ಸಂತೇಬಾಚಹಳ್ಳಿ: ಕುಂದೂರು ಗ್ರಾಮದಲ್ಲಿ ಶನಿವಾರ ಚಿರತೆ ದಾಳಿ ನಡೆಸಿ ರೈತ ಕೆ. ಆರ್. ಮಂಜುನಾಥ್ ಎಂಬುವರು ಕೊಟ್ಟಿಗೆಯಲ್ಲಿ ಕಟ್ಟಿದ್ದ ಎಮ್ಮೆಯನ್ನು ಕೊಂದಿದೆ.
ರೈತ ಮಾತನಾಡಿ ನಮ್ಮ ಗ್ರಾಮದಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದೇವೆ. ಬೋನ್ ಇರಿಸಿ ಚಿರತೆ ಸೆರೆ ಹಿಡಿಯುವ ಕೆಲಸ ಮಾಡಿಲ್ಲ. ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಕ್ರಮ ಜರುಗಿಸಬೇಕು ಎಂದರು. ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ನೀಡಲಾಗುವುದು ಹಾಗೂ ಬೋನ್ ಇರಿಸಲಾಗುವುದು ಎಂದರು.
ಅರಣ್ಯ ಇಲಾಖೆ ಸಿಬ್ಬಂದಿ ಶಿವಮೂರ್ತಿ, ಪಶು ಆಸ್ಪತ್ರೆ ಪರೀಕ್ಷಕ ಡಾ. ತ್ಯಾಗರಾಜು ಸಿಬ್ಬಂದಿ ಮಂಜು, ಗ್ರಾಮಸ್ಥರು ತಂಡದಲ್ಲಿದ್ದರು.