ಮಂಡ್ಯ: ಕರ್ನಾಟಕ ಸಂಘದ ವತಿಯಿಂದ ಏ.25ರಂದು ಬೆಳಿಗ್ಗೆ 11ಕ್ಕೆ ಡಾ.ರಾಗೌ ಸಾಹಿತ್ಯ ಪ್ರಶಸ್ತಿ ಹಾಗೂ ಕೆ.ಸಿಂಗಾರಿಗೌಡ ಪುಸ್ತಕ ಪ್ರಶಸ್ತಿ ಪ್ರದಾನ ಸಮಾರಂಭವು ನಗರದ ಕೆ.ವಿ.ಎಸ್ ಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಹೇಳಿದರು.

ರಂಗನಿರ್ದೇಶಕ ಡಿ.ಬಿ. ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಅವರಿಗೆ ‘ಡಾ.ರಾಗೌ’ ಸಾಹಿತ್ಯ ಪ್ರಶಸ್ತಿ ಹಾಗೂ ಪ್ರಾಧ್ಯಾಪಕ ಪ್ರೊ.ಹಾ.ಮ. ನಾಗಾರ್ಜುನ ಅವರ ‘ರೈತ ಬದುಕಿನ ನೊಗಲೆಣೆ ಕರ್ನಾಟಕ ಕೃಷಿ ಸಂಸ್ಕೃತಿ’ ಕೃತಿಗೆ ಕೆ.ಸಿಂಗಾರಿಗೌಡ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

ಪ್ರಶಸ್ತಿಯು ತಲಾ ₹20 ಸಾವಿರ ಹಾಗೂ ಫಲಕವನ್ನು ಒಳಗೊಂಡಿದೆ. ಸಾಹಿತಿ ಪದ್ಮಾಶೇಖರ್ ಅವರು ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ವಿಜಯಲಕ್ಷ್ಮಿ ರಘುನಂದನ್ ಅಧ್ಯಕ್ಷತೆ ವಹಿಸುವರು. ಉಪನ್ಯಾಸಕಿ ಎಂ.ಎಸ್. ಅನಿತಾ ಅಭಿನಂದನಾ ನುಡಿಗಳನ್ನಾಡುವರು. ಕರಡಹಳ್ಳಿ ಕೆ.ಎಸ್. ಆನಂದ್ ಭಾಗವಹಿಸುವರು ಎಂದರು.

ವರ್ಣ ಪಲ್ಲಟ ನಾಟಕ ಪ್ರದರ್ಶನ: ಕರ್ನಾಟಕ ಸಂಘ ಮತ್ತು ಇಂಡುವಾಳು ಎಚ್.ಹೊನ್ನಪ್ಪ ಸೇವಾ ಟ್ರಸ್ಟ್ ಸಹಯೋಗದಲ್ಲಿ ‘ಅನಾವರಣ’ ಸಂಸ್ಥೆ ಪ್ರಸ್ತುತ ಪಡಿಸುವ ಶಶಿಧರ್ ಭಾರಿಘಾಟ್ ನಿರ್ದೇಶನದ ‘ವರ್ಣ ಪಲ್ಲಟ’ ನಾಟಕ ಪ್ರದರ್ಶನವು ಏ.26ರಂದು ಸಂಜೆ 6 ಗಂಟೆಗೆ ನಗರದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ನಡೆಯಲಿದೆ. ಪ್ರದರ್ಶನದ ಒಂದು ಟಿಕೆಟ್ಗೆ ₹100 ಇರಲಿದೆ ಎಂದರು.

ಬೆಂಗಳೂರು ಬಿಜಿಎಸ್ ದಂತ ವೈದ್ಯ ಆದರ್ಶ್ ಎಚ್.ಹೊನ್ನಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ. ನಂದೀಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಿ.ಎಸ್. ಜೀವನ್ಕುಮಾರ್, ಸಹಾಯಕ ಎಂಜಿನಿಯರ್ ವಿಜಯ್ ದರ್ಶನ್ ಭಾಗವಹಿಸುವರು. ನಾಟಕ ಪ್ರದರ್ಶನದ ನಂತರ ರಂಗಾಸಕ್ತರ ಜೊತೆ ನಿರ್ದೇಶಕ ಶಶಿಧರ್ ಭಾರಿಘಾಟ್ ಮತ್ತು ರಂಗ ತಂಡದೊಂದಿಗೆ ಸಂವಾದ ಇರಲಿದೆ ಎಂದು ವಿವರಿಸಿದರು.

ಸಂಘದ ಕಾರ್ಯದರ್ಶಿ ಲೋಕೇಶ್ ಚಂದಗಾಲು, ನಿರ್ದೇಶಕ ಹನಕೆರೆ ನಾಗಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.