ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರತಿನಿಧಿಗಳ ಕಾಯ್ದೆಗೆ ಬೇಕು ತಿದ್ದು‍ಪಡಿ

Last Updated 24 ಏಪ್ರಿಲ್ 2018, 19:17 IST
ಅಕ್ಷರ ಗಾತ್ರ

ಬೆಂಗಳೂರು: ಜನಪ್ರತಿನಿಧಿಗಳ ಕಾಯ್ದೆ 1951ಕ್ಕೆ ಕೆಲ ತಿದ್ದುಪಡಿ ಮಾಡಬೇಕು ಎಂದು ನಿವೃತ್ತ ಎಂಜಿಯರ್‌ ವಿಜಯಕುಮಾರ್‌ ಪಾಟೀಲ್‌ ಒತ್ತಾಯಿಸಿದರು.

ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಕ್ಷೇತ್ರದಲ್ಲಿ ನಿಲ್ಲುತ್ತಿದ್ದಾರೆ. ನಿಂತ ಎಲ್ಲ ಕ್ಷೇತ್ರದಲ್ಲಿ ಆಯ್ಕೆಯಾದರೆ ಒಂದು ಕ್ಷೇತ್ರ ಹೊರತುಪಡಿಸಿ ಇನ್ನುಳಿದ ಕ್ಷೇತ್ರಕ್ಕೆ ರಾಜೀನಾಮೆ ನೀಡಬೇಕು. ಇದರಿಂದ ಮತ್ತೆ ಉಪಚುನಾವಣೆ ನಡೆಸಬೇಕಾಗುತ್ತದೆ. ಅಲ್ಲದೆ ಇನ್ನೊಂದು ಅಭ್ಯರ್ಥಿ ಆಯ್ಕೆ ಆಗುವವರೆಗೆ ಕ್ಷೇತ್ರ ಜನಪ್ರತಿನಿಧಿ ಇಲ್ಲದೆ ಅನಾಥವಾಗುತ್ತದೆ. ಹೀಗಾಗಿ ಎರಡನೇ ಅತಿ ಹೆಚ್ಚು ಮತ ಪಡೆದ ಅಭ್ಯರ್ಥಿಯನ್ನು ಪರ್ಯಾಯ ಆಯ್ಕೆ ಎಂದು ಪರಿಗಣಿಸಬೇಕು. ಎರಡನೇ ಅಭ್ಯರ್ಥಿ ಆಯ್ಕೆಯ ಘೋಷಣೆ ಮಾಡುವ ಸಂ‍ಪೂರ್ಣ ಅಧಿಕಾರವನ್ನು ಚುನಾವಣಾಧಿಕಾರಿಗೆ ನೀಡುವಂತೆ ತಿದ್ದುಪಡಿ ತರಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT