ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂಕಿ ಭಾಂಬ್ರಿಗೆ ಜಯ

Last Updated 12 ಮಾರ್ಚ್ 2018, 20:27 IST
ಅಕ್ಷರ ಗಾತ್ರ

ಇಂಡಿಯಾನ ವೇಲ್ಸ್‌, ಅಮೆರಿಕ : ಭಾರತದ ಯೂಕಿ ಭಾಂಬ್ರಿ ವಿಶ್ವ ರ‍್ಯಾಂಕಿಂಗ್‌ನಲ್ಲಿ 12ನೇ ಸ್ಥಾನದಲ್ಲಿರುವ ಲೂಕಾಸ್‌ ಪುಯಿಲ್ಲೆ ಅವರನ್ನು ಮಣಿಸುವ ಮೂಲಕ ವೃತ್ತಿಜೀವನದ ಶ್ರೇಷ್ಠ ಗೆಲುವು ಸಾಧಿಸಿದ್ದಾರೆ.

ಈ ಮೂಲಕ ಇಂಡಿಯಾನ ವೇಲ್ಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಯೂಕಿ ಮೂರನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.

110ನೇ ರ‍್ಯಾಂಕಿಂಗ್ ಹೊಂದಿರುವ ಯೂಕಿ ಪುರುಷರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ 6–4, 6–4ರಲ್ಲಿ ಲೂಕಾಸ್‌ಗೆ ಆಘಾತ ನೀಡಿದರು. ಒಂದು ಗಂಟೆ 19 ನಿಮಿಷದ ಪೈಪೋಟಿಯಲ್ಲಿ ಅವರು ಫ್ರೆಂಚ್ ಆಟಗಾರನನ್ನು ಮಣಿಸಿದರು.

2017ರ ಆಗಸ್ಟ್‌ನಲ್ಲಿ ನಡೆದ ಸಿಟಿ ಓಪನ್ ಟೂರ್ನಿಯಲ್ಲಿ ಯೂಕಿ ಹಾಲಿ ಚಾಂಪಿಯನ್‌ ಗಾಲ್ ಮೊನ್‌ಫಿಲ್ಸ್‌ ವಿರುದ್ಧ ಗೆಲುವು ದಾಖಲಿಸಿದ್ದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಗಾಲ್‌ 22ನೇ ಸ್ಥಾನದಲ್ಲಿದ್ದರು. ಇಂಡಿಯಾನ ವೇಲ್ಸ್ ಟೂರ್ನಿಯ ಮುಂದಿನ ಪಂದ್ಯದಲ್ಲಿ ಯೂಕಿ ಅಮೆರಿಕದ ಸ್ಯಾಮ್‌ ಕ್ವೆರಿ ಅವರನ್ನು ಎದುರಿಸಲಿದ್ದಾರೆ. ಸ್ಯಾಮ್‌ 6–4, 7–5ರಲ್ಲಿ ಜರ್ಮನಿಯ ಮಿಚಾ ಜ್ವೆರೆವ್‌ ಎದುರು ಗೆದ್ದಿದ್ದಾರೆ.

ಅಲೆಕ್ಸಾಂಡರ್‌ಗೆ ಆಘಾತ: ವಿಶ್ವ ರ‍್ಯಾಂಕಿಂಗ್‌ನಲ್ಲಿ ಐದನೇ ಸ್ಥಾನದಲ್ಲಿರುವ ಅಲೆಕ್ಸಾಂಡರ್‌ ಜ್ವೆರವ್‌ 7–5, 5–7, 6–4ರಲ್ಲಿ 85ನೇ ರ‍್ಯಾಂಕ್‌ನ ಆಟಗಾರ ಜಾವೊ ಸೌಸಾ ಎದುರು ಸೋತಿದ್ದಾರೆ. ಮೂರನೇ ಸುತ್ತಿನಲ್ಲಿ ಸೌಸಾ ಕೆನಡಾದ ಮಿಲೋಸ್ ರಾನಿಕ್ ಎದರು ಪೈಪೋಟಿ ನಡೆಸಲಿದ್ದಾರೆ. ಮಿಲೋಸ್‌ 6–4, 6–4ರಲ್ಲಿ ಫೆಲಿಕ್ಸ್‌ ಅಗರ್‌ ಎದುರು ಗೆದ್ದಿದ್ದಾರೆ.

ಜೊಕೊವಿಚ್‌ಗೆ ಸೋಲು: ಐದು ಬಾರಿ ಇಲ್ಲಿ ಚಾಂಪಿಯನ್ ಆಗಿರುವ ಸರ್ಬಿಯಾದ ನೊವಾಕ್ ಜೊಕೊವಿಚ್‌ 6-7, 4–6, 6–1ರಲ್ಲಿ ಜಪಾನ್‌ನ ತರೋ ಡೇನಿಯಲ್ ಎದುರು ನಿರಾಸೆ ಅನುಭವಿಸಿದ್ದಾರೆ. ರೋಜರ್ ಫೆಡರರ್‌ 6–3, 7–6ರಲ್ಲಿ ಫೆಡೆರಿಕೊ ಡೆಲ್‌ಬೊನಿಸ್ ಅವರನ್ನು ಮಣಿಸಿ ಮೂರನೇ ಸುತ್ತು ಪ್ರವೇಶಿಸಿದರು.

ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯಗಳಲ್ಲಿ ಸಿಮೊನಾ ಹಲೆಪ್‌ 1–6, 7–6ರಲ್ಲಿ ಡೊಲೆಹಿಡೆ ಅವರನ್ನು ಮಣಿಸಿದರು. ವಿಂಬಲ್ಡನ್‌ ಚಾಂಪಿಯನ್ ಪೆಟ್ರಾ ಕ್ವಿಟೋವಾ 2–6, 4–6ರಲ್ಲಿ 149ನೇ ರ‍್ಯಾಂಕ್‌ನ ಅನಿಸಿಮೊವಾ ಎದುರು ಸೋತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT