ಮಳವಳ್ಳಿ: ‘ಶಿಕ್ಷಣವು ಕೇವಲ ಸಾಕ್ಷರತೆ ಅಲ್ಲ, ಅದು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವ ಸಾಧನವಾಗಿದ್ದು, ಅಭಿವೃದ್ಧಿ ಗುರಿ ತಲುಪಲು ಸಹಕಾರಿಯಾಗಿದೆ’ ಎಂದು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಈಚೆಗೆ ನಡೆದ ಯೂರೋ ಕಿಡ್ಸ್ ಶಾಲೆಯ ವಾರ್ಷಿಕೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಮಕ್ಕಳಿಗೆ ಶಿಕ್ಷಣ ಸಿಕ್ಕಾಗ ಸ್ವಾಭಾವಿಕವಾಗಿಯೇ ಸಮಾನತೆ ಮೂಡುತ್ತದೆ. ಮಕ್ಕಳು ತಮ್ಮ ಜೀವನದಲ್ಲಿ ಶಿಕ್ಷಣ ಸಿಗುವುದನ್ನು ಪುಣ್ಯದ ಕೆಲಸ ಎಂದು ತಿಳಿದು ಶಿಕ್ಷಕರು ಹಾಗೂ ಗುರುಹಿರಿಯರನ್ನು ಬಾಲ್ಯದಿಂದಲೇ ಗೌರವಿಸುವುದನ್ನು ರೂಢಿಸಿಕೊಳ್ಳಬೇಕು. ಪ್ರಾಥಮಿಕ ವ್ಯವಸ್ಥೆಯಲ್ಲಿಯೇ ಶಿಕ್ಷಣದ ಜೊತೆಗೆ ಸಂಸ್ಕಾರ ಮುಖ್ಯವಾಗಿದೆ’ ಎಂದು ಹೇಳಿದರು.

‘ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಿದಾಗ ಮಾತ್ರ ದೇಶದ ಪ್ರಗತಿ ಸಾಧ್ಯವಾಗುತ್ತದೆ. ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಣದ ಪಾತ್ರ ಅಪಾರ. ಹೀಗಾಗಿ ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು’ ಎಂದು ಹೇಳಿದರು.

ಧ್ವನಿ ಎಂಜುಕೇಷನ್ ಟ್ರಸ್ಟ್ ಅಧ್ಯಕ್ಷ ಎಚ್.ಕೆ.ರಾಜೇಶ್ ಮಾತನಾಡಿದರು. ಐಬಿಎಂನ ಎಚ್.ಪ್ರದೀಪ್ ಕುಮಾರ್, ಸ್ಪಂದನಾ ಸ್ಕೂಲ್ ಕಾರ್ಯದರ್ಶಿ ಎಚ್.ಕೆ.ಕೃಷ್ಣಮೂರ್ತಿ, ಧ್ವನಿ ಎಂಜುಕೇಷನ್ ಟ್ರಸ್ಟ್ ನಿರ್ದೇಶಕರಾದ ಕಮಲಾ ರಾಜು, ಮೇಘಾಶ್ರೀ, ಮುಖಂಡರಾದ ವೆಂಕಟರಾಜು, ಶಿವಲಿಂಗೇಗೌಡ, ಮುಖ್ಯಶಿಕ್ಷಕಿ ವೇದಾವತಿ, ಶಿಕ್ಷಕಿಯರಾದ ಲಕ್ಷ್ಮಿವೀರೇಗೌಡ, ನಂದಿನಿ, ಚೈತ್ರಾ, ಶ್ವೇತಾ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.