ಪಾಂಡವಪುರ: ತಾಲ್ಲೂಕನ್ನು ಸಾವಯವ ಕೃಷಿ ತಾಲ್ಲೂಕನ್ನಾಗಿ ಮಾರ್ಪಾಡು ಮಾಡಲು ರಾಜ್ಯ ಸರ್ಕಾರವು ಈ ಬಾರಿ ಬಜೆಟ್ನಲ್ಲಿ ಘೋಷಣೆ ಮಾಡಿರುವುದರಿಂದ, ಇದಕ್ಕೆ ಪೂರಕವಾಗಿ ‘ಪಾಂಡವಪುರ ಸಾವಯವ ಸಂತೆ’ ಆಯೋಜಿಸಲಾಗಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಸೋಮವಾರ ಪುಟ್ಟಣ್ಣಯ್ಯ ಫೌಂಡೇಷನ್, ರೈತ ಸಂಘ ಹಾಗೂ ಸಾವಯವ ಬೆಳೆಗಾರರು ಆಯೋಜಿಸಿದ್ದ ‘ಪಾಂಡವಪುರ ಸಾವಯವ ಸಂತೆ–ವಿಷಮುಕ್ತ ಆಹಾರ’ಗೆ ಚಾಲನೆ ನೀಡಿ ಮಾತನಾಡಿ, ಪಟ್ಟಣದಲ್ಲಿ 15 ದಿನಗಳಿಗೊಮ್ಮೆ ಸಾವಯವ ಸಂತೆ ನಡೆಯಲಿದೆ ಎಂದರು.

‘ರಾಸಾಯನಿಕ ಬಳಕೆಯಿಂದ ಬೆಳೆದ ತರಕಾರಿ, ಸೊಪ್ಪು, ಹಣ್ಣು, ಅಕ್ಕಿ, ರಾಗಿ, ದ್ವಿದಳ ಧಾನ್ಯಗಳು ಸೇರಿದಂತೆ ಆಹಾರ ಪದಾರ್ಥಗಳಿಂದ ರೋಗ ಉಲ್ಬಣಿಸುತ್ತಿರುವುದು ತಮಗೆಲ್ಲ ತಿಳಿದಿರುವ ವಿಚಾರ, ಅಡುಗೆ ಎಣ್ಣೆ ತಯಾರಿಕೆಗೆ ಕೂಡ ವೆಸ್ಟ್ ವೈಟ್ ಪೆಟ್ರೋಲ್ ಬಳಸಲಾಗುತ್ತಿದೆ. ಹೀಗಾಗಿ ಆರೋಗ್ಯ ಕಡೆ ನಾವೆಲ್ಲರೂ ಗಮನಹರಿಸಬೇಕಿದೆ. ವಿಷಮುಕ್ತ ಆಹಾರ ಸೇವನೆ ಮಾಡಿದರಷ್ಟೇ ಆರೋಗ್ಯವಂತರಾಗಿರಲು ಸಾಧ್ಯ. ಹಾಗಾಗಿ ಸಾಧ್ಯವಾದಷ್ಟು ಸಾವಯವ, ನೈಸರ್ಗಿಕ ಕೃಷಿ ಉತ್ಪನ್ನಗಳನ್ನು ಬಳಕೆ ಮಾಡಬೇಕಿದೆ’ ಎಂದರು.

ಸಾವಯವ ರೈತ ಸುಂಕಾತೊಣ್ಣೂರು ದೇವೇಗೌಡ ಮಾತನಾಡಿ, ‘ದೇಶದಲ್ಲಿ ಹಸಿರು ಕ್ರಾಂತಿಯಿಂದಾಗಿ ಆಹಾರದ ಉತ್ಪನ್ನದಲ್ಲಿ ಹೆಚ್ಚಳ ಸಾಧಿಸಿತು ನಿಜ. ಆದರೆ, ಅತಿ ಹೆಚ್ಚು ರಾಸಾಯನಿಕ ಬಳಕೆಯಿಂದಾಗಿ ವಿಷಯುಕ್ತ ಆಹಾರ ಉತ್ಪಾದನೆಯಾಗುತ್ತಿದೆ. ಇದರಿಂದಾಗಿ ರೋಗರುಜಿನಗಳು ಉಲ್ಪಣೆಯಾಗಿ ಸಾವುನೋವು ಸಂಭವಿಸುತ್ತಿವೆ. ಹಾಗಾಗಿ ನಮಗೆ ಸಾವಯವ ಕೃಷಿ ಉತ್ಪನ್ನದ ಆಹಾರ ಪದಾರ್ಥಗಳನ್ನು ಬಳಸುವುದ ಅಗತ್ಯ ಮತ್ತು ಅನೀವಾರ್ಯವಾಗಿದೆ’ ಎಂದರು.

ಸಂತೆಯಲ್ಲಿ ಸಾವಯವ ಮತ್ತು ನೈಸರ್ಗಿಕ ಕೃಷಿ ಉತ್ಪನ್ನಗಳಾದ ಬೆಂಡೆಕಾಯಿ, ಬದನೆಕಾಯಿ, ಕ್ಯಾರೆಟ್, ಬಿಟ್ರೂಟ್, ಹಿರೇಕಾಯಿ, ಸವತೆಕಾಯಿ, ಸೊಪ್ಪು, ಗಾಣದ ಅಡುಗೆ ಎಣ್ಣೆ, ದೇಸಿ ಅಕ್ಕಿ, ಹಲಸಿನ ಹಣ್ಣು, ಮಾವು, ಏಲಕ್ಕಿ ಬಾಳೆ ಹಣ್ಣು ಸೇರಿದಂತೆ ಹಲವು ಉತ್ಪನ್ನಗಳು ಸಂತೆಯಲ್ಲಿ ಜನರು ಖರೀದಿ ಮಾಡಿದರು.

ಸಾವಯವ ರೈತರಾದ ಮರಿದೇಸಿಗೌಡ ಕೆ.ಎಂ.ದೊಡ್ಡಿಗೌಡ, ಕ್ಯಾತನಹಳ್ಳಿ ಬಸವರಾಜು, ಕುಮಾರ್, ಸುಂಕಾತೊಣ್ಣೂರು ದೇವೇಗೌಡ, ಸುನೀಲ್, ಶ್ಯಾದನಹಳ್ಳಿ ಆನಂದ್, ಬೆಲವಲ ಫಾರ್ಮಸ್ ಶ್ರೀರಂಗಪಟ್ಟಣ, ಪಾಪೇಗೌಡ ಬೋಳೇನಹಳ್ಳಿ, ಮಂಜುನಾಥ್ ಶಂಭೂನಹಳ್ಳಿ , ಬಿ.ಟಿ.ಕೊಪ್ಪಲು ಸೋಮೇಗೌಡ, ವಳಗೆರೆ ದೇವರಹಳ್ಳಿ ಜಿರಂಜೀವಿ, ಮಲ್ಲಿಗೆರೆ ವೆಂಕಟೇಶ್, ಕ್ಯಾತನಹಳ್ಳಿ ಶ್ರೀನಿವಾಸ್, ಮಡಕೆಪಟ್ಟಣ ರಾಮೇಗೌಡ ಸಾವಯವ ಕೃಷಿ ಉತ್ಪನ್ನಗಳನ್ನು ಸಂತೆಯಲ್ಲಿ ಮಾರಾಟಕ್ಕೆ ಇಟ್ಟಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-40-571166324

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.