ಶನಿವಾರ, ಜೂನ್ 25, 2022
24 °C

ನಾಲ್ವಡಿ ಪ್ರತಿಮೆ ನಿರ್ಮಿಸಲು ಆಗ್ರಹಿಸಿ ನಿರಾಣಿ ಸಿ.ಎಂಗೆ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ರಾಜ್ಯಕ್ಕೆ ಅಪಾರ ಕೊಡುಗೆ ನೀಡಿರುವ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರತಿಮೆಯನ್ನು ರಾಜ್ಯದಾದ್ಯಂತ ನಿರ್ಮಿಸಬೇಕು. ಜೂನ್‌ 4ರಂದು ಸರ್ಕಾರದ ವತಿಯಿಂದಲೇ ಅವರ ಜನ್ಮದಿನ ಆಚರಿಸಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಮುರುಗೇಶ ನಿರಾಣಿ ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಸಂಸ್ಕೃತಿ, ಶಿಕ್ಷಣ, ಕೈಗಾರಿಗೆ, ನೀರಾವರಿ ಕ್ಷೇತ್ರಕ್ಕೆ ನಾಲ್ವಡಿ ಅವರು ಪಾರ ಕೊಡುಗೆ ನೀಡಿದ್ದಾರೆ. ವಿಶ್ವಪ್ರಸಿದ್ಧ ಮೈಸೂರು ದಸರಾ ಆಚರಣೆಯನ್ನು ನಾಡಿಗೆ ಪರಿಚಯಿಸಿದ್ದಾರೆ. ಮೈಸೂರು ಸಂಸ್ಥಾನಕ್ಕಷ್ಟೇ ಸೀಮಿತವಾಗಿದ್ದ ಪ್ರಜಾಪ್ರತಿನಿಧಿ ಸಭೆಯನ್ನು ಜನಪ್ರತಿನಿಧಿ ಸಭೆಯಾಗಿ ರೂಪ ಕೊಟ್ಟಿದ್ದಾರೆ. ಕೆಆರ್‌ಎಸ್‌ ಜಲಾಶಯ, ಶಿವನಸಮುದ್ರ ಜಲವಿದ್ಯುತ್‌ ಉತ್ಪಾದನೆ ಕೇಂದ್ರ ಸ್ಥಾಪನೆಯ ಮೂಲಕ ಅಪಾರ ಸಾಧನೆ ಮಾಡಿದ್ದಾರೆ.

ನಾಲ್ವಡಿ ಅವರ ಸಾಧನೆ ಮುಂದಿನ ಜನಾಂಗಕ್ಕೂ ತಲುಪಬೇಕು. ಹೀಗಾಗಿ ರಾಜ್ಯದಾದ್ಯಂತ ಪ್ರತಿಮೆ ಸ್ಥಾಪಿಸಬೇಕು. ಸರ್‌.ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನು ‘ಎಂಜಿನಿಯರ್‌ ದಿನ’ ಎಂದು ಆಚರಿಸಲಾಗುತ್ತಿದೆ. ಅದೇ ರೀತಿ ಜೂನ್‌ 4 ರಂದು ‘ನಾಲ್ವಡಿ ಕೃಷ್ಣರಾಜ ಒಡೆಯರ್‌ ಜಯಂತಿ’ ಎಂದು ಆಚರಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು