ಪಾಂಡವಪುರ: ಕುರುಬರ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಎಂ.ಎಲ್.ಸುರೇಶ್ ಅವರನ್ನು ಅಡ್ಡಗಟ್ಟಿ ಮಸಿ ಬಳಿದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವಮಾನಿಸಿರುವುದು ಖಂಡನೀಯ ಎಂದು ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಹಾರೋಹಳ್ಳಿ ಡಿ.ಹುಚ್ಚೇಗೌಡ ಹೇಳಿದರು.

ಪಟ್ಟಣದಲ್ಲಿ ಶನಿವಾರ ನಡೆದ ತಾಲ್ಲೂಕು ಕುರುಬ ಸಮಾಜದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಾ.26ರಂದು ಆಯೋಜಿಸಲಾಗಿದ್ದ ಜಿಲ್ಲಾ ಘಟಕದ ಸಭೆಗೆ ಅಧ್ಯಕ್ಷ ಸುರೇಶ್ ಬಂದಾಗ ಈ ಘಟನೆ ನಡೆದಿದ್ದು, ಇದು ಕುರುಬ ಸಮಾಜಕ್ಕೆ ಅಗೌರವ ತೋರುವ ಕೆಲಸವಾಗಿದೆ. ಕೃತ್ಯದಲ್ಲಿ ಸಂಘದ ಕೆಲ ನಿರ್ದೇಶಕರ ಹುನ್ನಾರ ಕೂಡ ನಡೆದಿದೆ. ಪಾಲ್ಗೊಂಡಿದ್ದ ಕೆಲ ಯುವಕರು ಮೇಲೆ ಪೊಲೀಸ್ ಠಾಣೆಯಲ್ಲಿ ಚಾರ್ಜ್ ಶೀಟ್ ಇದೆ. ಒಂದು ವೇಳೆ ಅಧ್ಯಕ್ಷ ಅವ್ಯವಹಾರ ನಡೆಸಿದ್ದರೆ, ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.

ಸಂಘದ ಜಿಲ್ಲಾ ಸಮಿತಿ ಉಪಾಧ್ಯಕ್ಷ ಬಿ.ಕೆ.ರೇವಣ್ಣ ಮಾತನಾಡಿ, ಸಂಘದಲ್ಲಿ ಅವ್ಯವಹಾರ ನಡೆದಿದ್ದರೆ, ಆಡಿಟ್ ವರದಿ ಪರಿಶೀಲಿಸಿ, ಕಾನೂನು ಹೋರಾಟ ಮಾಡಲಿ ಎಂದು ಸಲಹೆ ನೀಡಿದರು. ತಾಲ್ಲೂಕು ಗೌರವ ಅಧ್ಯಕ್ಷ ಸಿ.ಸ್ವಾಮೀಗೌಡ, ಕಾರ್ಯದರ್ಶಿ ಹಾಗನಹಳ್ಳಿ ಗೋಪಾಲ್, ಸಹಕಾರ್ಯದರ್ಶಿ ಎಚ್.ಎಮ್.ಸೋಮೇಗೌಡ, ತಾ.ಪಂ.ಮಾಜಿ ಅಧ್ಯಕ್ಷ ಮಾಳಿಗೇಗೌಡ, ಗ್ರಾ.ಪಂ.ಮಾಜಿ ಅಧ್ಯಕ್ಷ ತಮ್ಮೇಗೌಡ, ಮುಖಂಡರಾದ ಜವರೇಗೌಡ, ಎಂ.ಮರಿಗೌಡ, ಹಾರೋಹಳ್ಳಿ ಶಿವಣ್ಣ, ರಾಜಮುಡಿ, ಮುದ್ದಲೋಕೇಶ್, ದೇವರಾಜು, ಕರೀಗೌಡ, ಸ್ವಾಮಿ, ಅಶೋಕ, ಶಿವರಾಮ್, ಈರೇಗೌಡ, ಚಂದ್ರೇಗೌಡ, ಮಲ್ಲೇಶ್, ರಾಜೇಗೌಡ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-40-1500121791

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.