ಪಾಂಡವಪುರ: ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ನಿರ್ದೇಶಕರ ಸ್ಥಾನಕ್ಕೆ 7 ಮಂದಿ ಶಿಕ್ಷಕರು ಆಯ್ಕೆಯಾಗಿದ್ದಾರೆ.

7 ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಶಿಕ್ಷಕ ಚಂದ್ರಶೇಖರ್ ತಂಡದಿಂದ 7 ಮಂದಿ ಮತ್ತು ಶಿಕ್ಷಕ ಕೆಂಪೇಗೌಡ ತಂಡದಿಂದ 7 ಮಂದಿ ಚುನಾವಣೆಗೆ ಸ್ಪರ್ಧಿಸಿದ್ದರು. ಚಂದ್ರಶೇಖರ್ ತಂಡದ ಬಿ.ವಿ.ಕೀರ್ತಿ, ಮಹದೇವಪ್ಪ, ಕೆಂಪೇಗೌಡ, ಕೆ.ಸಿ.ಸುಮಿತ್ರಾ, ನಾಗರತ್ನಮ್ಮ ಆಯ್ಕೆಯಾದರು. ಕೆಂಪೇಗೌಡ ತಂಡದಿಂದ ಎಸ್.ಎನ್.ಕೆಂಪೇಗೌಡ, ಎಂ.ಡಿ.ಕುಮಾರ್ ಆಯ್ಕೆಯಾದರು. ಚಂದ್ರಶೇಖರ್ ತಂಡದವರು 7 ಸ್ಥಾನಕ್ಕೆ 5 ಸ್ಥಾನವನ್ನು ಪಡೆದು ಮೇಲುಗೈ ಸಾಧಿಸಿತು. ಕೆಂಪೇಗೌಡ ತಂಡವು 7 ಸ್ಥಾನಕ್ಕೆ 2 ಸ್ಥಾನವನ್ನು ಮಾತ್ರ ಪಡೆಯಿತು.

ಕೆ ಆರ್ ಪೇಟೆ: ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆದು ತಡರಾತ್ರಿ ಫಲಿತಾಂಶ ಪ್ರಕಟವಾಯಿತು. ಚುನಾವಣೆಯಲ್ಲಿ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಸಿ. ಕೆ ಶಿವರಾಮೇಗೌಡ ಬಣದ ಸದಸ್ಯರು 9 ಸ್ಥಾನಗಳಲ್ಲಿ ಜಯಗಳಿಸಿ ಆಡಳಿತದ ಚುಕ್ಕಾಣಿ ಹಿಡಿದರು. 15 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಿ . ಕೆ ಶಿವರಾಮೇಗೌಡ ತಂಡದ ಐವರು ಪುರುಷ ಅಭ್ಯರ್ಥಿಗಳು ನಾಲ್ವರು ಮಹಿಳಾ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ, ಶಿಕ್ಷಕ ಪದ್ಮೇಶ್ ತಂಡದಲ್ಲಿ ಐವರು ಪುರುಷ ಅಭ್ಯರ್ಥಿಗಳು ಮತ್ತು ಒಬ್ಬರು ಮಹಿಳಾ ಅಭ್ಯರ್ಥಿಗಳು ಜಯಗಳಿಸಿದರು.

ವಿಜೇತರು:ಸಿ. ಕೆ. ಶಿವರಾಮೇಗೌಡ, ಎಸ್.ಆರ್.ಆನಂದ್ ಕುಮಾರ್, ಎಸ್. ಕೆ. ರವಿಕುಮಾರ್, ಕೆ.ಕೆ. ಶಿವಲಿಂಗೇಗೌಡ, ಜಿ. ಕೆ. ಯೋಗೇಶ್, ಎನ್. ಅನಿತಾ, ಕುಮಾರಿ, ಕೆ. ಆರ್, ಅನಿತಾ, ಮೋಹನಕುಮಾರಿ , ರಾಜೇನಹಳ್ಳಿ ಪದ್ಮೇಶ್, ಪೂರ್ಣ ಚಂದ್ರ ತೇಜಸ್ವಿ, ಎಸ್.ಎಲ್. ಧರ್ಮಪ್ಪ, ಸಿ.ಎಸ್.ಅಶೋಕ್, ಜಿ ಎಸ್. ಮಂಜು ಮತ್ತು ಇಂದ್ರಾಣಿ ಜಯಗಳಿಸಿದರು. ಭೇಟಿ ಮಾಡಿದ ವಿಜೇತ ತಂಡದ ಸದಸ್ಯರನ್ನು ಅಭಿನಂದಿಸಿದ ಶಾಸಕ ಎಚ್.ಟಿ.ಮಂಜು ಅಭಿನಂದಿಸಿದರು.

ಶ್ರೀರಂಗಪಟ್ಟಣ: ಕರ್ನಾಟ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಕಾರ್ಯಕಾರಿ ಸಮಿತಿಯ 7 ನಿರ್ದೇಶಕರ ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ 12 ಅಸಿಂಧು (ಕುಲಗೆಟ್ಟ ಮತ) ಮತಗಳು ಚಲಾವಣೆಯಾಗಿವೆ.

ಶಿಕ್ಷಕರಿಗೆ ಮತ ಹಾಕಿದ 10 ಹಾಗೂ ಶಿಕ್ಷಕಿಯರಿಗೆ ಮತ ಹಾಕಿ 2 ಮತಗಳು ಅಸಿಂಧು ಆಗಿವೆ. ಏಳು ನಿರ್ದೇಶಕ ಸ್ಥಾನಗಳ ಪೈಕಿ 5 ಪುರುಷ ನಿರ್ದೇಶಕ ಸ್ಥಾನಗಳಿಗೆ 10 ಮಂದಿ ಹಾಗೂ ಶಿಕ್ಷಕಿಯರಿಗೆ ಮೀಸಲಾದ 2 ಸ್ಥಾನಗಳಿಗೆ 4 ಶಿಕ್ಷಕಿಯರು ಸ್ಪರ್ಧಿಸಿದ್ದರು.

‘337 ಮತದಾರರ ಪೈಕಿ 12 ಮಂದಿ ನಿಗದಿಗಿಂತ ಹೆಚ್ಚು ಸ್ಪರ್ಧಿಗಳಿಗೆ ಮತ ಹಾಕಿದ್ದು, ಅವರ ಮತಗಳು ಅಸಿಂಧುಗೊಂಡಿವೆ. ಒಟ್ಟು 337 ಮತದಾರರ ಪೈಕಿ 327 ಮಂದಿ ಮತ ಚಲಾಯಿಸಿದ್ದಾರೆ’ ಎಂದು ಚುನಾವಣಾಧಿಕಾರಿ ಬಿ.ವಿ. ನಂದೀಶ್ ತಿಳಿಸಿದರು. ಕಾರ್ಯಕಾರಿ ಸಮಿತಿಯ ನಿರ್ದೇಶಕ ಸ್ಥಾನಗಳಿಗೆ ಮಹೇಶ, ಡಿ.ಎನ್. ಲೋಕೇಶ್, ಚಂದ್ರು, ಎಚ್.ಟಿ. ರಾಜಶೇಖರ್, ರಾಘವೇಂದ್ರ, ಮಂಜುಳಾ ಜಿ.ಬಿ ಹಾಗೂ ಭಾಗ್ಯಮ್ಮ ಪಿ.ಬಿ ಚುನಾಯಿತರಾಗಿದ್ದಾರೆ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-40-1633671466

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.