ಕಿಕ್ಕೇರಿ: ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಲುಗ ಟೈಲರಿಂಗ್ ಉತ್ತಮ ಕಸುಬು ಆಗಿದೆ ಎಂದು ಕಿಕ್ಕೇರಿ ಗ್ರಾ.ಪಂ. ಪಿಡಿಒ ಸಿ. ಚಲುವರಾಜು ತಿಳಿಸಿದರು.

ಗ್ರಾ.ಪಂ. ಸ್ಥಳೀಯ ಸಂಪನ್ಮೂಲ ಅನುದಾನದಲ್ಲಿ ಎಸ್ಸಿ, ಎಸ್ಟಿ ಸಮುದಾಯದವರಿಗೆ ಸೋಮವಾರ ಉಚಿತ ಹೊಲಿಗೆ ಯಂತ್ರ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಫಲಾನುಭವಿಗಳು ಯಾವುದೇ ಕಾರಣಕ್ಕೂ ಸಮಸ್ಯೆ ಇದೆ ಎಂದು ಹೊಲಿಗೆ ಯಂತ್ರಗಳನ್ನು ಮಾರಾಟ ಮಾಡಬಾರದು. ದುರ್ಬಳಕೆ ಮಾಡಿಕೊಳ್ಳಬಾರದು. ಇದು ತಮ್ಮ ಕೌಟುಂಬಿಕ ಬದುಕು, ಜೀವನ ನಿರ್ವಹಣೆಗೆ ಆಸರೆಯಾಗಿದೆ ಎಂಬುದನ್ನು ಮರೆಯಬಾರದು ಎಂದರು.

ಗ್ರಾ.ಪಂ. ಅಧ್ಯಕ್ಷ ಕೆ.ಬಿ. ಚಂದ್ರಶೇಖರ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಬದುಕು ನಿರ್ವಹಣೆ ಕಷ್ಟವಿದೆ. ಕೆಳಸ್ತರದ ಸಮುದಾಯವಾದ ಎಸ್ಸಿ, ಎಸ್ಟಿ ಸಮುದಾಯವರನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಈ ಯೋಜನೆ ರೂಪಿಸಿದೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಭಿಗಳಾಗಲು ಪ್ರಯತ್ನಿಸಿ ಎಂದು ಮನವಿ ಮಾಡಿದರು.

ಅರ್ಹ 16 ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು. ಉಪಾಧ್ಯಕ್ಷೆ ರೇಣುಕಮ್ಮ, ಸದಸ್ಯರಾದ ಪುಟ್ಟೇಗೌಡ, ಕೆ.ಆರ್. ಕೃಷ್ಣ, ತೇಜಸ್ವಿಕುಮಾರ್, ಕೆ.ಆರ್. ರಾಜೇಶ್, ಯೋಗೇಶ್, ಕೆ.ಪಿ. ಪುಟ್ಟರಾಜು, ಸುನೀತಾ, ಜ್ಯೋತಿ, ಸರಸ್ವತಿ, ಜಯಲಕ್ಷ್ಮೀ ಸದಸ್ಯರು, ಕಾರ್ಯದರ್ಶಿ ಪಾಪೇಗೌಡ, ಲೆಕ್ಕ ಸಹಾಯಕ ವಾಸು, ದಯಾನಂದ್, ಅರುಣಿ, ಗೋವಿಂದರಾಜು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.