ಆದಿಚುಂಚನಗಿರಿ (ಮಂಡ್ಯ): ನಾಥ ಪಂಥದ ಶೈವ ಮಠವಾದ ಆದಿಚುಂಚನಗಿರಿಯ 71ನೇ ಪೀಠಾಧಿಪತಿ ಬಾಲಗಂಗಾಧರನಾಥ ಸ್ವಾಮೀಜಿಯವರ ಗದ್ದುಗೆಯುಳ್ಳ ‘ಶ್ರೀಗುರು ಭೈರವೈಕ್ಯ ಮಂದಿರ’ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಲೋಕಾರ್ಪಣೆಗೊಳಿಸಿ, ನವ ಸಂಕಲ್ಪಗಳನ್ನು ತೊಡುವಂತೆ ಜನರಿಗೆ ಕರೆ ನೀಡಿದರು.

‘ಕರ್ನಾಟಕದ ಎಲ್ಲ ಸಹೋದರ, ಸಹೋದರಿಯರಿಗೆ ನನ್ನ ನಮಸ್ಕಾರಗಳು’ ಎಂದು ಕನ್ನಡದಲ್ಲೇ ಭಾಷಣ ಶುರು ಮಾಡಿದ ಅವರು, ‘ಜಲ ಸಂರಕ್ಷಣೆ ಮಾಡುವುದು, ತಾಯಿಯ ಹೆಸರಿನಲ್ಲಿ ಸಸಿ ನೆಡುವುದು, ಸ್ವಚ್ಛತೆ ಕಾಪಾಡುವುದು, ಸ್ವದೇಶಿ ಮತ್ತು ಆತ್ಮನಿರ್ಭರಕ್ಕೆ ಒತ್ತು ನೀಡುವುದು, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು, ರಾಸಾಯನಿಕಮುಕ್ತ ಕೃಷಿಯಲ್ಲಿ ತೊಡಗುವುದು, ಆರೋಗ್ಯ, ಯೋಗ–ಕ್ರೀಡೆ–ಫಿಟ್ನೆಸ್ಗೆ ಒತ್ತು ನೀಡುವುದು ಹಾಗೂ ಸೇವಾ ಭಾವನೆ ಬೆಳೆಸಿಕೊಳ್ಳುವ ನವ ಸಂಕಲ್ಪಗಳನ್ನು ತೊಡಬೇಕು’ ಎಂದರು.

‘ಮಠವು ಅನ್ನ, ಅಕ್ಷರ, ಆರೋಗ್ಯ, ಅಧ್ಯಾತ್ಮ, ಆಶ್ರಯ, ಅರಣ್ಯ, ಆಕಳು, ಅನುಕಂಪ ಮತ್ತು ಅನುಬಂಧ ಎಂಬ ನವ ಸಿದ್ಧಾಂತಗಳಡಿ ಕೆಲಸ ಮಾಡುತ್ತಿದೆ. ಭೈರವೈಕ್ಯ ಮಂದಿರ ಉದ್ಘಾಟನೆ, ಸಂತರ ಸಾನ್ನಿಧ್ಯ ಮತ್ತು ಜನರ ದರ್ಶನ ಮಾಡಲು ಸಿಕ್ಕ ಈ ಅಪೂರ್ವ ಅನುಭವ ನನ್ನ ಜೊತೆ ಸದಾ ಇರುತ್ತದೆ’ ಎಂದು ಹರ್ಷ ವ್ಯಕ್ತಪಡಿಸಿದರು.

