ಹಲಗೂರು: ‘ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳೇ ಈಗ ಉನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಗರ ಮತ್ತು ಪಟ್ಟಣ ಪ್ರದೇಶದ ವಿದ್ಯಾರ್ಥಿಗಳಿಗಿಂತಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮುಂದಿದ್ದಾರೆ’ ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಚಿದಾನಂದಗೌಡ ತಿಳಿಸಿದರು.

ಹಲಗೂರು ಸಮೀಪದ ಹುಸ್ಕೂರು ಗ್ರಾಮದ ಬಾಲಾಜಿ ಎಜುಕೇಷನ್ ಟ್ರಸ್ಟ್ ನ ಸ್ಪಂದನ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ 'ಸ್ಪಂದನ ಸಂಭ್ರಮ- 2026' ಮತ್ತು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯದರ್ಶಿ ಎಚ್.ಕೆ.ಕೃಷ್ಣಮೂರ್ತಿ ಮಾತನಾಡಿ, ‘ಶಾಲೆಯಲ್ಲಿ ವಾರ್ಷಿಕೋತ್ಸವ ಆಚರಣೆ ಶಾಲೆ ಮತ್ತು ಪೋಷಕರು ನಡುವಿನ ಒಂದು ಸಮಾಗಮ ಕಲಿಕೆಯನ್ನು ಉತ್ತೇಜಿಸಲಿದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಪ್ರದರ್ಶನ ಮಾಡಲು ಸಹಕಾರಿಯಾಗಲಿದೆ’ ಎಂದರು.

ಶಾಲೆಯಲ್ಲಿ ನಡೆಸಿದ ಪೋಷಕರ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಹುಮಾನ ಪಡೆದವರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಬಾಲಾಜಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಕೆಂಪೇಗೌಡ, ಕಾರ್ಯದರ್ಶಿ ಎಚ್.ಕೆ.ಕೃಷ್ಣಮೂರ್ತಿ, ಸಹ ಕಾರ್ಯದರ್ಶಿ ಎಚ್.ಕೆ.ದೇವರಾಜು, ಮೂತ್ರಪಿಂಡ ಶಸ್ತ್ರ ಚಿಕಿತ್ಸಕ ಡಾ.ರಮೇಶ್ ಹನುಮೇಗೌಡ, ಸೈನಿಕ ಬಿ.ಎನ್. ಮಧು, ಸಾಹಿತಿ ಕೃಷ್ಣೇಗೌಡ ಹುಸ್ಕೂರು, ವಕೀಲ ಎಚ್.ಆರ್.ಸುರೇಶ್, ಎಸ್.ಬಿ.ಐ ವ್ಯವಸ್ಥಾಪಕ ಪ್ರತಾಪ್, ಎಂಜಿನಿಯರ್ ವೆಂಕಟಪ್ಪ, ಹೊನ್ನೇಗೌಡ, ಶಿವಲಿಂಗೇಗೌಡ, ಯುರೋ ಕಿಡ್ಸ್ ರಾಜೇಶ್, ಮುಖ್ಯ ಶಿಕ್ಷಕಿ ಬಿ.ಕಮಲ ಭಾಗವಹಿಸಿದ್ದರು.

ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಲು ಸಲಹೆ

ಕ್ಷೇತ್ರ ಶಿಕ್ಷಣ ಅಧಿಕಾರಿ ವಿ.ಈ.ಉಮಾ ಮಾತನಾಡಿ ‘ದೈನಂದಿನ ಜೀವನದಲ್ಲಿ ಮಗುವಿಗೆ ಕಲಿಕೆಯ ಜೊತೆಗೆ ಆಟಕ್ಕೂ ಸಮಯಾವಕಾಶ ಮಾಡಿ ಕೊಡಿ. ರಾತ್ರಿ ಸಮಯದಲ್ಲಿ ಸುಲಭದ ವಿಷಯಗಳನ್ನು ಬೆಳಿಗ್ಗೆ ಸಮಯದಲ್ಲಿ ಕಷ್ಟದ ವಿಷಯಗಳನ್ನು ಕಲಿಸಿ. ಪ್ರತಿದಿನವೂ ಅಂಕ ಪಡೆಯಲು ಒತ್ತಡ ಹೇರದಿರಿ. ಮಕ್ಕಳು ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳಲು ಕಲಿಸಿ’ ಎಂದು ಸಲಹೆ ನೀಡಿದರು. ‘ಮಕ್ಕಳು ಸಣ್ಣಪುಟ್ಟ ವಿಷಯಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಅಪಾಯಕಾರಿ ಬೆಳವಣಿಗೆ. ಪೋಷಕರು ಮಕ್ಕಳಿಗೆ ದೈನಂದಿನ ಜೀವನದಲ್ಲಿ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಗಟ್ಟಿತನವನ್ನು ತುಂಬಿ ಅವರಿಗೆ ಸಕಾರಾತ್ಮಕ ಚಿಂತನೆಗಳ ಜೊತೆಗೆ ಆತ್ಮಸ್ಥೈರ್ಯ ತುಂಬಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.