ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿತೀಯ ಪಿಯು: 21ನೇ ಸ್ಥಾನದಲ್ಲೇ ಉಳಿದ ಜಿಲ್ಲೆ

ಕಳೆದ ವರ್ಷಕ್ಕಿಂತ ಶೇ 0.74ರಷ್ಟು ಹೆಚ್ಚು, ಮೇಲುಗೈ ಸಾಧಿಸಿದ ಬಾಲಕಿಯರು
Last Updated 14 ಜುಲೈ 2020, 14:50 IST
ಅಕ್ಷರ ಗಾತ್ರ

ಮಂಡ್ಯ: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಕಳೆದ ವರ್ಷ ಪಡೆದಿದ್ದ 21ನೇ ಸ್ಥಾನದಲ್ಲೇ ಉಳಿದಿದೆ. ಕಳೆದ ವರ್ಷ ಶೇ 63.08 ಫಲಿತಾಂಶ ಪಡೆದಿದ್ದರೆ ಈ ವರ್ಷ ಶೇ 63.82 ಫಲಿತಾಂಶ ದಾಖಲಿಸಿದೆ.

ಈ ಬಾರಿ ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ 12, 602 ವಿದ್ಯಾರ್ಥಿಗಳಲ್ಲಿ 80, 42 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ಕಲಾ ವಿಭಾಗದಲ್ಲಿ ಹಾಜರಾಗಿದ್ದ 3,379 ವಿದ್ಯಾರ್ಥಿಗಳಲ್ಲಿ 1,314 (ಶೇ 38.89), ವಾಣಿಜ್ಯ ವಿಭಾಗದಲ್ಲಿ ಹಾಜರಾಗಿದ್ದ 4,979 ವಿದ್ಯಾರ್ಥಿಗಳಲ್ಲಿ 3,431 (ಶೇ 68.91), ವಿಜ್ಞಾನ ವಿಭಾಗದಲ್ಲಿ ಹಾಜರಾಗಿದ್ದ 4,244 ವಿದ್ಯಾರ್ಥಿಗಳಲ್ಲಿ 3,297 (ಶೇ 77.69) ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ.

ಪುನರಾವರ್ತಿತ, ಖಾಸಗಿಯಾಗಿ ಹಾಜರಾದ ಒಟ್ಟು 15,196 ವಿದ್ಯಾರ್ಥಿಗಳಲ್ಲಿ 8,723 (ಶೇ 57.4) ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ.

ಬಾಲಕಿಯರ ಮೇಲುಗೈ: ಪ್ರತಿ ಬಾರಿಯಂತೆ ಈ ವರ್ಷವೂ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆಗೆ ಹಾಜರಾದ ಒಟ್ಟು 8,296 ವಿದ್ಯಾರ್ಥಿನಿಯರಲ್ಲಿ 5,274 ಮಂದಿ ಉತ್ತೀರ್ಣರಾಗಿದ್ದಾರೆ. ಶೇ 63.57ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. 6,900 ಬಾಲಕರಲ್ಲಿ 3449 ಮಂದಿ ಉತ್ತೀರ್ಣರಾಗಿ ಶೇ 49.99ರಷ್ಟು ಸಾಧನೆ ಮಾಡಿದ್ದಾರೆ.

ವಿವಿಧ ಕಾಲೇಜುಗಳ ಸಾಧನೆ: ತಾಲ್ಲೂಕಿನ ರಾಗಿಮುದ್ದನಹಳ್ಳಿಯಲ್ಲಿನ ಕಾವೇರಿ ಎಕ್ಸೆಲ್‌ ಪಿಯು ಕಾಲೇಜು ಶೇ 100 ಫಲಿತಾಂಶ ಪಡೆದಿದೆ.

ಪರೀಕ್ಷೆಗೆ ಹಾಜರಾಗಿದ್ದ 46 ವಿದ್ಯಾರ್ಥಿಗಳಲ್ಲಿ 13 ಅತ್ಯುನ್ನತ ಶ್ರೇಣಿ, 33 ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಎ.ಅಮೃತಾ ಸಿಂಧು, ಎಸ್‌.ಶುಭಪ್ರದಾ 570 (ಶೇ 95), ಎಚ್‌‌.ಎಸ್‌. ಸುಪ್ರೀತ್‌ 563 (ಶೇ 93.8), ಪಿ.ಧನುಶ್ರೀ 551 (ಶೇ 91.8), ಎಂ. ರಕ್ಷಿತಾ, ಎಲ್‌.ಸ್ನೇಹಾ 549 (91.5), ಎಂ.ಎ. ಮದನ್‌ ಆರ್ಯ 543 (ಶೇ 90.5), ಎಸ್‌.ಸ್ಪಂದನಾ 541 (ಶೇ 90.2) ಅಂಕ ಪಡೆದಿದ್ದಾರೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.

ಕಾರ್ಮೆಲ್‌ ಕಾಲೇಜು: ನಗರದ ಕಾರ್ಮೆಲ್‌ ಕಾಲೇಜು ಉತ್ತಮ ಸಾಧನೆ ಮಾಡಿದ್ದು ವಾಣಿಜ್ಯ ವಿಭಾಗದ ಎಚ್‌.ವಿಧಿ (ಶೇ 97.5), ಯಶಿ ಜೈನ್‌ (96.8), ಮೀನಾಕ್ಷಿ (96), ಶೀತಲ್‌ (95.33), ಪೂರ್ಣಿಮಾ (94.33), ಶುಭಶ್ರೀ (95.83) ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಸರ್ಕಾರಿ ಕಾಲೇಜು ಸಾಧನೆ: ಗುತ್ತಲು ಬಡಾವಣೆಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಕಲಾ ವಿಭಾಗದಲ್ಲಿ ಬಿ.ಸಿ.ಸುಜಾತಾ ಶೇ 93, ವಾಣಿಜ್ಯ ವಿಭಾಗದಲ್ಲಿ ಎನ್‌.ಚೈತ್ರಾ ಶೇ 93, ಎನ್‌.ಪುಣ್ಯಾ ಶೇ 92ರಷ್ಟು ಅಂಕ ಗಳಿಸಿದ್ದಾರೆ.

******

ಕಲಾ ವಿಭಾಗದಲ್ಲಿ ಕಳಪೆ ಸಾಧನೆ

ಜಿಲ್ಲೆಯ ಕಲಾ ವಿಭಾಗದ ವಿದ್ಯಾರ್ಥಿಗಳು ಕಳಪೆ ಸಾಧನೆ ತೋರಿದ್ದು ಕೇವಲ ಶೇ 38.89ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಹಾಜರಾದ 3,379 ವಿದ್ಯಾರ್ಥಿಗಳಲ್ಲಿ 1,314 ಮಂದಿ ಉತ್ತೀರ್ಣರಾಗಿದ್ದಾರೆ. 2,102 ಬಾಲಕಿಯರಲ್ಲಿ 544 ಮಂದಿ, 2,347 ಬಾಲಕರಲ್ಲಿ 957 ಮಂದಿ ಉತ್ತೀರ್ಣರಾಗಿದ್ದಾರೆ.

‘ಕಲಾ ವಿಭಾಗದ ಹೆಚ್ಚು ಮಕ್ಕಳು ಉತ್ತೀರ್ಣರಾಗಿದ್ದರೆ ಜಿಲ್ಲೆ ಸ್ಥಾನ ಉತ್ತಮವಾಗಿರುತ್ತಿತ್ತು. ಹೆಚ್ಚು ಮಂದಿ ಅನುತ್ತೀರ್ಣವಾಗಿರುವುದು ನಮಗೂ ಬೇಸರವಾಗಿದೆ. ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಒತ್ತು ನೀಡಬೇಕು’ ಎಂದು ಡಿಡಿಪಿಯು ಗುರುಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT