ನಾಗಮಂಗಲ: ನಮ್ಮ ಸುತ್ತಮುತ್ತಲಿನ ಕೆರೆ–ಕಟ್ಟೆಗಳನ್ನು ಅಭಿವೃದ್ಧಿಪಡಿಸಿ ಅಧಿಕ ಪ್ರಮಾಣದ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚುವಂತೆ ಮಾಡಿದರೆ ಅಂತರ್ಜಲ ಮಟ್ಟವು ವೃದ್ಧಿಸಲು ಸಾಧ್ಯವಾಗುತ್ತದೆ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಟ್ರಸ್ಟ್ನ ಮೈಸೂರು ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ ತಿಳಿಸಿದರು.

ತಾಲ್ಲೂಕಿನ ದೇವಲಾಪುರ ಹೋಬಳಿಯ ಭೀಮನಹಳ್ಳಿ ಗ್ರಾಮ ಪಂಚಾಯಿತಿಯ ಸಂಪನಹಳ್ಳಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ್ದ ನಮ್ಮೂರು ನಮ್ಮ ಕೆರೆ ಪುನಶ್ಚೇತನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಕೆರೆಗಳು ನಾಶವಾಗುತ್ತಿರುವುದರಿಂದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನಮ್ಮೂರು ನಮ್ಮ ಕೆರೆ ಯೋಜನೆ ಅಡಿ ಅವುಗಳ ಪುನಶ್ಚೇತನ ಕಾರ್ಯವನ್ನು ನಡೆಸಿಕೊಂಡು ಬರುತ್ತಿದೆ. ಈ ವಿಶೇಷ ಯೋಜನೆಯಡಿ 488ನೇ ಕೆರೆಯ ಅಭಿವೃದ್ಧಿ ಕಾರ್ಯ ನೆರವೇರುತ್ತಿದೆ ಎಂದರು.

ತಾ.ಪಂ ಇಒ ಚಂದ್ರಮೌಳಿ ಮಾತನಾಡಿ, ರಾಜ–ಮಹಾರಾಜರು ಕೆರೆಕಟ್ಟೆ, ದೇವಸ್ಥಾನಗಳನ್ನು ಕಟ್ಟಿಸುವ ಮೂಲಕ ಸಮಾಜದ ಏಳಿಗೆಗೆ ಕಾರಣೀಭೂತರಾಗಿದ್ದರು. ಜಲ ಮೂಲಗಳ ಬಗ್ಗೆ ಅವರು ಆದ್ಯತೆ ನೀಡಿದ್ದರು. ಈಗ ಸರ್ಕಾರವೂ ಅಂಥ ಜನೋಪಯೋಗಿ ಕೆಲಸಗಳನ್ನು ಮಾಡು ತ್ತಿದ್ದು, ಅವುಗಳನ್ನು ರಕ್ಷಿಸುವಂತೆ ಜಾಗೃತಗೊಳಿಸಲು ಈ ಯೋಜನೆ ರೂಪಿ ಸಿರುವುದು ಸ್ವಾಗತಾರ್ಹ ಎಂದರು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನಿರ್ದೇಶಕಿ ಚೇತನಾ, ಜಿಲ್ಲಾ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಕೆ.ಹನುಮಂತಯ್ಯ, ಲೋಕೇಶ್, ಗ್ರಾ.ಪಂ.ಅಧ್ಯಕ್ಷೆ ಅಶ್ವಿನಿ ನಾಗೇಶ್, ಯೋಜನಾಧಿಕಾರಿ ದಿವಾಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.