ಶ್ರೀರಂಗಪಟ್ಟಣ: ತಾಲ್ಲೂಕಿನ ಆರತಿನ ಉಕ್ಕಡ ಗ್ರಾಮದಲ್ಲಿ ಅಹಲ್ಯಾದೇವಿ ಮಾರಮ್ಮನ ಉತ್ಸವ ಮಂಗಳವಾರ ಸಂಭ್ರಮದಿಂದ ನಡೆಯಿತು.

ಮಾರಮ್ಮ ದೇವಿಯ ಸಂಸ್ಥಾಪನಾ ದಿನದ ಅಂಗವಾಗಿ ನಡೆದ ಉತ್ಸವ, ಸಮೀಪದ ಕ್ಯಾತನಹಳ್ಳಿ ಬಳಿಯ ಚಿಕ್ಕದೇವರಾಯಸಾಗರ ನಾಲೆಯಿಂದ ಆರಂಭವಾಯಿತು. ನಾಲೆಯ ಬಳಿ ದೇವಿಯ ಉತ್ಸವ ಮೂರ್ತಿಯನ್ನು ಶುದ್ಧೀಕರಿಸಿ ಹೂ, ಹೊಂಬಾಳೆ ಮುಡಿಸಿದ ಬಳಿಕ ಅಹಲ್ಯಾದೇವಿ ಮಾರಮ್ಮ ದೇವಾಲಯ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಎಂ. ಚಂದ್ರು ಉತ್ಸವಕ್ಕೆ ಚಾಲನೆ ನೀಡಿದರು. ಉತ್ಸವ ಸಾಗಿದ ಮಾರ್ಗದ ಉದ್ದಕ್ಕೂ ಈಡುಗಾಯಿ ಮತ್ತು ಕರ್ಪೂರದ ಸೇವೆಗಳು ನಡೆದವು. ಮಹಿಳೆಯರು ಪೂರ್ಣಕುಂಭ ಹೊತ್ತು ಹೆಜ್ಜೆ ಹಾಕಿದರು. ಡೊಳ್ಳು ಕುಣಿತ, ವೀರಗಾಸೆ, ಚರ್ಮವಾದ್ಯ, ಪಟದ ಕುಣಿತ, ಸೋಮನ ಕುಣಿತ ಇತರ ಜಾನಪದ ಕಲಾ ತಂಡಗಳು ಉತ್ಸವಕ್ಕೆ ಮೆರುಗು ನೀಡಿದವು.

ಅಹಲ್ಯಾದೇವಿ ಮಾರಮ್ಮನ ದೇವಾಲಯದಲ್ಲಿ ಮೂಲ ದೇವರಿಗೆ ಅಭಿಷೇಕ, ಅರ್ಚನೆ, ಹೋಮ, ಪುಣ್ಯಾಹ ಇತರ ಧಾರ್ಮಿಕ ವಿಧಿ, ವಿಧಾನಗಳು ನಡೆದವು. ಮಹಿಳೆಯರು ಅಹಲ್ಯಾದೇವಿ ಮಾರಮ್ಮ, ಕೊಲ್ಲಾಪುರದಮ್ಮ ಮತ್ತು ಚಾಮುಂಡೇಶ್ವರಿ ದೇವತೆಗಳಿಗೆ ತಂಬಿಟ್ಟಿನ ಆರತಿ ಬೆಳಗಿದರು. ಹರಕೆ ಹೊತ್ತವರು ಬಾಯಿ ಬೀಗದ ಹರಕೆ ತೀರಿಸಿದರು.

ಗ್ರಾಮದ ಮಾರಿಗುಡಿ ವಂಶಸ್ಥರು ಹಾಗೂ ಮಂಚಮ್ಮನ ವಂಶಸ್ಥರಿಂದ ವಾಡಿಕೆಯಂತೆ ವಿಶೇಷ ಪೂಜೆಗಳು ನೆರವೇರಿದವು. ಗ್ರಾಮದ ಮುಖ್ಯ ಬೀದಿಗಳಲ್ಲಿ ಸಂಜೆ ಮಂಗಳವಾದ್ಯ ಸಹಿತ ನಡೆದ ಉತ್ಸವಕ್ಕೆ ಪ್ರತಿ ಮನೆಯ ಮುಂದೆ ಪೂಜೆ, ಪುನಸ್ಕಾರಗಳು ನಡೆದವು. ದಾರಿಯುದ್ದಕ್ಕೂ ದೇವರಿಗೆ ಪುಷ್ಪಾರ್ಚನೆ ಹಾಗೂ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.

‘ಎರಡೂವರೆ ಶತಮಾನಗಳ ಹಿಂದೆ ಗಂಗಾಮತಸ್ಥ ಜನಾಂಗದವರು ಆರತಿ ಉಕ್ಕಡ ಗ್ರಾಮದಲ್ಲಿ ಅಹಲ್ಯಾದೇವಿ ಮಾರಮ್ಮ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು, ನಿರಂತರವಾಗಿ ಪೂಜಾ ಕೈಂಕರ್ಯಗಳ ನಡೆಯುತ್ತಿವೆ. ದೇವಿಯ ಪ್ರತಿಷ್ಠಾಪನೆ ನಿಮಿತ್ತ ಪ್ರತಿ ವರ್ಷ ಉತ್ಸವ ನಡೆಸಲಾಗುತ್ತಿದೆ. ಅಹಲ್ಯಾದೇವಿಗೆ ರಾಜ್ಯ, ಹೊರ ರಾಜ್ಯಗಳಲ್ಲೂ ಭಕ್ತರಿದ್ದಾರೆ. ಅಮಾವಾಸ್ಯೆ, ಹುಣ್ಣಿಮೆ ಇತರ ವಿಶೇಷ ದಿನಗಳಂದು ಸಹಸ್ರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ’ ಎಂದು ಅಹಲ್ಯಾದೇವಿ ಮಾರಮ್ಮ ದೇವಾಲಯ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಎಂ. ಚಂದ್ರು ತಿಳಿಸಿದರು. ಗಂಗಾಮತಸ್ಥ ಕುಲದ ಮುಖಂಡರಾದ ಭೈರಪ್ಪ, ವಿಶ್ವೇಶ್ವರಯ್ಯ, ಮೊಳ್ಳೆ ಬೋರಯ್ಯ, ಲೋಕೇಶ್ ಸೇರಿದಂತೆ ಆಸುಪಾಸಿನ ಗ್ರಾಮಗಳ ನೂರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-40-1266022906

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.