ಆದಿಚುಂಚನಗಿರಿ (ಮಂಡ್ಯ): ‘ಭಕ್ತಜನರ ಭಾವನೆಗಳ ಸಾಕಾರವೇ ಈ ಗುರು ಭೈರವೈಕ್ಯ ಮಂದಿರ. ಇದು ಸೇವೆ, ಸಾಧನೆ ಮತ್ತು ಪ್ರೇರಣೆಯ ಕೇಂದ್ರವಾಗಿದೆ. ಈ ಪವಿತ್ರ ಭೂಮಿಗೆ ಆಹ್ವಾನಿಸಿದ್ದಕ್ಕೆ ಆಭಾರಿಯಾಗಿದ್ದೇನೆ. ಬಾಲಗಂಗಾಧರನಾಥ ಸ್ವಾಮೀಜಿಯವರ ಆಶೀರ್ವಾದ ದೊರೆತದ್ದು ನನ್ನ ಸೌಭಾಗ್ಯ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮನದುಂಬಿ ನುಡಿದರು.

ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಸುಕ್ಷೇತ್ರದಲ್ಲಿ ಬುಧವಾರ ಏರ್ಪಡಿಸಿದ್ದ ‘ಶ್ರೀಗುರು ಭೈರವೈಕ್ಯ ಮಂದಿರ’ವನ್ನು ಲೋಕಾರ್ಪಣೆಗೊಳಿಸಿ ಅವರು ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಪುಣ್ಯಕ್ಷೇತ್ರದಲ್ಲಿ ದೊರೆತ ಅನುಭೂತಿಯನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. 2 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಶ್ರೀಮಠದ ಗುರು ಪರಂಪರೆ, ಆಧ್ಯಾತ್ಮಕ ದರ್ಶನ ಮತ್ತು ಸೇವೆಯಿಂದ ಈ ಭೂಮಿ ಸಂಪದ್ಭರಿತವಾಗಿದೆ. ಬಾಲಗಂಗಾಧರನಾಥ ಶ್ರೀಗಳ ಹಾದಿಯಲ್ಲಿ ನಿರ್ಮಲಾನಂದನಾಥ ಶ್ರೀಗಳು ಸಮರ್ಪಣಾ ಭಾವದಿಂದ ಎಲ್ಲರನ್ನೂ ಒಗ್ಗೂಡಿಸಿ ಕರೆದೊಯುತ್ತಿದ್ದಾರೆ ಎಂದು ಹೇಳಿದರು.

ರಾಜ್ಕೋಟ್ನ ಆರ್ಷಾ ವಿದ್ಯಾ ಮಂದಿರದ ಸ್ವಾಮಿ ಪರಮಾತ್ಮಾನಂದ ಸರಸ್ವತಿಜೀ ಮಾತನಾಡಿ, ‘ಮರ್ಯಾದಾ ಪುರುಷೋತ್ತಮ ಶ್ರೀರಾಮನೇ ನಮಗೆ ಆದರ್ಶ. ಸ್ವಯಂ ಧರ್ಮನಿಷ್ಠರಾದ ನರೇಂದ್ರ ಮೋದಿ ಅವರು ಸಂಯಮದ ಪ್ರತೀಕವಾಗಿದ್ದಾರೆ. ಧರ್ಮ ರಕ್ಷಕರಾಗಿ ಆತ್ಮನಿಗ್ರಹ ಮತ್ತು ಸೇವಾಭಾವ ಹೊಂದಿರುವ ಇವರು ರಾಜಕೀಯ ಜೀವನದ 30 ವರ್ಷಗಳಲ್ಲಿ ಎಂದೂ ಅಗೌರವ ತರುವ ಕೆಟ್ಟ ಶಬ್ದಗಳನ್ನು ಆಡಿಲ್ಲ’ ಎಂದು ಗುಣಗಾನ ಮಾಡಿದರು.

‘ಸ್ವಚ್ಛ ಭಾರತ್’ ಯೋಜನೆ ಮೂಲಕ ನೈರ್ಮಲ್ಯ ಕ್ಷೇತ್ರದಲ್ಲಿ ಕ್ರಾಂತಿ ಉಂಟು ಮಾಡಿದ್ದಾರೆ. ಆತ್ಮನಿರ್ಭರ ಮತ್ತು ಡಿಜಿಟಲ್ ಇಂಡಿಯಾ ಯೋಜನೆಗಳು ಸರ್ವ ಜನರನ್ನೂ ತಲುಪಿವೆ. ಮೋದಿ ಅವರು ನಾಯಕತ್ವ ಗುಣದಿಂದ ವಿಶ್ವನಾಯಕ ಎನಿಸಿಕೊಂಡಿದ್ದಾರೆ ಎಂದರು.

ಶ್ರೀಮಠಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು. ಎಲ್ಲಿ ನೋಡಿದರೂ ಜನರು ಕಿಕ್ಕಿರಿದು ತುಂಬಿದ್ದರು. ಪಾರ್ಕಿಂಗ್ ಸ್ಥಳಗಳು ವಾಹನಗಳಿಂದ ಕಿಕ್ಕಿರಿದಿದ್ದವು. ಫ್ಲೆಕ್ಸ್ಗಳ ಭರಾಟೆ ಜೋರಾಗಿತ್ತು. ಪ್ರಧಾನಿ ಮೋದಿ ಭೇಟಿ ಭದ್ರತೆ ಹಿನ್ನೆಲೆಯಲ್ಲಿ ಎಲ್ಲೆಡೆ ಪೊಲೀಸ್ ಬಿಗಿ ಭದ್ರತೆ ಹಾಕಲಾಗಿತ್ತು. ವಿಐಪಿ, ವಿವಿಐಪಿ ಮಾರ್ಗದಲ್ಲೇ 4 ಹಂತಗಳಲ್ಲಿ ತಪಾಸಣೆ ಮಾಡಿ, ಪಾಸ್ ಇದ್ದವರನ್ನು ಮಾತ್ರ ಬಿಡಲಾಗುತ್ತಿತ್ತು.

ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ರಾಜ್ಯಪಾಲ ಥಾವರ್ಚಂದ್ ಗೆಹ್ಲೋತ್, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ವಿವಿಧ ಶಾಖಾ ಮಠಗಳ ಸ್ವಾಮೀಜಿಗಳು, ಮಠದ ಭಕ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.