ಪಾಂಡವಪುರ: ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಗ್ರಾಮೀಣರು ಆರ್ಥಿಕ ಸ್ವಾವಲಂಬನೆಯನ್ನು ಪಡೆಯಬೇಕಿದ್ದು, ಈ ನಿಟ್ಟಿನಲ್ಲಿ ಸಹಕಾರ ಸಂಘಗಳು ಪರಿವರ್ತನೆಗೊಳ್ಳಬೇಕಾಗಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಬುಧವಾರ ರೈತ ನಾಯಕ ದಿ.ಕೆ.ಎಸ್.ಪುಟ್ಟಣ್ಣಯ್ಯ ಫೌಂಡೇಶನ್ ಆಯೋಜಿಸಿದ್ದ ‘ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಸ್ಥಳೀಯ ಆರ್ಥಿಕಾಭಿವೃದ್ಧಿ’ ಕುರಿತ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಧಿಕಾರ ವಿಕೇಂದ್ರಿಕರಣ ಉದ್ದೇಶದಿಂದ ಗ್ರಾಮ ಪಂಚಾಯಿತಿಗಳನ್ನು ರಚಿಸಲಾಯಿತು. ಅಧಿಕಾರ ವಿಕೇಂದ್ರಿಕರಣವಾದರೆ ಸಾಲದು, ಅರ್ಥಿಕ ವಿಕೇಂದ್ರಿಕರಣಗೊಳ್ಳಬೇಕಿದೆ. ಅಂತೆಯೇ ಬಹಳ ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿರುವ ಕೃಷಿ ಪತ್ತಿನ ಸಹಕಾರ ಸಂಘಗಳು ಕೇವಲ ರಸಗೊಬ್ಬರ, ಕ್ರಿಮಿನಾಶಕ, ಆಹಾರ ವಿತರಣೆ ಮಾಡಿದರಷ್ಟೇ ಸಾಲದು. ಸ್ಥಳೀಯವಾಗಿ ರೈತರ ಬೆಳೆಗಳನ್ನು ಖರೀದಿಸಿ ಮಾರುಕಟ್ಟೆ ಸೃಷ್ಠಿಮಾಡಬೇಕು. ಸ್ಥಳೀಯ ಜನರಿಗೆ ಬೇಕಾಗುವ ಅಗತ್ಯವಸ್ತುಗಳನ್ನು ಪೂರೈಕೆ ಮಾಡಬೇಕು. ಜತೆಗೆ ಶೀತಲೀಕರಣ ಘಟಕ (ಕೋಲ್ಡ್ ಸ್ಟೋರೇಜ್) ಮೂಲಕ ರೈತರ ಬೆಳೆಗಳನ್ನು ಸಂರಕ್ಷಿಸಿಡಬೇಕು. ಅಗತ್ಯಕ್ಕಿಂತ ಹೆಚ್ಚು ಉತ್ಪನ್ನಗಳನ್ನು ಬೇರೆಡೆಗೆ ಸರಬರಾಜು ಮಾಡಬೇಕು. ಸಹಕಾರ ಸಂಘಗಳು 241 ಸೇವೆಗಳನ್ನು ಸಲ್ಲಿಸಲು ಅವಕಾಶವಿದ್ದು, ಕಾರ್ಯಪ್ರವೃತ್ತರಾಗಬೇಕು ಎಂದರು. ರಾಜ್ಯದಲ್ಲಿರುವ ಸಹಕಾರ ಸಂಘಗಳ ಪೈಕಿ ಶೇ 87ರಷ್ಟು ಭ್ರಷ್ಟಚಾರದಲ್ಲಿವೆ ಎಂಬ ಮಾಹಿತಿ ಇದೆ. ರೈತರು ತಮ್ಮ ಉತ್ಪನ್ನಗಳ ಪೈಕಿ ಶೇ.27ರಷ್ಟು ಮಾತ್ರ ಲಾಭ ಪಡೆಯುತ್ತಿದ್ದರೆ, ಶೇ73ರಷ್ಟು ರೈತರ ಉತ್ಪನ್ನಗಳ ಲಾಭವು ದಲ್ಲಾಳಿಗಳ ಪಾಲಾಗುತ್ತಿವೆ. ಇವೆಲ್ಲವನ್ನು ಸರಿಪಡಿಸಬೇಕಿದೆ. ಹಾಗಾಗಿ ರಾಜಕಾರಣವನ್ನು ಬದಿಗೊತ್ತಿ ಪಕ್ಷಾತೀತವಾಗಿ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಲವರ್ಧನೆಗೊಳಿಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಸಹಕಾರ ಸಂಘದ ಸಿಇಓಗಳು ಮತ್ತು ನಿರ್ದೇಶಕರು ದೊಡ್ಡ ಮನಸ್ಸು ಮಾಡಬೇಕು ಎಂದು ಮನವಿ ಮಾಡಿದರು.

ಸಮೀಕ್ಷೆ: ಪುಟ್ಟಣ್ಣಯ್ಯ ಪೌಂಡೇಶನ್ನಿಂದ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಸೌದೇನಹಳ್ಳಿ ಗ್ರಾಮವನ್ನು ಆರ್ಥಿಕ ಸರ್ವೇ ಮಾಡಲಾಯಿತು. ಇಡೀ ಗ್ರಾಮದಲ್ಲಿ ವರ್ಷಕ್ಕೆ ₹3.4ಕೋಟಿ ಆದಾಯವಿದೆ. ಆದರೆ, ₹4.7ಕೋಟಿ ಖರ್ಚು ಇದೆ. ಚಿಕ್ಕದಾದ ಗ್ರಾಮವು ಶೇ 75ರಷ್ಟು ಸಾಲದಲ್ಲಿದೆ. ಇದು ಒಂದು ಉದಾರಣೆಯಷ್ಟೇ. ಹೀಗಾಗಿ ಸ್ಥಳೀಯ ಆರ್ಥಿಕಾಭಿವೃದ್ಧಿ ಬಗ್ಗೆ ನಾವು ಹೆಚ್ಚು ಗಮನಹರಿಸಬೇಕಿದೆ ಎಂದರು.

ಟಿಎಪಿಸಿಎಂಎಸ್ ಅಧ್ಯಕ್ಷ ಚಿಕ್ಕಾಡೆ ಗಿರೀಶ್, ನಬಾರ್ಡ್ ಎಜಿಎಂ ಹರ್ಷಿತಾ, ಸಹಕಾರ ಸಂಘಗಳ ಜಿಲ್ಲಾ ರಿಜಿಸ್ಟರ್ ಶೀಲಾ, ತಾಲ್ಲೂಕು ರಿಜಿಸ್ಟರ್ ಎಚ್.ಆರ್.ನಾಗಭೂಷಣ್, ಪುಟ್ಟಣ್ಣಯ್ಯ ಫೌಂಡೇಷನ್ನ ಕಾರ್ಯನಿರ್ವಾಹಕ ನಿರ್ದೇಶಕ ರಣಜಿತ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-40-1606720626

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.