ಪಾಂಡವಪುರ: ಮಹಿಳೆಯೊಬ್ಬರು ಜಮೀನಿಗೆ ತೆರಳುವಾಗ ರೋಡ್ ರೋಲರ್ ಹರಿದು ಸ್ಥಳದಲ್ಲೇ ದಾರುಣವಾಗಿ ಸಾವಿಗೀಡಾಗಿರುವ ಘಟನೆ ತಾಲ್ಲೂಕಿನ ಸಣಬ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಗ್ರಾಮದ ನಿವಾಸಿ ಗೌರಮ್ಮ ಬಿನ್ ಪಾಪಣ್ಣ (58) ಮೃತಪಟ್ಟವರು. ಘಟನೆ ನಂತರ ಮಂಡ್ಯ ತಾಲ್ಲೂಕಿನ ಪುರದಕೊಪ್ಪಲು ಗ್ರಾಮದ ಚಾಲಕ ಶ್ರೀಧರ್ ಪರಾರಿಯಾಗಿದ್ದಾನೆ.

ನಾರಾಯಣಪುರದಿಂದ ಕಾಮನಾಯಕನಹಳ್ಳಿ– ಸಣಬ ಗ್ರಾಮದ ಮಾರ್ಗವಾಗಿ ರಾಜ್ಯ ಹೆದ್ದಾರಿಯ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುವ ವೇಳೆ ಶುಕ್ರವಾರ ಮಧ್ಯಾಹ್ನ ಸುಮಾರು 12.30ರ ಸಮಯದಲ್ಲಿ ಜಮೀನಿಗೆ ತೆರಳುತ್ತಿದ್ದ ಮಹಿಳೆ ಗೌರಮ್ಮ ಅವರ ಮೇಲೆ ರೋಡ್ ರೋಲರ್ ಹರಿದಿದೆ.

ಈ ವೇಳೆ ಗೌರಮ್ಮ ಅವರ ದೇಹ ಛಿದ್ರಛಿದ್ರವಾಗಿದೆ. ರೋಡ್ ರೋಲರ್ ಮೂಲಕ ರಸ್ತೆ ಕಾಮಗಾರಿ ಮಾಡುವ ವೇಳೆ ಯಾವುದೇ ಮುಂಜಾಗ್ರತಾ ಕ್ರಮ ಅನುಸರಿಸದೇ ನಿರ್ಲಕ್ಷ್ಯ ವಹಿಸಿದ್ದೇ ಈ ಘಟನೆಗೆ ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಚನ್ನರಾಯಪಟ್ಟಣ ತಾಲ್ಲೂಕಿನ ಸಾರಂಗಿ ಗ್ರಾಮಕ್ಕೆ ಗೌರಮ್ಮ ಅವರನ್ನು ಮದುವೆ ಮಾಡಿಕೊಡಲಾಗಿತ್ತು. ಗಂಡ ಸತ್ತ ಬಳಿಕ ಹಲವಾರು ವರ್ಷಗಳಿಂದ ಸೆಣಬ ಗ್ರಾಮದ ತಂಗಿ ಮನೆಯಲ್ಲೇ ಗೌರಮ್ಮ ವಾಸವಿದ್ದರು ಎನ್ನಲಾಗಿದೆ.

₹3 ಲಕ್ಷ ಪರಿಹಾರ: ಘಟನಾ ಸ್ಥಳಕ್ಕೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೇಟಿ ನೀಡಿ ಮೃತರ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರಲ್ಲದೇ, ಗುತ್ತಿಗೆದಾರ ರವಿ ಬೋಜೇಗೌಡ ಅವರಿಂದ ₹3 ಲಕ್ಷ ಪರಿಹಾರ ಕೊಡಿಸಿದರು.

ಈ ಸಂಬಂಧ ಪಾಂಡವಪುರ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಧನಪಾಲ್ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.