ರಾಜ್‌ಕುಮಾರ್‌ಗೆ ಭಾರತರತ್ನ ನೀಡಲಿ

ಬುಧವಾರ, ಮೇ 22, 2019
29 °C
ಮಳವಳ್ಳಿಯಲ್ಲಿ ಡಾ.ರಾಜ್‌ ಕಲಾ ಸಂಘದ ಅಧ್ಯಕ್ಷ ದೊಡ್ಡಯ್ಯ ಆಗ್ರಹ

ರಾಜ್‌ಕುಮಾರ್‌ಗೆ ಭಾರತರತ್ನ ನೀಡಲಿ

Published:
Updated:
Prajavani

ಮಳವಳ್ಳಿ: ಪಟ್ಟಣದ ಗಂಗಾಮತ ಬಡಾವಣೆಯಲ್ಲಿ ಡಾ.ರಾಜ್‌ ಕಲಾ ಸಂಘದ ವತಿಯಿಂದ ವರನಟ ಡಾ.ರಾಜ್‌ ಕುಮಾರ್ ಅವರ ಹುಟ್ಟುಹಬ್ಬವನ್ನು ಬುಧವಾರ ಆಚರಿಸಲಾಯಿತು.

ಸಂಘದ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ, ‘ರಾಜ್‌ಕುಮಾರ್ ಅವರು ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದು ಮೇರುನಟರಾಗಿ ಬೆಳೆದು ಕನ್ನಡ ಭಾಷೆ, ಸಂಸ್ಕೃತಿಗೆ ಕೊಡುಗೆ ನೀಡಿದ್ದಾರೆ. ಅವರ ಚಲನಚಿತ್ರಗಳು ಸಮಾಜಕ್ಕೆ ಮಾದರಿಯಾಗಿವೆ. ಇಂದಿನ ಯುವ ಪೀಳಿಗೆ ಅವರ ಚಿತ್ರಗಳನ್ನು ನೋಡಬೇಕಿದೆ’ ಎಂದರು.

ಪ್ರಪಂಚದ ಪ್ರಬುದ್ಧ ನಟರ ಸಾಲಿನಲ್ಲಿ ರಾಜ್‌ಕುಮಾರ್ ನಿಲ್ಲುತ್ತಾರೆ. ರಂಗಭೂಮಿ, ಸಿನಿಮಾ, ಗಾಯನ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸೈ ಎನಿಸಿಕೊಂಡ ಮೇರು ವ್ಯಕ್ತಿ ಅವರು. ಅವರಿಗೆ ‘ಭಾರತರತ್ನ’ ಪುರಸ್ಕಾರ ನೀಡಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಯಜಮಾನ್ ವಸಂತ, ಗೋವಿಂದರಾಜು, ಷರೀಫ್‌, ನಾಗರಾಜು, ತುಕಾರಾಂ, ಶಿವಣ್ಣ ಇದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !