ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುತಾತ್ಮ ಯೋಧ ಗುರು ಪಾರ್ಥಿವ ಶರೀರ ಮಧ್ಯಾಹ್ನ ಗುಡಿಗೆರೆಗೆ: ಜಿಲ್ಲಾಧಿಕಾರಿ

ಪಾರ್ಥಿವ ಶರೀರ ತರಲು ಹೆಲಿಕಾಪ್ಟರ್‌ ವ್ಯವಸ್ಥೆಗೆ ಸ್ಥಳೀಯರ ಆಗ್ರಹ
Last Updated 16 ಫೆಬ್ರುವರಿ 2019, 8:14 IST
ಅಕ್ಷರ ಗಾತ್ರ

ಮಂಡ್ಯ:ಹುತಾತ್ಮ ಯೋಧ ಎಚ್‌.ಗುರು ಅವರ ಪಾರ್ಥಿವ ಶರೀರ ಮಧ್ಯಾಹ್ನ 2ಕ್ಕೆ ಗುಡಿಗೆರೆ ತಲುಪಲಿದೆಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ತಿಳಿಸಿದರು.

ಗುರುವನ್ನು ಕಳೆದುಕೊಂಡು ರೋಧಿಸುತ್ತಿರುವ ಸಂಬಂಧಿಕರು ಅಸ್ವಸ್ಥರಾಗುತ್ತಿದ್ದಾರೆ.

ಸ್ಥಳೀಯರ ಪ್ರತಿಭಟನೆ: ಹೆಲಿಕಾಪ್ಟರ್‌ ವ್ಯವಸ್ಥೆಗೆ ಆಗ್ರಹ
ವಿಶೇಷ ವಿಮಾನ ವ್ಯವಸ್ಥೆ ಮಾಡದೆ ಒಂದೇ ವಿಮಾನದಲ್ಲಿ ನಾಲ್ಕು ದೇಹ ತರಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರ ಪ್ರತಿಭಟನೆ ನಡೆಸುತ್ತಿದ್ದಾರೆ.

ಮಧುರೈ, ತಿರುಚ್ಚಿ, ಕೊಚ್ಚಿಗೆ ತೆರಳಿ ನಂತರ ಬೆಂಗಳೂರಿಗೆ ಗುರು ಅವರ ಪಾರ್ಥಿವ ಶರೀರ ಬರಲಿದೆ. ತಡವಾಗಿ ತರುತ್ತಿರುವುದಕ್ಕೆ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಡವಾಗಿ ಬರುವುದರಿಂದ ಮೆರವಣಿಗೆ ಮಾಡಿ ಅಂತ್ಯಕ್ರಿಯೆಗೆ ಸಂಜೆ ತೊಂದರೆಯಾಗುತ್ತದೆ. ಆದ್ದರಿಂದ, ಸೇನಾ ವಿಶೇಷ ಹೆಲಿಕಾಪ್ಟರ್‌ನಲ್ಲಿ ತರಲು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿಸಿಎಂ ಗೌರವ

ಮಂಡ್ಯ ಜಿಲ್ಲೆಯಹುತಾತ್ಮ ಯೋಧ ಸಿ.ಟಿ. ಗುರು ಅವರ ಪಾರ್ಥಿವ ಶರೀರವನ್ನು ಇಂದು ಬೆಳಿಗ್ಗೆ 11.30ಕ್ಕೆಹೆಚ್‌ಎಎಲ್‌ ವಿಮಾನನಿಲ್ದಾಣಕ್ಕೆ ತರಲಾಗುವುದು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯೋಧನಿಗೆ ಗೌರವ ಅರ್ಪಿಸಲಿದ್ದಾರೆ.ನಂತರ ಅವರ ಊರಿನಲ್ಲಿ ನಡೆಯಲಿರುವ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT