ಚಾಮುಂಡೇಶ್ವರಿಗೆ ಒಂದು ಟನ್‌ ತೂಕದ ತಿನಿಸುಗಳ ಅಲಂಕಾರ

7
ಕಲಾವಿದ ಎಸ್‌.ವೈ.ಸಂದೇಶ್‌ ನೇತೃತ್ವದ 40 ಯುವಕರ ತಂಡದಿಂದ ಅಲಂಕಾರ

ಚಾಮುಂಡೇಶ್ವರಿಗೆ ಒಂದು ಟನ್‌ ತೂಕದ ತಿನಿಸುಗಳ ಅಲಂಕಾರ

Published:
Updated:
Deccan Herald

ಶ್ರೀರಂಗಪಟ್ಟಣ (ಮಂಡ್ಯ): ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ನಿಮಿತ್ತ ಪಟ್ಟಣದ ಚಾಮುಂಡೇಶ್ವರಿ ದೇವಿಗೆ ಶುಕ್ರವಾರ ಒಂದು ಸಾವಿರ ಕೆ.ಜಿ ತೂಕದ ಬಗೆ–ಬಗೆಯ ತಿನಿಸುಗಳಿಂದ ಅಲಂಕಾರ ಮಾಡಿ ಪೂಜಿಸಲಾಯಿತು.

ದೇವಿಯ ಮೂರ್ತಿಯನ್ನು 24 ಬಗೆಯ, 16 ಸಾವಿರ ತಿನಿಸುಗಳಿಂದ ಅಲಂಕರಿಸಲಾಗಿತ್ತು. ಕಲಾವಿದ ಎಸ್‌.ವೈ.ಸಂದೇಶ್‌ ನೇತೃತ್ವದ 40 ಯುವಕರ ತಂಡ ಸತತ 24 ತಾಸುಗಳ ಕಾಲ ಅಲಂಕಾರ ಮಾಡಿತು.

ವಿವಿಧ ತಿಂಡಿಗಳಿಂದ ಒಂದು ಸಾವಿರ ಗೋಪುರಗಳನ್ನು ನಿರ್ಮಿಸಲಾಗಿದೆ. ಮೂರು ಬಗೆಯ ಚಕ್ಕುಲಿ, ತೇಂಗುಲಿ, ನಿಪ್ಪಟ್ಟು, ಕೋಡುಬಳೆ, ರವೆ ಉಂಡೆ, ಚಿಗಲಿ, ಕಡ್ಲೆಉಂಡೆ, ಎಳ್ಳುಉಂಡೆ, ಪುರಿಉಂಡೆ, ಕರ್ಜಿಕಾಯಿ, ಚಿರೋಟಿ, ಫೇಣಿಗಳನ್ನು ಅಲಂಕಾರಕ್ಕೆ ಬಳಸಲಾಗಿದೆ.

‘ಚಾಮುಂಡೇಶ್ವರಿ ದೇವಿಗೆ ತಿನಿಸುಗಳಿಂದ ಅಲಂಕಾರ ಮಾಡಲು ಒಂದು ತಿಂಗಳಿನಿಂದ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮೈಸೂರಿನ ವೃದ್ಧ ದಂಪತಿಗೆ ತಿಂಡಿ ತಯಾರಿಸಿಕೊಡುವ ಗುತ್ತಿಗೆ ನೀಡಲಾಗಿತ್ತು. ಶನಿವಾರ ಸಂಜೆಯವರೆಗೆ ಈ ಅಲಂಕಾರ ಇರುತ್ತದೆ’ ಎಂದು ದೇವಾಲಯದ ಪ್ರಧಾನ ಅರ್ಚಕ ಕೆ.ಎಸ್‌.ಲಕ್ಷ್ಮಿಶ್‌ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !