ಮಂಡ್ಯ: ‘ಬದುಕು ಅರಳಬೇಕೆಂದರೆ ಕಲೆ ಬೆಳಗುತ್ತಿರಬೇಕು. ಪ್ರಪಂಚವು ನಾಗಾಲೋಟದಲ್ಲಿ ಎಷ್ಟೇ ಮುಂದುವರಿದರೂ ಅಂತಿಮವಾಗಿ ಕೃಷಿ ಮತ್ತು ಕಲೆ ಉಳಿಯುತ್ತದೆ. ಅದಕ್ಕೆ ಪ್ರಾಧಾನ್ಯ ಇದ್ದೇ ಇರುತ್ತದೆ’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ನಗರದ ಕೆವಿಎಸ್ ಭವನದಲ್ಲಿ ಕರ್ನಾಟಕ ಸಂಘ, ಎಂ.ಎಲ್. ಶ್ರೀಕಂಠೇಗೌಡ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಎರಡನೇ ವರ್ಷದ ಪ್ರೊ.ಜಯಪ್ರಕಾಶಗೌಡ ಪ್ರಶಸ್ತಿ-2026 ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಕಲಾವಿದರಾದವರು ತಮ್ಮ ನೋವು, ಕಷ್ಟಗಳು ಎಷ್ಟೇ ಇದ್ದರು ಕೂಡ ಜಗತ್ತಿಗೆ ಸಾಂತ್ವನ, ಆನಂದ, ನೆಮ್ಮದಿ, ಮೌಲ್ಯಗಳನ್ನು ತಮ್ಮ ಕಲೆಯ ಮೂಲಕ ತಂದು ಕೊಡುತ್ತಾರೆ. ಈ ವರ್ಷದ ಪ್ರಶಸ್ತಿಗೆ ರಂಗಕರ್ಮಿಗಳನ್ನು ಗುರುತಿಸಿರುವುದು ಶ್ಲಾಘನೀಯ. ಉಳಿ ಪೆಟ್ಟು ತಿಂದ ಕಲ್ಲೇ ಪೂಜೆಗೆ ಅರ್ಹವಾಗಿರುತ್ತದೆ. ಆ ದಾಟಿಯಲ್ಲಿಯೇ ಪ್ರೊ.ಜಯಪ್ರಕಾಶಗೌಡ ಅವರೂ ಸಾಗುತ್ತಿದ್ದಾರೆ’ ಎಂದರು.

ಆಂಧ್ರಪ್ರದೇಶದ ಮುಖ್ಯ ಆಯುಕ್ತ ಜಯರಾಮ್ ರಾಯಪುರ ಮಾತನಾಡಿ, ‘ಜಯಪ್ರಕಾಶಗೌಡ ಅವರು ಎಲ್ಲರನ್ನೂ ಅಪ್ಪಿಕೊಂಡವರು ಹಾಗೂ ಇವರನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಅವಮಾನ, ಹಿನ್ನಡೆ ಅನುಭವಿಸಿ ಕರ್ನಾಟಕ ಸಂಘವನ್ನು ಮುಂಚೂಣಿಯಲ್ಲಿ ಕೊಂಡೊಯ್ಯುತ್ತಿರುವ ಇವರ ಕಾಯಕ ಸ್ಮರಣೀಯವಾದುದು’ ಎಂದು ಶ್ಲಾಘಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬೆಂಗಳೂರಿನ ರಂಗ ಸಂಘಟಕ ಶ್ರೀನಿವಾಸ್ ಜಿ.ಕಪ್ಪಣ್ಣ, ‘ನಾನು ಯಾವುದಕ್ಕೂ ಆಸೆ ಪಟ್ಟವನಲ್ಲ, ಜಯಪ್ರಕಾಶಗೌಡರು ಬದ್ಧತೆಯಿಂದ ಕೆಲಸ ಮಾಡುತ್ತಾರೆ. ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿ ಮೌಲ್ಯಯುತವಾಗಿದೆ’ ಎಂದರು.

ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಶಶಿಧರ್ ಭಾರಿಘಾಟ್ ಮಾತನಾಡಿದರು. ಕರ್ನಾಟಕ ಸಂಘದ ಪೋಷಕ ಬಿ.ರಾಮಕೃಷ್ಟ ಅಧ್ಯಕ್ಷತೆ ವಹಿಸಿದ್ದರು. ಜನಪದ ಕಲಾವಿದ ಅಪ್ಪಗೆರೆ ತಿಮ್ಮರಾಜು ಅವರ ಜನಪದ ಹಾಡಿಗೆ ಪ್ರೇಕ್ಷಕರು ತಲೆತೂಗಿದರು.

ಆದಿಚುಂಚನಗಿರಿ ಮಠದ ಸತ್ಕೀರ್ತಿನಾಥ ಸ್ವಾಮೀಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಫಸ್ಟ್ ಸರ್ಕಲ್ ಉಪಾಧ್ಯಕ್ಷ ಮದನ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಹಾಗೂ ಮಂಜುಳಾ ದಂಪತಿ, ಸಂಘದ ಕಾರ್ಯದರ್ಶಿ ಚಂದಗಾಲು ಲೋಕೇಶ್, ತಗ್ಗಹಳ್ಳಿ ವೆಂಕಟೇಶ್, ಜಯರಾಂ ಕೋಣನಹಳ್ಳಿ, ಮಂಜುಳಾ ಉದಯಶಂಕರ್, ಹರೀಶ್ ಬಾಬು, ಹನಕೆರೆ ನಾಗಪ್ಪ, ನಿವೃತ್ತ ಪ್ರಾಂಶುಪಾಲ ಎಸ್.ಬಿ.ಶಂಕರೇಗೌಡ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.