ಶ್ರೀರಂಗಪಟ್ಟಣ: ದೇವಾಲಯಗಳ ನಗರಿ ಎಂದೇ ಪ್ರಸಿದ್ಧಿ ಪಡೆದಿರುವ ಪಟ್ಟಣದ ಐತಿಹಾಸಿಕ ಗಂಗಾಧರೇಶ್ವರಸ್ವಾಮಿ ದೇವಾಲಯದಲ್ಲಿ ಶಿವರಾತ್ರಿಯಂದು ಮೂಲ ದೇವರಿಗೆ ರತ್ನ ಖಚಿತ ಚಿನ್ನದ ಕವಚವನ್ನು ಧರಿಸಿ ಪೂಜಿಸಲಾಗುತ್ತದೆ.

ಗಂಗಾಧರೇಶ್ವರನ ಪರಮ ಭಕ್ತರಾಗಿದ್ದ ಪಟ್ಟಣದ ಚೌಬಿನಿ ದೊಡ್ಡ ಸುಬ್ಬಯ್ಯ ಎಂಬುವವರು ನೂರು ವರ್ಷಗಳ ಹಿಂದೆ ಈ ದೇವಾಲಯಕ್ಕೆ ಈ ರತ್ನ ಖಚಿತ ಕವಚವನ್ನು ನೀಡಿದ್ದಾರೆ. 72 ತೊಲ ಶುದ್ಧ ಬಂಗಾರದ ಸುವರ್ಣ ಕವಚದಲ್ಲಿ ಒಟ್ಟು ವಜ್ರ ಸೇರಿದಂತೆ 12 ರತ್ನದ ಹರಳುಗಳಿವೆ. ಸುವರ್ಣ ಕವಚದ ಉರಿಗಣ್ಣಿನ ಭಾಗದಲ್ಲಿ 9, ತಲೆ ಭಾಗದಲ್ಲಿರುವ ಗಂಗೆಯ ಮುಡಿಯಲ್ಲಿ ಮೂರು ಹರಳುಗಳಿವೆ. ಮಧ್ಯದಲ್ಲಿರುವ ಮರಕತ ಹರಳು ಆಕರ್ಷಕವಾಗಿದೆ.

ಕವಚದ ಮೇಲೆ ಚೌಬಿನಿ ದೊಡ್ಡ ಸುಬ್ಬಯ್ಯ ಅವರು ಚಾತುರ್ಯುಗ ಮೂರ್ತಿ ಶ್ರೀ ಗಂಗಾಧರೇಶ್ವರನಿಗೆ 10–01–1923ರಲ್ಲಿ ಸಮರ್ಪಿಸಿದ ಬಂಗಾರದ ಕವಚ ಎಂದು ಇಂಗ್ಲಿಷ್ನಲ್ಲಿ ಬರೆಯಲಾಗಿದೆ.

‘ಮಳೆ, ಬೆಳೆ ಸಮೃದ್ಧಿಯಾಗಲಿ. ಕ್ಷಾಮ– ಡಾಮರಗಳು ಬಾರದಿರಲಿ ಎಂದು ಪ್ರಾರ್ಥಿಸಿ ಈ ಊರಿನ ಯಜಮಾನರಾಗಿದ್ದ ನಮ್ಮ ತಾತ ಚೌಬಿನಿ ದೊಡ್ಡ ಸುಬ್ಬಯ್ಯ ಅವರು, ಇಂದಿಗೆ ನೂರು ವರ್ಷಗಳ ಹಿಂದೆ ಬಂಗಾರದ ಕವಚವನ್ನು ಗಂಗಾಧರೇಶ್ವರನಿಗೆ ಸಮರ್ಪಿಸಿದ್ದಾರೆ’ ಎಂದು ಪಟ್ಟಣದ ಕೃಷ್ಣ ರಾಜೇಂದ್ರ ಸೊಸೈಟಿಯ ಮಾಜಿ ಅಧ್ಯಕ್ಷ ಸಿ. ವಸಂತಕುಮಾರ್ ಹೇಳುತ್ತಾರೆ.

ಜಡೆ ಗಂಗಾಧರ, ನಡು ಹೊಳೆ ಗಂಗಾಧರ ಇತ್ಯಾದಿ ಹೆಸರಿನಿಂದ ಕರೆಯಲ್ಪಡುವ ಗಂಗಾಧರೇಶ್ವರನಿಗೆ ಮಹಾ ಶಿವರಾತ್ರಿ ಮತ್ತು ಕಡೇ ಕಾರ್ತಿಕ ಸೋಮವಾರದಂದು ವರ್ಷದಲ್ಲಿ ಎರಡು ಬಾರಿ ರತ್ನ ಖಚಿತ ಚಿನ್ನದ ಕವಚ ಧಾರಣೆ ಮಾಡಲಾಗುತ್ತದೆ. ಸದ್ಯ ಈ ಕವಚ ತಾಲ್ಲೂಕು ಆಡಳಿತದ ಸುಪರ್ದಿಯಲ್ಲಿದೆ.

5 ದಿನಗಳ ಪೂಜೆ: ದೇವಾಲಯದಲ್ಲಿ ಶಿವರಾತ್ರಿ ನಿಮಿತ್ತ 5 ದಿನಗಳ ಕಾಲ ಪೂಜೆ ನಡೆಯುತ್ತವೆ. ಪಂಚಾಮೃತ ರುದ್ರಾಭಿಷೇಕ, ಜಾವದ ಪೂಜೆಗಳು, ಎರಡನೇ ದಿನ ರಾಜ ಬೀದಿಗಳಲ್ಲಿ ರಥೋತ್ಸವ ಜರುಗುತ್ತದೆ. ಅನ್ನ ಸಂತರ್ಪಣೆ ಇರುತ್ತದೆ.

ಚೋಳರ ಕಾಲದ ಈ ದೇವಾಲಯ ದಲ್ಲಿ ಅರುಣಾಚಲೇಶ್ವರ ಸೇರಿ 7 ಶಿವಲಿಂಗಳು ಹಾಗೂ ತಮಿಳುನಾಡಿನ 15 ಶೈವ ಭಕ್ತರ ವಿಗ್ರಹಗಳಿವೆ. ಹೊಯ್ಸ ಳರು, ವಿಜಯನಗರದ ಅರಸರು, ಒಡೆಯರ್ ಮತ್ತು ದಳವಾಯಿಗಳ ಕಾಲದಲ್ಲಿ ಇದು ಅಭಿವೃದ್ಧಿಯಾಗಿದೆ. ರಣಧೀರ ಕಂಠೀರವ ನರಸರಾಜ ಒಡೆಯರ್ (ಕ್ರಿ.ಶ.1638–59) ತಮ್ಮ ತಾಯಿಯ ಕೋರಿಕೆ ಮೇರೆಗೆ ಪಂಚಲಿಂಗಗಳನ್ನು ಸ್ಥಾಪಿಸಿದ್ದಾರೆ.

ದ್ರಾವಿಡ ಶೈಲಿಯ ಗಂಗಾಧರೇಶ್ವರಸ್ವಾಮಿ ದೇಗುಲಕ್ಕೆ ಸಂಬಂಧಿಸಿದ ಐದು ಶಾಸನಗಳಿದ್ದು, ಕಾರಗನಹಳ್ಳಿ ನಂಜೆಯರಾಜನು ಭೂ ದಾನ ಮಾಡಿದನೆಂದು, ಶಿವರಾಮ ಪಂಡಿತನು ತಾಂಡವೇಶ್ವರ ಪ್ರತಿಮೆ ಹಾಗೂ ಮೈಸೂರಿನ ದಳವಾಯಿ ನಂಜರಾಜಯ್ಯನು ಪಂಚ ಲೋಹದ ದಕ್ಷಿಣಾಮೂರ್ತಿ ವಿಗ್ರಹವನ್ನು ದೇವಾಲ ಯಕ್ಕೆ ಅರ್ಪಿಸಿದ್ದಾರೆ ಎಂದು ತಿಳಿಸುತ್ತವೆ.

‘ಮಹಾ ಶಿವರಾತ್ರಿ ನಿಮಿತ್ತ ಗಂಗಾಧರನಿಗೆ 5 ದಿನಗಳ ಕಾಲ ಪೂಜೆ ನಡೆಯುತ್ತದೆ. ಈ ಬಾರಿ ಶಿವರಾತ್ರಿ ಮಾಘ ಮಾಸದ ಶನಿವಾರ ಬಂದಿದ್ದು, ಶನಿ ಪ್ರದೋಷ ಪೂಜೆಯನ್ನು ಏರ್ಪಡಿಸಲಾಗಿದೆ. ದೇವರಿಗೆ ಧರಿಸುವ ಸುವರ್ಣ ಕವಚ ಕಳುಹಿಸಿಕೊಡುವಂತೆ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಗಿದೆ’ ಎಂದು ದೇವಾಲಯದ ಅರ್ಚಕ ವಿದ್ಯಾ ಶಂಕರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.