ಮಂಡ್ಯ: ನಗರದಲ್ಲಿ ಡಿ.20ರಿಂದ ಡಿ.22ರವರೆಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇದುವರೆಗೆ 2,894 ಪ್ರತಿನಿಧಿಗಳು ಮಾತ್ರ ನೋಂದಣಿಯಾಗಿದ್ದು, ‘ಆನ್ಲೈನ್ ನೋಂದಣಿ’ ಮಂದಗತಿಯಲ್ಲಿ ಸಾಗುತ್ತಿದೆ.

ಕೆ.ಆರ್.ಎಸ್. ಬೃಂದಾವನದಲ್ಲಿರುವ ರಾಯಲ್ ಆರ್ಕಿಡ್ ಹೋಟೆಲ್ನಲ್ಲಿ ನವೆಂಬರ್ 16ರಂದು ‘ಆನ್ಲೈನ್ ನೋಂದಣಿ’ಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡಿದ್ದರು. 15 ದಿನ ಕಳೆದರೂ ನಿರೀಕ್ಷಿತ ಮಟ್ಟದಲ್ಲಿ ನೋಂದಣಿಯಾಗಿಲ್ಲ.

ವಿವಿಧ ಜಿಲ್ಲೆಗಳಿಂದ ಒಟ್ಟು 10 ಸಾವಿರ ಪ್ರತಿನಿಧಿಗಳ ನೋಂದಣಿ ಗುರಿ ಇದ್ದು, ಇದುವರೆಗೆ ಶೇ 29ರಷ್ಟು ಮಾತ್ರ ನೋಂದಣಿಯಾಗಿದೆ. ಡಿ.5ರವರೆಗೆ ಕಾಲಾವಕಾಶ ಕಲ್ಪಿಸಲಾಗಿದ್ದು, 5 ದಿನಗಳಷ್ಟೇ ಉಳಿದಿವೆ.

ನಿಯಮವೇ ಅಡ್ಡಿ:

‘ಪ್ರತಿನಿಧಿಯಾಗಿ ನೋಂದಣಿ ಮಾಡಿಕೊಳ್ಳುವವರು ಕಡ್ಡಾಯವಾಗಿ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿರಬೇಕೆಂಬ ನಿಯಮ ರೂಪಿಸಿದ್ದು, ಆಸಕ್ತರಿಗೆ ಇದೇ ಅಡ್ಡಿಯಾಗಿದೆ. ಇದನ್ನು ಸಡಿಲಿಸಿ, ಆಫ್ಲೈನ್ ನೋಂದಣಿಗೂ ಅವಕಾಶ ಕಲ್ಪಿಸಬೇಕು’ ಎಂದು ಕಲಬುರಗಿಯ ಸಾಹಿತಿ ಶಿವರಾಜ ಪಾಟೀಲ ಮತ್ತು ಕನ್ನಡಪರ ಸಂಘಟಕ ಯಶವಂತರಾಯ ಅಷ್ಠಗಿ ಒತ್ತಾಯಿಸಿದ್ದಾರೆ.

ಹಾವೇರಿಯಲ್ಲಿ ನಡೆದ 86ನೇ ನುಡಿಜಾತ್ರೆಯಲ್ಲಿ ಮೊದಲಿಗೆ ಆರಂಭಿಸಿದ ‘ಆನ್ಲೈನ್ ನೋಂದಣಿ’ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾದಾಗ ಪರಿಷತ್ತು ದಿನಾಂಕವನ್ನು ವಿಸ್ತರಿಸಿ, ‘ಆಫ್ಲೈನ್’ ನೋಂದಣಿಗೂ (ಜಿಲ್ಲಾ ಕಸಾಪ ಕಚೇರಿಗಳಲ್ಲಿ ನೋಂದಣಿ) ಅವಕಾಶ ಕಲ್ಪಿಸಿತ್ತು. ಆಫ್ಲೈನ್ ನೋಂದಣಿಯಲ್ಲಿ ‘ಕಸಾಪ ಸದಸ್ಯತ್ವ ಕಡ್ಡಾಯ’ ಎಂಬ ನಿಯಮವನ್ನೂ ಸಡಿಲಿಸಿತ್ತು. ನಂತರ, ಆನ್ಲೈನ್ನಲ್ಲಿ 5,169 ಮಂದಿ ಮತ್ತು ಆಫ್ಲೈನ್ನಲ್ಲಿ 5 ಸಾವಿರ ಮಂದಿ ಸೇರಿ ಒಟ್ಟು 10,169 ಮಂದಿ ನೋಂದಣಿ ಮಾಡಿಕೊಂಡಿದ್ದರು.

ಶುಲ್ಕ ಹೆಚ್ಚಳ:

‘ನೋಂದಣಿ ಶುಲ್ಕ ₹600 ನಿಗದಿಪಡಿಸಿದ್ದು, ಜೊತೆಗೆ ಕಸಾಪ ಸದಸ್ಯತ್ವ ನೋಂದಣಿಗೆ (ಆಜೀವ ಸದಸ್ಯರು) ₹250 ಸೇರಿ, ಪ್ರತಿನಿಧಿಯಾಗಿ ಬರುವವರು ಒಟ್ಟು ₹850 ಶುಲ್ಕ ಕಟ್ಟಬೇಕು. ಇದು ದುಬಾರಿ. ಹಾವೇರಿ ಸಮ್ಮೇಳನದಲ್ಲಿ ₹500 ಪ್ರತಿನಿಧಿ ಶುಲ್ಕ ನಿಗದಿ ಮಾಡಲಾಗಿತ್ತು. ಈ ಬಾರಿ ಶುಲ್ಕ ಹೆಚ್ಚಳವಾಗಿರುವುದು ಕೂಡ ನೋಂದಣಿ ಕಡಿಮೆಯಾಗಲು ಕಾರಣ’ ಎನ್ನಲಾಗುತ್ತಿದೆ.

