ಪಾಂಡವಪುರ: ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳು 2025–26ನೇ ಸಾಲಿನಲ್ಲಿ ತೆರಿಗೆ (ಡಿಸಿಬಿ) ವಸೂಲಾತಿಯಲ್ಲಿ ಶೇ 108ರಷ್ಟು ಪ್ರಗತಿ ಸಾಧಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಈಚೆಗೆ ಪಾಂಡವಪುರ ತಾ.ಪಂ. ಇಒ ಎಂ.ಎಸ್.ವೀಣಾ ಅವರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಿದ್ದಾರೆ.

2025ರ ಏ. 1ರಿಂದ ಮಾರ್ಚ್ 31ರವರೆಗೆ ಪಾಂಡವಪುರ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ತೆರಿಗೆ ವಸೂಲಾತಿಯಲ್ಲಿ (ಡಿಸಿಬಿ) ಶೇ 100 ಗುರಿ ವಿಧಿಸಲಾಗಿತ್ತಾದರೂ ತಾಲ್ಲೂಕಿನ ಪಿಡಿಒಗಳು, ಕಾರ್ಯದರ್ಶಿಗಳು ಹಾಗೂ ಬಿಲ್ ಕಲೆಕ್ಟರ್ಗಳು ಒಗ್ಗೂಡಿ ಹೆಚ್ಚಿನ ರೀತಿಯಲ್ಲಿ ಶ್ರಮ ವಹಿಸಿ ತೆರಿಗೆ ವಸೂಲಿ ಮಾಡಿದ್ದು, ಜಿಲ್ಲೆಗೆ ಪಾಂಡವಪುರ ತಾಲ್ಲೂಕು ಪ್ರಥಮ ಸ್ಥಾನದಲ್ಲಿತ್ತು. ಹೀಗಾಗಿ ತಾಲ್ಲೂಕಿನ ಪರವಾಗಿ ತಾ.ಪಂ. ಇಒ ಎಂ.ಎಸ್.ವೀಣಾ ಅವರಿಗೆ ಅಭಿನಂದನಾ ಪತ್ರ ನೀಡಲಾಗಿದೆ.

ಈ ವೇಳೆ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ಎಚ್.ಟಿ.ಮಂಜು, ಗಣಿಗ ರವಿಕುಮಾರ್ ಗೌಡ, ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ವಿಧಾನ ಪರಿಷತ್ತಿನ ಸದಸ್ಯ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಕುಮಾರ, ಜಿ.ಪಂ. ಸಿಇಒ ಕೆ.ಆರ್.ನಂದಿನಿ, ಉಪ ಕಾರ್ಯದರ್ಶಿ (ಡಿಎಸ್–1) ಶಿವಲಿಂಗಯ್ಯ ಮತ್ತು ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

‘2025–26ನೇ ಸಾಲಿನಲ್ಲಿ ತೆರಿಗೆ ವಸೂಲಾತಿಗೆ ಜಿಲ್ಲಾ ಪಂಚಾಯಿತಿ ಶೇ 100ರಷ್ಟು ಗುರಿ ನಿಗದಿಪಡಿಸಲಾಗಿತ್ತು. ಆದರೆ, ಪಾಂಡವಪುರ ತಾಲ್ಲೂಕಿನ ಎಲ್ಲ 24 ಗ್ರಾಮ ಪಂಚಾಯಿತಿ ಪಿಡಿಒಗಳ ತೆರಿಗೆ ವಸೂಲಾತಿಗಾಗಿ ಹೆಚ್ಚಿನ ಆಸಕ್ತಿ ವಹಿಸಿದ್ದರು. ಇದರ ಪರಿಣಾಮವಾಗಿ ಶೇ 108ರಷ್ಟು ಗುರಿ ಸಾಧನೆ ಮಾಡುವ ಮೂಲಕ ಮಂಡ್ಯ ಜಿಲ್ಲೆಯಲ್ಲಿಯೇ ಪಾಂಡವಪುರ ತಾಲ್ಲೂಕು ಪ್ರಥಮ ಸ್ಥಾನ ಪಡೆದುಕೊಂಡಿದೆ. ಎಲ್ಲಾ ಪಿಡಿಒಗಳು ಅಭಿನಂದನಾರ್ಹರು’ ಎಂದು ತಾ.ಪಂ.ಇಒ ಎಂ.ಎಸ್.ವೀಣಾ ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-40-253058898

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.