ಸೋಮವಾರ, ಆಗಸ್ಟ್ 26, 2019
21 °C

ಬಹಿರ್ದೆಸೆಗೆ ಹೋಗಿದ್ದ ವೃದ್ಧೆ ಕೆಸರಿನಲ್ಲಿ ಸಿಲುಕಿ ಸಾವು

Published:
Updated:

ಕಿಕ್ಕೇರಿ: ಪಟ್ಟಣದ ಅಮಾನಿಕೆರೆಯ ಕೆಸರಿನಲ್ಲಿ ಸಿಲುಕಿ ವೃದ್ಧೆಯೊಬ್ಬರು ಮಂಗಳವಾರ ಸಾವನ್ನಪ್ಪಿದ್ದಾರೆ.

ಹೋಬಳಿಯ ಸಾಸಲು ಗ್ರಾಮದ ಲೇ. ನಂಜಯ್ಯನವರ ಪತ್ನಿ ನಂಜಮ್ಮ (75) ಮೃಪಟ್ಟವರು. ಇವರು ಕಿಕ್ಕೇರಿಯಲ್ಲಿರುವ ಮೊಮ್ಮಗಳ ಮನೆಗೆ ಬಂದಿದ್ದರು.  ಬಹಿರ್ದೆಸೆಗೆಂದು ಅಮಾನಿಕೆರೆ ಬಳಿ ಹೋಗಿದ್ದಾಗ ಕಾಲು ಜಾರಿ ಕೆಸರಿನಲ್ಲಿ ಬಿದ್ದು ಮೇಲೆ ಬರಲಾಗದೆ ಸಾವನ್ನಪ್ಪಿದ್ದಾರೆ.

ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post Comments (+)