ಶ್ರೀರಂಗಪಟ್ಟಣ: ‘ಮಕ್ಕಳಿಗೆ ನಿಸರ್ಗದತ್ತವಾಗಿ ಸಿಗುವ ಸೊಪ್ಪು, ತರಕಾರಿ, ಕಾಳು, ಹಾಲು ಮತ್ತು ಧಾನ್ಯಗಳಿಂದ ತಯಾರಿಸಿದ ಆಹಾರ ನೀಡಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಸಕಲೇಶ್ವರ್ ಸಲಹೆ ನೀಡಿದರು.

ತಾಲ್ಲೂಕಿನ ಬಾಬುರಾಯನಕೊಪ್ಪಲು ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಜೀಂ ಪ್ರೇಮ್ ಜಿ ಫೌಂಡೇಶನ್ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಗುರುವಾರ ಏರ್ಪಡಿಸಿದ್ದ ‘ಚಿಣ್ಣರ ಚಿಲಿಪಿಲಿ ಬಾಲ ಮೇಳ’ದಲ್ಲಿ ಅವರು ಮಾತನಾಡಿದರು. ‘ಬೇಕರಿ ಹಾಗೂ ರಸ್ತೆ ಬದಿ ಮಾರಾಟ ಮಾಡುವ ತಿನಿಸುಗಳು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ರಾಸಾಯನಿಕ ಬಳಸಿ ಸಿದ್ದಪಡಿಸಿದ ಆಹಾರ ಸೇವನೆ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಕುಂದಿಸುತ್ತದೆ. ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಠಿಕ ಆಹಾರವನ್ನು ನೀಡುತ್ತಿದ್ದು ಪೋಷಕರು ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಸೇರಿಸಬೇಕು’ ಎಂದು ತಿಳಿಸಿದರು.

ಅಂಗನವಾಡಿ ಮಕ್ಕಳು ವಿವಿಧ ವೇಶ ತೊಟ್ಟು ಗಮನ ಸೆಳೆದರು. ಪೋಷಕರಿಗೆ ರಂಗೋಲಿ, ಲೆಮನ್ ಮತ್ತು ಸ್ಪೂನ್, ಸಂಗೀತ ಕುರ್ಚಿ, ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಗ್ರಾ.ಪಂ. ಅಧ್ಯಕ್ಷೆ ರೂಪಾ ಪ್ರಭಾಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ತಾ.ಪಂ. ಮಾಜಿ ಅಧ್ಯಕ್ಷ ಬಿ.ಎಸ್. ಸಂದೇಶ್, ಜೆಡಿಎಸ್ ಮುಖಂಡ ಬಿ.ಎಸ್. ತಿಲಕ್ಕುಮಾರ್, ಗ್ರಾ.ಪಂ. ಮಾಜಿ ಅಧ್ಯಕ್ಷ ಸತ್ಯನಾರಾಯಣ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಬೆನ್ನೂರ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗಂಗಾಧರ್, ಸದಸ್ಯರಾದ ಉಷಾ, ಎಂ. ಕುಮಾರಸ್ವಾಮಿ, ಅಜೀಂ ಪ್ರೇಮ್ಜಿ ಫೌಂಡೇಶನ್ ಸಂಯೋಜಕಿ ಮಾನಸ, ಅಂಗನವಾಡಿ ಮೇಲ್ವಿಚಾರಕಿ ಎಲ್. ಆಶಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.