ಪ್ರತಿನಿಧಿಗಳಿಗೆ ಎರಡು ‘ವಿಶೇಷ ಕಿಟ್’

‘ಸಮ್ಮೇಳನದ ಪ್ರತಿನಿಧಿಗಳಾಗಿ ಬರುವವರಿಗೆ ಬ್ಯಾಗ್ ಪೆನ್ ನೋಟ್ಬುಕ್ ಸಮ್ಮೇಳನಾಧ್ಯಕ್ಷರ ಭಾಷಣ ಪ್ರತಿ ಆಹ್ವಾನ ಪತ್ರಿಕೆ ಹಾಗೂ ಅರ್ಧ ಕೆ.ಜಿ. ‘ಮಂಡ್ಯ ಬೆಲ್ಲ’ ಒಳಗೊಂಡ ಕಿಟ್ ಅನ್ನು ಸಮ್ಮೇಳನದ ಕೌಂಟರ್ನಲ್ಲಿ ನೀಡುತ್ತೇವೆ. ಜತೆಗೆ ಸೋಪು ಬ್ರಶ್ ಟೂತ್ ಪೇಸ್ಟ್ ಬಾಚಣಿಗೆ ದಿಂಬು ಹೊದಿಕೆ ಒಳಗೊಂಡ ‘ವಸತಿ ಕಿಟ್’ ಅನ್ನು ಕೂಡ ನೀಡಿ ವಸತಿ ಸೌಲಭ್ಯ ಕಲ್ಪಿಸುತ್ತೇವೆ’ ಎಂದು ಸಮ್ಮೇಳನದ ನೋಂದಣಿ ಸಮಿತಿ ಸದಸ್ಯ ಕಾರ್ಯದರ್ಶಿ ಉಪವಿಭಾಗಾಧಿಕಾರಿ ಶಿವಮೂರ್ತಿ ತಿಳಿಸಿದರು.

‘ಪರಿಷತ್ತಿನ ಸದಸ್ಯತ್ವ ಪಡೆದಿರುವವರು ಪರಿಷತ್ತಿನ ವೆಬ್ಸೈಟ್ (https://kannadasahithya parishattu.in/ sammelana2024) ಮೂಲಕ ನೋಂದಣಿ ಮಾಡಿಕೊಳ್ಳಲು ಒಟ್ಟು 20 ದಿನ (ನ.16ರಿಂದ ಡಿ.5ರವರೆಗೆ) ಅವಕಾಶ ನೀಡಲಾಗಿದೆ. ಆನ್ಲೈನ್ನಲ್ಲಿ ಅರ್ಜಿ ಭರ್ತಿ ಮಾಡಿದ ನಂತರ ಹಣ ಪಾವತಿ ಕೂಡ ಆನ್ಲೈನ್ ಮೂಲಕ ಮಾಡಬೇಕು. ವಿಶೇಷ ‘ಗುರುತಿನ ಚೀಟಿ’ ಕೂಡ ಸಿಗಲಿದೆ’ ಎಂದು ಮಾಹಿತಿ ನೀಡಿದ್ದಾರೆ.

ಸದಸ್ಯತ್ವ ಕಡ್ಡಾಯ: ತಪ್ಪೇನಿದೆ?: ಜೋಶಿ

‘ಸಾಹಿತ್ಯ ಸಮ್ಮೇಳನಕ್ಕೆ ಬರಲು ಎಲ್ಲರಿಗೂ ಮುಕ್ತ ಅವಕಾಶವಿದೆ. ಆದರೆ ಸಮ್ಮೇಳನದ ಪ್ರತಿನಿಧಿಯಾಗಿ ಬರುವವರಿಗೆ ಮಾತ್ರ ಕಸಾಪ ಸದಸ್ಯತ್ವ ಕಡ್ಡಾಯ ಮಾಡಲಾಗಿದೆ. ಇದರಲ್ಲಿ ತಪ್ಪೇನಿದೆ’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ಪ್ರತಿಕ್ರಿಯಿಸಿದರು. ‘ಪ್ರಸ್ತುತ 3.78 ಲಕ್ಷ ಸದಸ್ಯರಿದ್ದು 1 ಕೋಟಿ ಸದಸ್ಯತ್ವದ ಗುರಿ ಹಾಕಿಕೊಂಡಿದ್ದೇವೆ. ಜನಸಾಮಾನ್ಯರ ಪರಿಷತ್ತು ಆಗಬೇಕೆಂಬ ಉದ್ದೇಶದಿಂದ ಸದಸ್ಯತ್ವ ಅಭಿಯಾನ ನಡೆಸುತ್ತೇವೆ. ಈ ಬಾರಿ ಆಫ್ಲೈನ್ ಬದಲಾಗಿ ಪೂರ್ಣ ಪ್ರಮಾಣದಲ್ಲಿ ಆನ್ಲೈನ್ ನೋಂದಣಿಗೆ ಮಾತ್ರ ಅವಕಾಶ ಕಲ್ಪಿಸಿದ್ದೇವೆ. ನಿರೀಕ್ಷಿಸಿದಷ್ಟು ಪ್ರತಿನಿಧಿಗಳು ನೋಂದಣಿಯಾಗುವ ಭರವಸೆ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.