ತಿವೆ. ‘ಜೆಜೆಎಂ ಯೋಜನೆಯಡಿ ಪೈಪ್ ಲೈನ್ ಹಾಕುವ ಸಂದರ್ಭದಲ್ಲಿ ರಸ್ತೆಯನ್ನು ಅಗೆಯಲಾಗಿದ್ದು, ಸರಿಯಾಗಿ ಮುಚ್ಚಿಲ್ಲ. ಕೆಲವು ಕಡೆ ಪೈಪ್ ಮುಚ್ಚುವ ಭರದಲ್ಲಿ ಪೈಪ್ಗಳು ಒಡೆದು ರಸ್ತೆ ತುಂಬಾ ನೀರು ಪೋಲಾಗುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-40-1475637943

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.