‘ಕರ್ನಾಟಕವು ತತ್ವಜ್ಞಾನ ಮತ್ತು ತಂತ್ರಜ್ಞಾನದಿಂದ ಸಮೃದ್ಧಿಯಾಗಿದೆ. ಮಠವು ತತ್ವಜ್ಞಾನ, ಅಧ್ಯಾತ್ಮ, ನೈತಿಕ ಮೌಲ್ಯಗಳ ಮೂಲಕ ಸಮಾಜಕ್ಕೆ ದೀಕ್ಷೆ ನೀಡಿದೆ. ಮಹಾನ್ ಸಂತ ಮತ್ತು ವಿಭೂತಿ ಪುರುಷರಾದ ಬಾಲಗಂಗಾಧರನಾಥ ಶ್ರೀಗಳು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಗ್ರಾಮೀಣ ಮತ್ತು ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಿದ್ದಾರೆ. ಜೊತೆಗೆ, ಗುಣಮಟ್ಟದ ಆರೋಗ್ಯ ಸೇವೆಯನ್ನೂ ಕಲ್ಪಿಸಿದ್ದಾರೆ’ ಎಂದು ಶ್ಲಾಘಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಮೋದಿಯವರು ಮೊದಲಿಗೆ ಗುರು ಗೋರಖ್ನಾಥರು ತಪಸ್ಸು ಮಾಡಿದ್ದ ಜ್ವಾಲಾಪೀಠದ (ಉರಿಗದ್ದುಗೆ) ದರ್ಶನ ಪಡೆದರು. ಶ್ರೀಗುರು ಭೈರವೈಕ್ಯ ಮೂಲ ಮಂದಿರದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿಯ ಮೂರ್ತಿಗೆ ಪೂಜೆ ಸಲ್ಲಿಸಿ, ಮಂದಿರವನ್ನು ಉದ್ಘಾಟಿಸಿದರು. ನಂತರ ಬಿ.ಜಿ.ಎಸ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ‘ಭಕ್ತ ಸಂಗಮ’ ವೇದಿಕೆಗೆ ಬರುತ್ತಿದ್ದಂತೆ ನೆರೆದ ಸಾವಿರಾರು ಮಂದಿ ಹರ್ಷೋದ್ಗಾರ ಮಾಡಿದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರೊಂದಿಗೆ ಉಭಯಕುಶೋಲಪರಿ ನಡೆಸಿ, ‘ಸೌಂದರ್ಯಲಹರೀ ಮತ್ತು ಶಿವಮಹಿಮ್ನಃ ಸ್ತೋತ್ರಮ್’ ಗ್ರಂಥವನ್ನು ಇದೇ ಸಂದರ್ಭದಲ್ಲಿ ಮೋದಿ ಬಿಡುಗಡೆ ಮಾಡಿದರು.

ನವಿಲಿನ ಸ್ಮರಣಿಕೆ; ಮೋದಿ ಸಂತಸ

ಶ್ರೀಮಠದ ವತಿಯಿಂದ ನಿರ್ಮಲಾನಂದನಾಥ ಸ್ವಾಮೀಜಿ ಅವರು ಪ್ರಧಾನಿ ಮೋದಿ ಅವರಿಗೆ ಶಾಲು ಹೊದಿಸಿ ರುದ್ರಾಕ್ಷಿ ಹಾರ ಹಾಕಿ ನವಿಲು ಪ್ರತಿಕೃತಿಯ ಸ್ಮರಣಿಕೆ ನೀಡಿ ಸನ್ಮಾನಿಸಿದರು. ‘ರಾಷ್ಟ್ರೀಯ ಪಕ್ಷಿ ನವಿಲು ಶಾಂತಿ ಮತ್ತು ಸೌಂದರ್ಯದ ಸಂಕೇತ. ಭಗವಾನ್ ಸುಬ್ರಹ್ಮಣ್ಯ ಸ್ವಾಮಿಯ ವಾಹನ. ನನ್ನ ಸರ್ಕಾರಿ ವಸತಿ ಗೃಹದಲ್ಲಿ ತುಂಬಾ ನವಿಲುಗಳಿವೆ. ಅವುಗಳೊಂದಿಗೆ ಗೆಳೆತನ ಬೆಳೆದಿದೆ. ಆದಿಚುಂಚನಗಿರಿಯ ‘ಮಯೂರವನ’ದಲ್ಲಿ ನವಿಲುಗಳ ಸಂರಕ್ಷಣೆ ಮಾಡುತ್ತಿರುವುದು ಸಂತಸ ತಂದಿದೆ’ ಎಂದು ಮೋದಿ ಹೇಳಿದರು.

‘ದೇವೇಗೌಡರಿಂದ ರಾಗಿಮುದ್ದೆ ಲೋಕಪ್ರಿಯ’

‘ರಾಗಿಮುದ್ದೆ ಲೋಕಪ್ರಿಯವಾಗಲು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರೇ ಕಾರಣ. ಊಟದಲ್ಲಿ ಸಿರಿಧಾನ್ಯ ಹೆಚ್ಚು ಬಳಸುವುದರಿಂದ ಬೊಜ್ಜಿನ ಸಮಸ್ಯೆಯಿಂದ ಪಾರಾಗಬಹುದು. ಇಲ್ಲಿನ ಪ್ರಧಾನ ಬೆಳೆ ಕಬ್ಬು ಆಗಿರುವುದರಿಂದ ಮಂಡ್ಯವನ್ನು ‘ಸಕ್ಕರೆ ನಗರ’ ‘ಮಧುರ ಮಂಡ್ಯ’ ಎಂದು ಕರೆಯುತ್ತಾರೆ. ಇಲ್ಲಿನ ಜನರ ಮಾತಿನಲ್ಲೂ ಸಿಹಿ ಕಾಣುತ್ತದೆ. ಸ್ವಾಗತಿಸುವ ರೀತಿ ಹೃದಯ ಮುಟ್ಟುತ್ತದೆ’ ಎಂದು ಪ್ರಧಾನಿ ಬಣ್ಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.