ಈಗ ಸೋಂಬೇರಿ ಆಗಿದ್ದೇನೆ: ಮುಖ್ಯಮಂತ್ರಿ

7

ಈಗ ಸೋಂಬೇರಿ ಆಗಿದ್ದೇನೆ: ಮುಖ್ಯಮಂತ್ರಿ

Published:
Updated:
Deccan Herald

ಮಂಡ್ಯ: ‘ನಾನು ಸಣ್ಣವನಿದ್ದಾಗ ಹೊಲ ಗದ್ದೆಗಳಲ್ಲಿ ಕೆಲಸ ಮಾಡಿದ ನೆನಪಿದೆ. 25 ವರ್ಷಗಳ ಹಿಂದೆಯೂ ನಾನು ಹೊಲ ಉಳುಮೆ ಮಾಡಿದ್ದೇನೆ. ಆದರೆ ಈಗ ಸೋಂಬೇರಿ ಆಗಿದ್ದೇನೆ. ಗದ್ದೆಯಲ್ಲಿ ನಾಟಿ ಮಾಡುವಾಗ ಹೆಜ್ಜೆ ಕೀಳಲು ಕಷ್ಟವಾಯಿತು. ನಮ್ಮ ರೈತ ಮಹಿಳೆಯರು ಅರ್ಧ ಗಂಟೆಯಲ್ಲಿ ಎರಡು ಎಕರೆ ನಾಟಿ ಮಾಡಿದರು. ಅವರ ಶ್ರಮಕ್ಕೆ ನಾನು ಕೈಮುಗಿಯುತ್ತೇನೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಗದ್ದೆ ನಾಟಿಗೆ ಸೋಬಾನೆ ಹಿಮ್ಮೇಳ:
ಗದ್ದೆ ನಾಟಿಗೂ ಮುನ್ನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೀತಾಪುರ ಗ್ರಾಮದ ಆಂಜನೇಯನಿಗೆ ಪೂಜೆ ಸಲ್ಲಿಸಿದರು. ಬಿಳಿ ಪಂಚೆ, ಬಿಳಿ ಅಂಗಿ ತೊಟ್ಟಿದ್ದ ಅವರು ಪಂಚೆಯನ್ನು ಸೊಂಟಕ್ಕೆ ಕಟ್ಟಿ ರೈತ ಮಹಿಳೆಯರೊಂದಿಗೆ ಗದ್ದೆಗೆ ಇಳಿದರು. ಎಡಗೈಯಲ್ಲಿ ಭತ್ತದ ಪೈರು ಹಿಡಿದು ಬಲಗೈಯಿಂದ ಸಸಿ ನಾಟಿ ಮಾಡುತ್ತ ಹೋದರು. 15 ನಿಮಿಷ ಗದ್ದೆಯೊಳಗಿದ್ದರು. ನಾಟಿ ಮಾಡುವಾಗ ರೈತ ಮಹಿಳೆಯರು ಸೋಬಾನೆ ಪದ ಹಾಡಿದರು. ವೇದಿಕೆಯಲ್ಲಿ ‘ಉಳುವಾ ಯೋಗಿಯ ನೋಡಲ್ಲಿ’ ರೈತಗೀತೆ ಮೊಳಗುತ್ತಿತ್ತು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !