ಶ್ರೀರಂಗಪಟ್ಟಣ: ತಾಲ್ಲೂಕಿನ ಆಲಗೂಡು ಮತ್ತು ಆಸುಪಾಸಿನ ಗ್ರಾಮಗಳಲ್ಲಿ ಯುಗಾದಿ ಹಬ್ಬದ ನಿಮಿತ್ತ ನಾಲ್ಕು ದಿನಗಳ ಕಾಲ ನಡೆಯುವ ‘ಉಗಾದಿ ಉತ್ಸವ’ ಶನಿವಾರ ಆಲಗೂಡು ಗ್ರಾಮಕ್ಕೆ ತಲುಪಿತು.

ತಾಲ್ಲೂಕಿನ ಹುಂಜನಕೆರೆ ಗ್ರಾಮದಿಂದ ಆಲಗೂಡು ಗ್ರಾಮಕ್ಕೆ ಬಂದ ದೇವರ ಕೂಟಗಳಿಗೆ ಸಂಭ್ರಮದ ಸ್ವಾಗತ ದೊರೆಯಿತು. ಮಂಗಳ ವಾದ್ಯಗಳು ಮೊಳಗಿದವು. ಗ್ರಾಮದ ಮುಖ್ಯ ದ್ವಾರದಿಂದ ಸಿದ್ದೇಶ್ವರಸ್ವಾಮಿ ದೇವಾಲಯ ವರೆಗೆ ಪುಷ್ಪಾರ್ಚನೆ ನಡೆಯಿತು. ‘ಶನಿವಾರ ತಡರಾತ್ರಿ ಹೂ ಹೊಂಬಾಳೆಗಳಿಂದ ದೇವರನ್ನು ಸಿಂಗರಿಸಲಾಗುತ್ತದೆ. ಭಾನುವಾರ ಮುಂಜಾನೆವರೆಗೂ ಗ್ರಾಮದಲ್ಲಿ ಒಂಭತ್ತು ದೇವರ ಕೂಟಗಳ ಉತ್ಸವ ನಡೆಯಲಿದೆ. ಬೆಳಿಗ್ಗೆ 7 ಗಂಟೆಯಿಂದ ಸಾಮೂಹಿಕ ಅನ್ನ ಸಂತರ್ಪಣೆ ಆರಂಭವಾಗಲಿದೆ’ ಎಂದು ಗ್ರಾಮದ ಮುಖಂಡ ಸ್ವಾಮಿಗೌಡ ತಿಳಿಸಿದ್ದಾರೆ.

ಯುಗಾದಿ ಹಬ್ಬದ ದಿನ ಮಂಡ್ಯಕೊಪ್ಪಲು ಬಳಿಯ ಕಾವೇರಿ ನದಿ ದಂಡೆಯಲ್ಲಿರುವ ಬೋರೇದೇವರ ದೇವಾಲಯದಿಂದ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ವಿವಿಧ ಗ್ರಾಮಗಳ ಒಂಭತ್ತು ದೇವರ ಕೂಟಗಳ ಉತ್ಸವ ಆರಂಭವಾಗಿತ್ತು. ಮಂಡ್ಯಕೊಪ್ಪಲು, ಚಿಂದೇಗೌಡನಕೊಪ್ಪಲು, ಗೊಬ್ಬರಗಾಲ ಮಾರ್ಗವಾಗಿ ಶುಕ್ರವಾರ ಹುಂಜನಕೆರೆ ಗ್ರಾಮ ತಲುಪಿತ್ತು. ಹುಂಜನಕೆರೆಯಲ್ಲಿ ಜಾನಪದ ಕಲಾ ತಂಡಗಳ ಸಹಿತ ಇಡೀ ರಾತ್ರಿ ಮೆರವಣಿಗೆ ನಡೆಯಿತು.

ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮೂರು ದಿನಗಳ ಕಾಲ ಉತ್ಸವ ಯಶಸ್ವಿಯಾಗಿ ನಡೆದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-40-1156798811

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.