ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: 20,557 ಮತ ಪಡೆದ ಸುಮಲತಾ ಹೆಸರಿನ ಮೂವರು; ಲಾಭ ಯಾರಿಗಾಯ್ತು?

Last Updated 23 ಮೇ 2019, 20:13 IST
ಅಕ್ಷರ ಗಾತ್ರ

ಮಂಡ್ಯ:ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜಿದ್ದ ಜಿದ್ದಿನ ಪೈಪೋಟಿಯಲ್ಲಿ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ, ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಕಡಿಮೆ ಮತಗಳ ಅಂತರದಲ್ಲಿ ಮುನ್ನಡೆ ಹಿನ್ನಡೆ ಪಡೆಯುತ್ತಾಸಾಗಿದ್ದಾರೆ.

ಈ ಮಧ್ಯೆ ಪಕ್ಷೇತ್ರ ಅಭ್ಯರ್ಥಿ ಸುಮಲತಾ ಅವರನ್ನು ಬಿಟ್ಟು ಒಂದೇ ಹೆಸರಿನ ಇತರ ಮೂವರು ಸುಮಲತಾ ಅವರು ಒಟ್ಟು 20,557 ಮತಗಳನ್ನು(ಸಂಜೆ 7ರ ವರೆಗಿನ ಮಾಹಿತಿ ಪ್ರಕಾರ) ಪಡೆದಿದ್ದಾರೆ.

ಕ್ರಮ ಸಂಖ್ಯೆ 19ರ ಸುಮಲತಾ 8,898 ಮತ ಪಡೆದಿದ್ದಾರೆ.

ಕ್ರಮ ಸಂಖ್ಯೆ 21ರ ಎಂ. ಸುಮಲತಾ 8,542 ಮತ ಪಡೆದಿದ್ದಾರೆ.

ಕ್ರಮ ಸಂಖ್ಯೆ 22ರ ಸುಮಲತಾ 3,117 ಮತ ಪಡೆದಿದ್ದಾರೆ.

ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಅವರ ಕ್ರಮ ಸಂಖ್ಯೆ 20. ಈ ಕ್ರಮ ಸಂಖ್ಯೆಯ ಮೇಲೆ ಮತ್ತು ಕೆಳಗೆ ಮೂವರು ಸುಮಲತಾರಹೆಸರುಗಳು ಇವಿಎಂನಲ್ಲಿ ಇದ್ದವು.

ಜೆಡಿಎಸ್‌ ರಾಷ್ಟ್ರೀಯ ಪಕ್ಷವಾದ್ದರಿಂದ ನಿಖಿಲ್‌ ಅವರ ಹೆಸರು ಕ್ರಮ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿತ್ತು.

ಸಂಜೆ 7ಕ್ಕೆ ಲಭ್ಯವಾದ ಮಾಹಿತಿ ಪ್ರಕಾರ ಕೆ.ನಿಖಿಲ್ 5,76,545 ಮತಎ.ಸುಮಲತಾ 7,02,167 ಮತ ಪಡೆದಿದ್ದು, ಸುಮಲತಾ 1,25,620 ಮತ ಮುನ್ನಡೆಯಲ್ಲಿದ್ದರು. ಕೊನೇಯ ಒಂದೆರಡು ಸುತ್ತು ಬಾಕಿ ಇತ್ತು.

ಮಧ್ಯಾಹ್ನ 1.10ರ ವರೆಗಿನ ಮಾಹಿತಿ ಪ್ರಕಾರಪಡೆದಿದ್ದ ಮತ

ಕ್ರಮ ಸಂಖ್ಯೆ 19ರ ಸುಮಲತಾ 3201 ಮತ ಪಡೆದಿದ್ದಾರೆ.

ಕ್ರಮ ಸಂಖ್ಯೆ 21ರ ಎಂ. ಸುಮಲತಾ 3007 ಮತ ಪಡೆದಿದ್ದಾರೆ.

ಕ್ರಮ ಸಂಖ್ಯೆ 22ರ ಸುಮಲತಾ 1050 ಮತ ಪಡೆದಿದ್ದಾರೆ.

ಮಧ್ಯಾಹ್ನ 1.12ಕ್ಕೆ ಲಭ್ಯವಾದ ಮಾಹಿತಿ ಪ್ರಕಾರ ಕೆ.ನಿಖಿಲ್ 222638, ಎ.ಸುಮಲತಾ 2341116 ಮತ ಪಡೆದಿದ್ದು, ಸುಮಲತಾ 11.478 ಮುನ್ನಡೆಯಲ್ಲಿದ್ದರು.

ಮಧ್ಯಾಹ್ನ 12.50ಕ್ಕೆ ಲಭ್ಯವಾದ ಮಾಹಿತಿ ಪ್ರಕಾರ ಕೆ.ನಿಖಿಲ್ 2,01,474, ಎ.ಸುಮಲತಾ 2,10,419 ಮತ ಪಡೆದಿದ್ದು, ಸುಮಲತಾ 8,945 ಮುನ್ನಡೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT