ಬುಧವಾರ, ಏಪ್ರಿಲ್ 14, 2021
31 °C

ಗವಿಮಠ: ಸಿದ್ಧಲಿಂಗೇಶ್ವರ ರಥೋತ್ಸವ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆ.ಆರ್‌.ಪೇಟೆ: ತಾಲ್ಲೂಕಿನ ಶರಣ ಶ್ರದ್ಧಾ ಕೇಂದ್ರವಾಗಿರುವ ಕಾಪನಹಳ್ಳಿ ಗವಿಮಠದ ಸ್ವತಂತ್ರ ಸಿದ್ಧಲಿಂಗೇಶ್ವರ ಕ್ಷೇತ್ರದಲ್ಲಿ ಭಾನುವಾರ ಬ್ರಹ್ಮರಥೋತ್ಸವವು ನಡೆಯಿತು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನೆ ದೇವರಾಗಿ ರುವ ಕಾಪನಹಳ್ಳಿ ಗವಿಮಠವು ಪವಾಡ ಪುರುಷರಾದ ಸ್ವತಂತ್ರ ಸಿದ್ಧಲಿಂಗೇಶ್ವರರು ಜೀವಂತವಾಗಿ ಸಮಾಧಿಯಾಗಿರುವ ಗದ್ದುಗೆಯನ್ನು ಹೊಂದಿದೆ.

ಎಡೆಯೂರು ಸಿದ್ಧಲಿಂಗೇಶ್ವರರ ದೇವಾಲಯದಂತೆ ತಾಲ್ಲೂಕಿನಲ್ಲಿ ಪ್ರಖ್ಯಾತವಾಗಿದೆ. ಕ್ಷೇತ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನ ಪಡೆದು ರಥೋತ್ಸವದಲ್ಲಿ ಭಾಗವಹಿಸಿ ಹಣ್ಣು- ಜವನವನ್ನು ರಥಕ್ಕೆ ಎಸೆದು ಜಯಘೋಷ ಕೂಗಿದರು.

ಗವಿಮಠದ ಪೀಠಾಧ್ಯಕ್ಷರಾದ ಚನ್ನವೀರಯ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಬೆಂಗಳೂರಿನ ಕೆಂಗೇರಿ ಉಪನಗರದ ಬಂಡೆಮಠದ ವತಿ ಯಿಂದ ನೀಡಲಾದ 32 ಅಡಿ ಎತ್ತರದ ರಥದಲ್ಲಿ ಸ್ವತಂತ್ರ ಸಿದ್ಧಲಿಂಗೇಶ್ವರರ ಮೂರ್ತಿಯನ್ನಿರಿಸಿ ರಥೋತ್ಸವ ನಡೆಸಲಾಯಿತು.

ರಥೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮದ ಮುಖಂಡರು, ನಾಡಿನ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ಭಕ್ತರು ಭಾಗವಹಿಸಿದ್ದರು.

ತಹಶೀಲ್ದಾರ್‌ ಎಂ.ಶಿವಮೂರ್ತಿ ವಿಶೇಷ ಪೂಜೆ ಸಲ್ಲಿಸಿದರು. ಬಂಡೆ ಮಠದ ಶ್ರೀಗಳು, ಶ್ರೀಕ್ಷೇತ್ರದ ಪೀಠಾಧಿಪ ತಿಗಳು, ಗ್ರಾಮಸ್ಥರು, ಭಕ್ತರು ಇದ್ದರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.