ಸೋಮವಾರ, ಮಾರ್ಚ್ 8, 2021
24 °C

ಗಣಂಗೂರು: ಸಂಭ್ರಮದ ಪೂರ್ಣಕುಂಭ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ತಾಲ್ಲೂಕಿನ ಗಣಂಗೂರು ಗ್ರಾಮದಲ್ಲಿ ಶ್ರೀರಾಮ ದೇವರ ವಿಗ್ರಹ ಪ್ರತಿಷ್ಠಾಪನೆ ಹಾಗೂ ಗ್ರಾಮ ದೇವತೆ ಪುನರ್‌ ಪ್ರತಿಷ್ಠಾಪನೆ ನಿಮಿತ್ತ ಭಾನುವಾರ ಪೂರ್ಣ ಕುಂಭಗಳ ಮೆರವಣಿಗೆ ಸಡಗರ, ಸಂಭ್ರಮದಿಂದ ನಡೆಯಿತು.

‌ಊರಿನ ಸಮೀಪದ ಐತಿಹಾಸಿಕ ಕೊಳದಿಂದ ನೂರಾರು ನಾರಿಯರು ಪೂರ್ಣಕುಂಭವನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಫರ್ಲಾಂಗು ದೂರದವರೆಗೆ ಮೆರವಣಿಗೆ ನಡೆಯಿತು.

ವೀರಗಾಸೆ, ಚರ್ಮ ವಾದ್ಯ ಕಲಾವಿದರು ಪೂರ್ಣ ಕುಂಭಗಳ ಮುಂಚೂಣಿಯಲ್ಲಿ ಸಾಗಿದರು. ಮಂಗಳ ವಾದ್ಯಗಳು ಮೊಳಗಿದವು. ಬೆಂಗಳೂರು– ಮೈಸೂರು ಹೆದ್ದಾರಿ ಹಾಗೂ ಗ್ರಾಮದ ಹೃದಯ ಭಾಗದಲ್ಲಿ ಆಕರ್ಷಕ ಕಲಾ ಪ್ರದರ್ಶನ ನಡೆಯಿತು.

ಇದಕ್ಕೂ ಮುನ್ನ ಗಂಗಾ ಪೂಜೆ, ಗಣಪತಿ ಪೂಜೆ, ಪುಣ್ಯಾಹ, ಪಂಚಗವ್ಯ, ವಾಸ್ತು ಹೋಮ, ಗಣಹೋಮ, ಜಲಾಧಿವಾಸ, ಶಯನಾಧಿವಾಸ ಇತರ ಕೈಂಕರ್ಯಗಳು ಜರುಗಿದವು.

ಸೋಮವಾರ ಬ್ರಾಹ್ಮೀ ಮುಹೂರ್ತದಲ್ಲಿ, ವೈದಿಕರಾದ ಮಹಾಲಿಂಗಶಾಸ್ತ್ರಿ ಅವರ ನೇತೃತ್ವದಲ್ಲಿ ಮುಂಜಾನೆ 5 ಗಂಟೆಗೆ ಪೀಠ ಪೂಜೆ, ವಿಗ್ರಹ ಪ್ರತಿಷ್ಠಾಪನೆ, ಅಷ್ಠಬಂಧ, ಪ್ರಾಣ ಪ್ರತಿಷ್ಠಾಪನೆ, ಪ್ರಧಾನ ಕಲಸ ಆರಾಧನೆ, ನವಗ್ರಹ ಹೋಮ, ಚಂಡಿಕಾ ಹೋಮ, ಮೃತ್ಯುಂಜಯ ಹೋಮ, ಶ್ರೀರಾಮ ಮತ್ತು ಮಾರಮ್ಮ ದೇವಿಗೆ ದರ್ಪಣ ದರ್ಶನ, ಸಹಸ್ರನಾಮ, ಅಷ್ಟೋತ್ತರ, ರಾಜೋಪಚಾರ ಇತರ ಕೈಂಕರ್ಯಗಳು ನಡೆಯಲಿವೆ. ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು