ಮದ್ದೂರು: ಸಿಗರೇಟ್ ಕೊಡಲಿಲ್ಲ ಎಂಬ ಕ್ಷುಲ್ಲಕ ವಿಷಯಕ್ಕೆ ಎರಡು ಯುವಕರ ಗುಂಪಿನ ನಡುವೆ ನಡೆದ ಮಾರಾಮಾರಿಯಲ್ಲಿ ರೌಡಿ ಶೀಟರ್ ಹಿನ್ನೆಲೆಯುಳ್ಳ ಯುವಕನೊಬ್ಬ ಕೊಲೆಯಾಗಿ, ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ.

ನಗರದ ಸೋಮೇಗೌಡರ ಬೀದಿಯ ನಿವಾಸಿ ಯಶವಂತ್ ಆಲಿಯಾಸ್ ಕಚ್ಚಿ (21) ಕೊಲೆಯಾದ ಯುವಕ. ಗೊರವನಹಳ್ಳಿಯ ದರ್ಶನ್ ಹಾಗೂ ಸಚಿನ್ ಎಂಬುವರು ತೀವ್ರವಾಗಿ ಗಾಯಗೊಂಡು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆ ವಿವರ...

ಯಶವಂತ್ ಹಾಗೂ ದರ್ಶನ್, ಸಚಿನ್ ನಡುವೆ ಭಾನುವಾರ ಸಂಜೆ ಸಿಗರೇಟ್ ನೀಡಲಿಲ್ಲ ಎಂಬ ವಿಷಯಕ್ಕೆ ಜಗಳವಾಗಿತ್ತು ಎನ್ನಲಾಗಿದೆ. ಆ ಬಳಿಕ ರಾತ್ರಿ ಯಶವಂತ್ ಹಾಗೂ ದರ್ಶನ್, ಸಚಿನ್ ಕಡೆಯ ಒಂದಷ್ಟು ಯುವಕರು ನಗರದ ಹೊಳೆ ಆಂಜನೇಯಸ್ವಾಮಿ ದೇವಸ್ಥಾನದ ರಸ್ತೆಯ ಆರಂಭದಲ್ಲಿರುವ ಸಾಮಿಲ್ ಒಂದರ ಬಳಿ ಜಮಾಯಿಸಿ ಸಿಗರೇಟ್ ಜಗಳವನ್ನು ಕೆದಕಿದ್ದಾರೆ. ಮಾತಿಗೆ ಮಾತು ಬೆಳೆದು ಎರಡು ಗುಂಪುಗಳ ನಡುವೆ ಜಗಳ ಆರಂಭವಾಗಿದೆ.

ಬಳಿಕ ಸಾಮಿಲ್ ಬಳಿಯಿದ್ದ ಮರದ ಹಲಗೆಗಳಿಂದ ಯುವಕರು ಹೊಡೆದಾಡಿಕೊಂಡಿದ್ದು ಯಶವಂತ್ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ದರ್ಶನ್ ಹಾಗೂ ಸಚಿನ್ ಗಂಭೀರವಾಗಿ ಗಾಯಗೊಂಡರು.

ಮದ್ದೂರಿನಲ್ಲಿ ನಡೆದ ಗ್ಯಾಂಗ್ ವಾರ್ ಘಟನೆಯಿಂದ ಜನತೆ ಅತಂಕಕ್ಕೆ ಒಳಾಗಿದ್ದು, ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಡಿವೈಎಸ್ಪಿ ಯಶವಂತ್ ಕುಮಾರ್, ಸಿಪಿಐಗಳಾದ ನವೀನ್ ಕುಮಾರ್, ನಾರಾಯಣ್ ಅವರು ಆಗಮಿಸಿ ಸ್ಥಳ ಮಹಜರು ಮಾಡಿದರು.

ಕೊಲೆಯಾದ ಯುವಕನ ತಾಯಿ ಪ್ರೇಮಾ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಮದ್ದೂರು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.