ನಾಗಮಂಗಲ: ಸಾಲಾದ್ರಿ ಕ್ಷೇತ್ರ ಕೋಟೆಬೆಟ್ಟದಲ್ಲಿ ಕಂಬದ ನರಸಿಂಹಸ್ವಾಮಿಯ 54ನೇ ಜಯಂತ್ಯುತ್ಸವ ಸಂಭ್ರಮದಿಂದ ನೆರವೇರಿತು.

ಜಯಂತ್ಯುತ್ಸವದ ಅಂಗವಾಗಿ ಶನಿವಾರ ದೀಪ ಪ್ರಜ್ವಲನ, ಅನುಜ್ಞೆ, ಗಂಗಾಪೂಜೆ, ವಿಶ್ವಕ್ಷೇನ ಆರಾಧನೆ, ಮಹಾಗಣಪತಿ ಪೂಜೆ, ಭಗವದ್ ವಾಸುದೇವ ಪುಣ್ಯಾಹ, ರಕಾ ಬಂಧನ, ಸಂಕಲ್ಪ, ಕಳಶಸ್ಥಾಪನೆ, ಅಗ್ನಿಪ್ರತಿಷ್ಠೆ, ಮಹಾಗಣಪತಿ ಹೋಮ, ನವಗ್ರಹ ಶಾಂತಿ , ಮೃತ್ಯುಂಜಯ, ನರಸಿಂಹ ಸಹಸ್ರನಾಮ, ಲಕ್ಷ್ಮಿನಾರಾಯಣ, ಮಹಾಸುದರ್ಶನ, ಶಾಂತಿ ಹೋಮಗಳು ನಡೆದವು. ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಆಯೋಜಿಸಲಾಗಿತ್ತು. ನಾಗಮಂಗಲದ ಮಾರುತಿ ಭಜನಾ ಮಂಡಳಿಯವರಿಂದ ಭಜನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಭಾನುವಾರ ಬ್ರಾಹ್ಮಿ ಮುಹೂರ್ತದಲ್ಲಿ ಸ್ವಾಮಿಯವರಿಗೆ ಸುಪ್ರಭಾತ ಸೇವೆ, ವೇದ ಪಾರಾಯಣ, ಕಳಶಾಭಿಷೇಕ, ಮಹಾಭಿಷೇಕ, ವಿಶೇಷ ಅಲಂಕಾರ ಸೇವೆ, ವರ್ಧಂತಿ ಮಹೋತ್ಸವದ ಪ್ರಯುಕ್ತವಾಗಿ ಶ್ರೀದೇವಿ, ಭೂದೇವಿ, ಸಮೇತರಾದ ಕಂಬದ ನರಸಿಂಹಸ್ವಾಮಿಗೆ ತಿರು ಕಲ್ಯಾಣೋತ್ಸವ, ಲಾಜಾ ಹೋಮ, ಅಷ್ಟಾವದಾನ ಸೇವೆ, ಮಹಾಮಂಗಳಾರತಿ ಕಾರ್ಯಕ್ರಮಗಳು ಭಕ್ತಿಯಿಂದ ಜರುಗಿದವು.

ಕಂಬದ ನರಸಿಂಹಸ್ವಾಮಿ, ಕೋಟೆ ವೆಂಕಟರಮಣ ಸ್ವಾಮಿ, ಶನೇಶ್ವರಸ್ವಾಮಿ ದೇವರ ಪಲ್ಲಕ್ಕಿ ಉತ್ಸವವನ್ನು ಜನಪದ ಕಲಾತಂಡಗಳ ಪ್ರದರ್ಶನದೊಂದಿಗೆ ಕೋಟೆಬೆಟ್ಟದ ರಾಜಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಮಂಡ್ಯದ ಕಾರಸವಾಡಿಯ ಮಧುಸೂಧನದಾಸ ಅವರ ತಂಡದಿಂದ ‘ಭಕ್ತ ಪ್ರಹ್ಲಾದ’ ಹರಿಕಥೆ ಪ್ರದರ್ಶನ ನಡೆಯಿತು. ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪ ಆಯೋಜಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.