ಸಂತೇಬಾಚಹಳ್ಳಿ: ಬಿಲ್ಲೇನಹಳ್ಳಿ ಗವಿರಂಗನಾಥ ಸ್ವಾಮಿ ದೇವಾಲಯದ ಬಳಿ ಸೋಮವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಗೋಶಾಲೆಯ ಮೇಲ್ಚಾವಣಿ ಕುಸಿದಿದೆ .

ಸಂತೇಬಾಚಹಳ್ಳಿ ಹೋಬಳಿಯ ಹಲವೆಡೆ ಧಾರಾಕಾರ ಮಳೆಯಾಗಿದೆ. ಮುಜುರಾಯಿ ಇಲಾಖೆಯ ಗವಿರಂಗನಾಥ ದೇವಾಲಯದ ಬಳಿ ಗೋಶಕ್ತಿ ಚಾರಿಟಬಲ್ ಟ್ರಸ್ಟ್ ನಡೆಸುತಿದ್ದ ಗೋಶಾಲೆಯ ಮೆಲ್ಚಾವಣಿ ಹಾರಿ ಹೋಗಿ ಗೋವುಗಳಿಗೆ ನೆಲೆ ಇಲ್ಲದಂತಾಗಿದೆ. ಮಾಳಗೂರು ಗೇಟ್, ಹಲಗೆಹೊಸಹಳ್ಳಿ ಗೇಟ್, ಸಂತೇಬಾಚಹಳ್ಳಿ ಕ್ರಾಸ್ ಸೇರಿ ವಿವಿಡೆದೆ ಭಾರಿ ಬಿರುಗಾಳಿಗೆ ರಸ್ತೆ ಬದಿ ಮರಗಳು, ರೆಂಬೆ ಕೊಂಬೆಗಳು ಧರೆಗುರುಳಿವೆ. ಇದರಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಸ್ಥಳಕ್ಕೆ ಆಗಮಿಸಿದ ವಿದ್ಯುತ್ ಇಲಾಖೆ ಜೆ.ಇ ಶಿವಮೂರ್ತಿ ಹಾಗೂ ಸಿಬ್ಬಂದಿ ಹರ್ಷ, ಪುನೀತ್, ಪ್ರವೀಣ್ ವಿದ್ಯುತ್ ಸಂಪರ್ಕ ಸರಿಪಡಿಸಿದರು.

ಗೋಶಾಲೆ ಸಿಬ್ಬಂದಿ ಧನುಷ್ ಮಾತನಾಡಿ ಬಿಲ್ಲೇನಹಳ್ಳಿ ಗ್ರಾಮದ ಯುವಕರು ಟ್ರಸ್ಟ್ ಮಾಡಿ ಗೋವುಗಳನ್ನ ರಕ್ಷಣೆ ಮಾಡಲು ಮುಂದಾಗಿದ್ದೆವು. ಆದರೆ ಬಿರುಗಾಳಿಯಿಂದ ಭಾರಿ ತೊಂದರೆಯಾಗಿದೆ. ಮಳೆಯಿಂದ ಭಾರಿ ನಷ್ಟವಾಗಿದೆ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-40-436119081

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.