ಸೋಮವಾರ, ಮಾರ್ಚ್ 8, 2021
27 °C

ಗ್ರಾಮ ಪಂಚಾಯಿತಿ ಚುನಾವಣಾ ಕಣಕ್ಕಿಳಿದ ಖಾಸಗಿ ಶಾಲೆ ಶಿಕ್ಷಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ತಾಲ್ಲೂಕಿನ ಪಾಲಹಳ್ಳಿ ಗ್ರಾಮ ಪಂಚಾಯಿತಿಯಿಂದ ಆಯ್ಕೆ ಬಯಸಿ ಖಾಸಗಿ ಶಾಲೆಯೊಂದರ ಶಿಕ್ಷಕಿ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಪಾಲಹಳ್ಳಿ ಗ್ರಾಮದ 2ನೇ ವಾರ್ಡ್‌ನಿಂದ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿರುವ ಜೆ.ಶ್ರುತಿ ಅವರು ಶ್ರೀರಂಗಪಟ್ಟಣ ಬಿಜಿಎಸ್‌ ಶಾಲೆಯಲ್ಲಿ ಎರಡು ವರ್ಷಗಳಿಂದ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.

ಎಂ.ಎ, ಬಿ.ಇಡಿ ಪದವೀಧರೆಯಾಗಿರುವ ಶ್ರುತಿ ಗ್ರಾಮ ಪಂಚಾಯಿತಿ ಪ್ರವೇಶಕ್ಕೆ ಉತ್ಸುಕರಾಗಿದ್ದಾರೆ. ಪಾಲಹಳ್ಳಿ ಗ್ರಾ.ಪಂ.ನ 2ನೇ ವಾರ್ಡ್‌ ಬಿಸಿಎಂ– ಬಿ ಮಹಿಳೆಗೆ ಮೀಸಲಾಗಿದೆ. ಈ ಕ್ಷೇತ್ರದಿಂದ ಆಯ್ಕೆ ಬಯಸಿ ಅವರು ಉಮೇದು ವಾರಿಕೆ ಸಲ್ಲಿಸಿದ್ದು, ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ.

‘ನನ್ನ ಪತಿ ವೆಂಕಟೇಶ್‌ ಮತ್ತು ಕುಟುಂಬ ಸದಸ್ಯರ ಸಲಹೆಯಂತೆ ಚುನಾವಣೆಗೆ ಸ್ಪರ್ಧಿಸಿದ್ದೇನೆ. ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಹಾಗಾಗಿ ಚುನಾವಣಾ ರಾಜಕಾರಣದ ಬಗ್ಗೆ ತುಸು ಆಸಕ್ತಿಯೂ ಇದೆ. ಗೆಲ್ಲಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ’ ಎಂದು ಶ್ರುತಿ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು