ಶ್ರೀರಂಗಪಟ್ಟಣ: ಮಹಾ ಶಿವರಾತ್ರಿ ನಿಮಿತ್ತ ಪಟ್ಟಣದ ಸಮೀಪದ ಚಿಕ್ಕ ಗೋಸಾಯಿಘಾಟ್ನ ಐತಿಹಾಸಿಕ ಕಾಶಿ ವಿಶ್ವನಾಥಸ್ವಾಮಿಗೆ ಶನಿವಾರ ವಿಶೇಷ ಪೂಜೆಗಳು ನಡೆದವು.

ಮೈಸೂರಿನ ತ್ರಿಪುರ ಭೈರವಿ ಮಠದ ಮುಖ್ಯಸ್ಥರಾದ ಶ್ರೀಕೃಷ್ಣ ಮೋಹನಾನಂದಗಿರಿ ಅವರ ನೇತೃತ್ವದಲ್ಲಿ ಅರ್ಚನೆ, ಅಭಿಷೇಕಗಳು ಜರುಗಿದವು. ಶಿವಲಿಂಗಕ್ಕೆ ಮಹಾದೇವನ ಕವಚ ತೊಡಿಸಿ ಮಹಾ ಪೂಜೆ ನೆರವೇರಿಸಲಾಯಿತು. ಬಳಿಕ ಪ್ರಸಾದ ವಿತರಿಸಲಾಯಿತು.

ಕೂಡಲಕುಪ್ಪೆ: ಗ್ರಾಮದ ಶಕ್ತಿ ಶನೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆದವು. ಶನಿದೇವರ ಉತ್ಸವ ಮೂರ್ತಿಯನ್ನು ಲೋಕಪಾವನಿ ನದಿಯಲ್ಲಿ ಶುದ್ಧೀಕರಿಸಿ ದೇವಾಲಯದ ವರೆಗೆ ಮೆರವಣಿಗೆಯಲ್ಲಿ ತರಲಾಯಿತು. ದೇವಾಲಯದ ಅರ್ಚಕ ಗೌತಮ್ ಉತ್ಸವ ಮೂರ್ತಿಯನ್ನು ಹಿಡಿದು ಹೆಜ್ಜೆ ಹಾಕಿದರು. ದಾರಿಯುದ್ದಕ್ಕೂ ಭಜನೆ ನಡೆಯಿತು.

ಉತ್ಸವ: ಪಟ್ಟಣ ಸಮೀಪದ ದೊಡ್ಡ ಗೋಸಾಯಿಘಾಟ್ನ ವಿಶ್ವನಾಥಸ್ವಾಮಿಯ ಕಿರು ಉತ್ಸವ ಪಟ್ಟಣ ಮತ್ತು ಗಂಜಾಂನ ಮುಖ್ಯ ಬೀದಿಗಳಲ್ಲಿ ಶನಿವಾರ ನಡೆಯಿತು.

ಪಟ್ಟಣದ ಗಂಗಾಧರೇಶ್ವರಸ್ವಾಮಿ ದೇವಾಲಯದಿಂದ ಉತ್ಸವ ಮೂರ್ತಿಯನ್ನು ದೊಡ್ಡ ಗೋಸಾಯಿಘಾಟ್ ವರೆಗೆ ಮೆರವಣಿಗೆ ಯಲ್ಲಿ ಕೊಂಡೊ ಯ್ಯಲಾಯಿತು.

ಗೋಸಾಯಿಘಾಟ್ ಬಳಿಯ ದೇವಾಲಯದಲ್ಲಿ ಮೂಲ ಮೂರ್ತಿಗೆ ಅಭಿಷೇಕ, ಬಿಲ್ವಾರ್ಚನೆಗಳು
ನಡೆದವು.

ಗಂಗಾಧರೇಶ್ವರ: ಪಟ್ಟಣದ ಗಂಗಾಧರೇಶ್ವರಸ್ವಾಮಿ ದೇವಾಲಯ ದಲ್ಲಿ ಶಿವಲಿಂಗಕ್ಕೆ ಶನಿವಾರ ರತ್ನ ಖಚಿತ ಚಿನ್ನದ ಕವಚವನ್ನು ಧರಿಸಿ ಪೂಜಿಸಲಾಯಿತು. ದೇವಾಲಯದ ಅರ್ಚಕ ವಿದ್ಯಾಶಂಕರ್ ನೇತೃತ್ವದಲ್ಲಿ ಧಾರ್ಮಿಕ ವಿಧಿ, ವಿಧಾನಗಳು ಜರುಗಿದವು. ಭಾನುವಾರ ಬೆಳಿಗ್ಗೆ 9 ಗಂಟೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗಂಗಾಧರೇಶ್ವರನ ರಥೋತ್ಸವ ನಡೆಯಲಿದೆ.

ಪಟ್ಟಣದ ಜೋತಿರ್ ಮಹೇಶ್ವರ, ತಾಲ್ಲೂಕಿನ ದೊಡ್ಡೇಗೌಡನಕೊಪ್ಪಲಿನ ಓಂಕಾರೇಶ್ವರ, ಮರಳಾಗಾಲದ ಮರಡಿಲಿಂಗೇಶ್ವರ, ಅರಕೆರೆಯ ಮರಳೇಶ್ವರ, ಕೆಆರ್ಎಸ್ ಗ್ರಾಮದ ಚಂದ್ರಮೌಳೇಶ್ವರ, ಮಹದೇವಪುರದ ಕಾಶಿ ವಿಶ್ವನಾಥ, ಮಂಡ್ಯಕೊಪ್ಪಲು ಬಳಿಯ ಕಾವೇರಿ ಬೋರೇದೇವರು, ಆಲಗೂಡಿನ ಸಿದ್ದೇಶ್ವರ ಇತರ ದೇವಾಲಯಗಳಲ್ಲಿ ಮಹಾ ಶಿವರಾತ್ರಿಯ ಅಂಗವಾಗಿ ವಿಶೇಷ ಪೂಜೆಗಳು ನಡೆದವು. ಭಕ್ತರು ದೇವರ ದರ್ಶನ ಪಡೆದರು. ಪ್ರಸಾದ ವಿತರಣೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.