ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರ‍್ಯಾಂಬೊ’ ಸಾವಿಗೆ ಕಂಬನಿ ಮಿಡಿದ ಪೊಲೀಸರು

Last Updated 26 ಆಗಸ್ಟ್ 2020, 15:25 IST
ಅಕ್ಷರ ಗಾತ್ರ

ಮಂಡ್ಯ: ಸ್ಫೋಟಕ ವಸ್ತುಗಳನ್ನು ಪತ್ತೆ ಮಾಡುವಲ್ಲಿ ಪೊಲೀಸರಿಗೆ ಸಹಾಯ ಮಾಡುತ್ತಿದ್ದ 14 ವರ್ಷ ವಯಸ್ಸಿನ ನಾಯಿ ರ್‍ಯಾಂಬೊ ಬುಧವಾರ ಮೃತಪಟ್ಟಿತು. ಸಕಲ ಸರ್ಕಾರಿ ಗೌರವದೊಂದಿಗೆ ನಾಯಿಯ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಲ್ಯಾಬ್ರೇಡರ್‌ ತಳಿಯ ಈ ಗಂಡುನಾಯಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸರ ಜೊತೆ ಕರ್ತವ್ಯ ನಿರ್ವಹಿಸುತ್ತಿತ್ತು. 2007ರಲ್ಲಿ ಹುಟ್ಟಿದ ನಾಯಿಯನ್ನು 2008ರಲ್ಲಿ ಮಂಡ್ಯಕ್ಕೆ ತರಲಾಗಿತ್ತು. ಆಗಿನಿಂದಲೂ ಪೊಲೀಸರ ಜೊತೆ ಉತ್ತಮ ಬಾಂಧವ್ಯ ಹೊಂದಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಾಯಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಕಾರಣ ಪೊಲೀಸ್‌ ಸಿಬ್ಬಂದಿ ಸಿಬ್ಬಂದಿ ಕಂಬನಿ ಮಿಡಿದರು.

‘ರ‍್ಯಾಂಬೊ ನೀಡಿರುವ ಸೇವೆಯನ್ನು ಪೊಲೀಸ್‌ ಇಲಾಖೆ ಸದಾ ನೆನೆಯುತ್ತದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT