ಶ್ರೀರಂಗಪಟ್ಟಣ: ತಾಲ್ಲೂಕಿನ ಬಲಮುರಿ ಪ್ರಕೃತಿ ತಾಣದ ಸಮೀಪ ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಮೃತಪಟ್ಟಿರುವ ಘಟನೆ ಗುರುವಾರ ಸಂಜೆ ನಡೆದಿದೆ.

ಚಾಮರಾಜನಗರ ಜಿಲ್ಲೆ, ಸಂತೆಮರಹಳ್ಳಿ ಹೋಬಳಿ, ಕಮರವಾಡಿ ಗ್ರಾಮದ ಮೋಹನಕುಮಾರ್ (21) ಮತ್ತು ಮೈಸೂರು ತಾಲ್ಲೂಕು ಜಯಪುರ ಹೋಬಳಿ ಕೆಲ್ಲಹಳ್ಳಿ ಗ್ರಾಮದ ರವಿಚಂದ್ರ (21) ಮೃತರು.

ಮೋಹನಕುಮಾರ್ ಅವರ ಮೃತದೇಹ ಪತ್ತೆಯಾಗಿದೆ. ರವಿಚಂದ್ರ ಅವರ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರೆದಿದೆ ಎಂದು ಕೆಆರ್ಎಸ್ ಪೊಲೀಸ್ ಠಾಣೆ ಪಿಎಸ್ಐ ರಮೇಶ ಕರ್ಕಿಕಟ್ಟಿ ತಿಳಿಸಿದ್ದಾರೆ.

ಮೈಸೂರಿನ ಕೇನ್ಸ್ ಸಂಸ್ಥೆಯ ನೌಕರರಾದ ಮೋಹನಕುಮಾರ್, ರವಿಚಂದ್ರ ಮತ್ತು ಚಾಮರಾಜನಗರ ಜಿಲ್ಲೆ ಸಿಂಗಾನಲ್ಲೂರಿನ ವಿಕಾಸ್ ಎಂಬವರು ಬೈಕ್ನಲ್ಲಿ ಗುರುವಾರ ಸಂಜೆ ಇಲ್ಲಿಗೆ ವಿಹಾರಕ್ಕೆ ಬಂದಿದ್ದರು. ಬಲಮುರಿ ಪ್ರಕೃತಿ ತಾಣಕ್ಕೆ ಪರ್ಲಾಂಗು ದೂರದ ಎಡತಿಟ್ಟು ದ್ವೀಪದ ಬಳಿ ಈಜಲು ಕಾವೇರಿ ನದಿಗೆ ಇಳಿದಿದ್ದರು.

‘ನದಿಯಲ್ಲಿ ಈಜುವ ವೇಳೆ ರವಿಚಂದ್ರ ನೀರಿನಲ್ಲಿ ಮುಳುಗಿದ. ಆತನನ್ನು ರಕ್ಷಿಸಲು ಮುಂದಾದ ಮೋಹನ್ಕುಮಾರ್ ಕೂಡ ನೀರಿನಲ್ಲಿ ಮುಳುಗಿದ’ ಎಂದು ಜತೆಯಲ್ಲಿದ್ದ ವಿಕಾಸ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಕೆಆರ್ಎಸ್ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿಷೇಧಾಜ್ಞೆ ಉಲ್ಲಂಘನೆ ಆರೋಪ: ಬಲಮುರಿ ಮತ್ತು ಆಸುಪಾಸಿನಲ್ಲಿ ತಾಲ್ಲೂಕು ಆಡಳಿತ ನಿಷೇಧಾಜ್ಞೆ ಜಾರಿ ಮಾಡಿದೆ. ಆದರೂ ಪ್ರವಾಸಿಗರು ನದಿಗೆ ಇಳಿಯುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಬೆಳಗೊಳ ಕುಮಾರ್ ಇತರರು ದೂರಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-40-1155591046

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.