ಮಹಿಳೆಯರ ದೇಗುಲ ಪ್ರವೇಶ: ಪ್ರತಿಭಟನೆ

7

ಮಹಿಳೆಯರ ದೇಗುಲ ಪ್ರವೇಶ: ಪ್ರತಿಭಟನೆ

Published:
Updated:
Prajavani

ಮಂಡ್ಯ: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರು ದುರುದ್ದೇಶದಿಂದ ಪ್ರವೇಶ ಮಾಡಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಶಬರಿಮಲೆ ಕ್ಷೇತ್ರ ಸಂರಕ್ಷಣಾ ಸಮಿತಿ ಕಾರ್ಯಕರ್ತರು ನಗರದ ಅಯ್ಯಪ್ಪಸ್ವಾಮಿ ದೇವಾಲಯದ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಬಿಂದು ಹಾಗು ಕನಕದುರ್ಗಾ ಎಂಬ ಮಹಿಳೆಯರು ಬುಧವಾರ ಮುಸುಕುಧಾರಿಯಾಗಿ ಪ್ರವೇಶ ಮಾಡಿದ್ದಾರೆ. ಮಹಿಳೆಯರ ಪ್ರವೇಶದಲ್ಲಿ ಅಕ್ರಮ ನಡೆದಿದ್ದು, ಕೇರಳದ ಮುಖ್ಯಮಂತ್ರಿ ಪಿಣರಾಜಿ ವಿಜಯನ್ ಅವರು ಹೊಣೆಗಾರಿಕೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಎಚ್.ಆರ್.ಅರವಿಂದ್, ಕಾರ್ಯಕ್ರಮ ಸಂಯೋಜಕರಾದ ಎಸ್.ಶಿವಕುಮಾರ್ ಆರಾಧ್ಯ, ಎಂ.ಸಿ.ವರದರಾಜು, ಮುಖಂಡರಾದ ಎಂ.ಬಿ.ರಮೇಶ್, ಪ್ರಸನ್ನಕುಮಾರ್, ಸಿ.ಟಿ.ಮಂಜುನಾಥ್, ತಮ್ಮಣ್ಣ, ಮಾದರಾಜು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !