ಮಂಡ್ಯ: ರಜೆ ಮೇಲೆ ಬಂದಿದ್ದ ಯೋಧ ರಾಘವೇಂದ್ರ ಅವರು ಭಾರತೀಯ ಸೇನೆಯ ತುರ್ತು ಕರೆಯ ಮೇರೆಗೆ ಭಾನುವಾರ ಕರ್ತವ್ಯಕ್ಕೆ ತೆರಳಿದರು.

ತಾಲ್ಲೂಕಿನ ಹಲ್ಲೇಗೆರೆ ಗ್ರಾಮದ ಸುಬ್ಬೇಗೌಡ ಹಾಗೂ ನಿಂಗಮ್ಮ ದಂಪತಿ ಎರಡನೇ ಪುತ್ರರಾದ ಇವರು ಮೊದಲಿಗೆ 2011ರ ಮಾ. 16ರಂದು ಗುಜರಾತ್ನ ಗಾಂಧಿಧಾಮ್ನಲ್ಲಿ ಮೊದಲು ಕರ್ತವ್ಯ ನಿರ್ವಹಿಸಿದ್ದರು. ನಂತರ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು.

ಮಹಾರಾಜ ನಗರ ಬಡಾವಣೆಯಲ್ಲಿ ಗೃಹಪ್ರವೇಶ ಇದ್ದುದರಿಂದ ಮೇ 12ರವರೆಗೂ ರಜೆ ಹಾಕಿ ಬಂದಿದ್ದರು. ಈಗ ಜಮ್ಮು ಕಾಶ್ಮೀರದ ಗಡಿ ಭಾಗ ಲಡಾಕ್ಗೆ ರಾಘವೇಂದ್ರ ಅವರನ್ನು ನಿಯೋಜಿಸಿದ್ದು, ಕರ್ತವ್ಯಕ್ಕೆ ತೆರಳಿದ ಇವರನ್ನು ಕುಟುಂಬದವರು ಹಾಗೂ ಬಡಾವಣೆಯ ನಿವಾಸಿಗಳು ಶುಭ ಹಾರೈಸಿ ಕಳುಹಿಸಿಕೊಟ್ಟರು.

ಬಡಾವಣೆಯ ಕಿರಣ್, ಲತಾ, ಸುನೀತಾ, ಅಶೋಕ್, ಗೋವಿಂದರಾಜು, ಕೃಷ್ಣಪ್ಪ, ರಾಮಲಿಂಗಯ್ಯ, ಮಹದೇವಸ್ವಾಮಿ, ನಟರಾಜು, ಕುಮಾರ್, ಕೆಂಪರಾಜು, ವೆಂಕಟರಾಮು, ರಾಘು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.