ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪುಟ್ಟಣ್ಣಯ್ಯಗೇ ನನ್ನ ಮಣಿಸಲು ಆಗಿಲ್ಲ’

ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ರೈತ ಮುಖಂಡರಿಗೆ ಶಾಸಕ ಪುಟ್ಟರಾಜು ಸವಾಲು
Last Updated 27 ಸೆಪ್ಟೆಂಬರ್ 2021, 5:42 IST
ಅಕ್ಷರ ಗಾತ್ರ

ಪಾಂಡವಪುರ: ‘ಕ್ಷೇತ್ರದಲ್ಲಿ ನಡೆಯು ತ್ತಿರುವ ಅಭಿವೃದ್ಧಿ ಕಾರ್ಯಗಳಿಂದ ಕಂಗೆಟ್ಟಿರುವ ರೈತ ಸಂಘದವರು ಕಾಲುಕೆರೆದು ಜಗಳಕ್ಕೆ ಬರುತ್ತಿದ್ದಾರೆ. ರೈತ ನಾಯಕ ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರಿಂದಲೇ ನನ್ನನ್ನು ರಾಜಕೀಯವಾಗಿ ಮಣಿಸಲು ಸಾಧ್ಯವಾಗಲಿಲ್ಲ. ಇನ್ನು ಈಗಿನ ರೈತಸಂಘದ ಮುಖಂಡರಿಂದ ಏನು ಮಾಡಲು ಸಾಧ್ಯ?’ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಸವಾಲೆಸೆದರು.

ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘3 ಬಾರಿ ಶಾಸಕನಾಗಿ, ಸಂಸದ ನಾಗಿ, ಸಚಿವನಾಗಿ ಕೆಲಸ ಮಾಡಲು ಆಯ್ಕೆ ಮಾಡಿದ್ದೀರಿ. ನಿಮ್ಮ ಆಯ್ಕೆಗೆ ತಕ್ಕಂತೆ ಕೆಲಸ ಮಾಡುತ್ತಿದ್ದೇನೆ. ಇನ್ನು 6 ತಿಂಗಳಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಎಲ್ಲ ಹಳ್ಳಿಗಳೂ ನೀರಾವ ರಿಯಾಗಲಿವೆ. ತಾಂತ್ರಿಕ ಕಾರಣದಿಂದ ರಸ್ತೆ ಕಾಮಗಾರಿ ತಡವಾದುದನ್ನೇ ನೆಪ ಮಾಡಿಕೊಂಡು ರೈತ ಸಂಘದ ಮುಖಂಡರು ಪ್ರತಿಭಟನೆಗೆ ಮುಂದಾಗಿ ನಮ್ಮಿಂದ ಕೆಲಸವಾಯ್ತು ಎಂದು ಬೀಗು ತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಚುನಾವಣೆ ಬರುತ್ತಿದ್ದಂತೆ ನಮ್ಮ ಹೆಸರು ಕೆಡಿಸಲು ಪ್ರಯತ್ನಿಸುತ್ತಾರೆ. ಅವರ ಟೀಕೆಗಳಿಗೆ ಅಭಿವೃದ್ಧಿ ಮಾಡಿ ತೋರಿಸುವುದಾಗಿ ತಿಳಿಸಿದ ಅವರು, ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಾಡೋಣ ಎಂದರು.

ನಕಲಿ ಹೋರಾಟಗಾರ: ‘ಮಂಡ್ಯದ ಕೆ.ಆರ್.ರವೀಂದ್ರ ಒಬ್ಬ ನಕಲಿ ಹೋರಾ ಟಗಾರ. ತಾಲ್ಲೂಕಿನ ಜಕ್ಕನಹಳ್ಳಿ ಸರ್ಕಲ್‌ನಲ್ಲಿ ಗಣಪತಿ ದೇವಾಲಯ ನಿರ್ಮಾಣ ಸಂಬಂಧ ನನ್ನ ಮೇಲೆ ದೂರು ನೀಡಿದ್ದಾನೆ. ಎಲ್ಲರಿಗೂ ಉತ್ತರ ನೀಡುವ ಸಾಮರ್ಥ್ಯ ಹೊಂದಿದ್ದೇನೆ. ರೈತ ಸಂಘದ ಮುಖಂಡ ಕೆಂಪೂಗೌಡರಿಂದ ಏನು ಮಾಡಲು ಸಾಧ್ಯ? ಎಂದರು.

ಸೆ.29ರಂದು ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ವಿವಿಧ ನೀರಾವರಿ ಯೋಜನೆ ಉದ್ಫಾಟಿಸುವರು ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದಿ.ಚಿಕ್ಕಾಡೆ ತಿಮ್ಮೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ಪುರಸಭೆ ಅಧ್ಯಕ್ಷೆ ವಿ.ಕೆ.ಅರ್ಚನಾ ಚಂದ್ರು, ಉಪಾಧ್ಯಕ್ಷೆ ಶ್ವೇತಾ ಉಮೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿ ವಾಸ್, ಎಪಿಸಿಎಂಎಸಿ ಅಧ್ಯಕ್ಷ ಎಸ್.ಕೆ.ದೇವೇಗೌಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ.ಸಿ.ಯಶವಂತ್‌
ಕುಮಾರ್, ಮನ್‌ಮುಲ್ ಅಧ್ಯಕ್ಷ ರಾಮ ಚಂದ್ರು, ಮುಖಂಡರಾದ ಎಂ.ಬಿ.ಶ್ರೀನಿವಾಸ್, ಚನ್ನೇಗೌಡ, ಮಲ್ಲೇಶ್, ಇಮ್ಮಿಯಾಸ್ ಪಾಷಾ, ಜೆ.ದೇವೇಗೌಡ, ಶ್ವೇತಾ ಸುರೇಶ್, ವಿ.ಎಸ್.ನಿಂಗೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT