ಶ್ರೀರಂಗಪಟ್ಟಣ: ತಾಲ್ಲೂಕಿನ ಆಲಗೂಡು ಮತ್ತು ಆಸುಪಾಸಿನ ಗ್ರಾಮಗಳಲ್ಲಿ ಯುಗಾದಿ ಹಬ್ಬದ ನಿಮಿತ್ತ 4 ದಿವಸ ನಡೆದ ಒಂಭತ್ತು ದೇವರ ಕೂಟಗಳ ‘ಉಗಾದಿ ಉತ್ಸವ’ ಭಾನುವಾರ ಸಂಪನ್ನಗೊಂಡಿತು.

ಆಲಗೂಡು ಗ್ರಾಮದಲ್ಲಿ ಶನಿವಾರ ತಡರಾತ್ರಿಯಿಂದ ಭಾನುವಾರ ಮುಂಜಾನೆವರೆಗೆ ಒಂಬತ್ತು ದೇವರ ಕೂಟಗಳ ಮೆರವಣಿಗೆ ವೈಭವದಿಂದ ನಡೆಯಿತು.

ಮೈಸೂರು ಜಿಲ್ಲೆಯ ಕಾಳಿಸಿದ್ದನಹುಂಡಿಯ ಬೀರೇಶ್ವರ, ಮಂಡ್ಯ ತಾಲ್ಲೂಕು ಉರಮಾರ ಕಸಲಗೆರೆಯ ಉರಮಾರಮ್ಮ ಮತ್ತು ಬೀರೇಶ್ವರ, ಆಲಗೂಡಿನ ಬೀರೇಶ್ವರ ಮತ್ತು ಸಿದ್ದೇಶ್ವರ, ಹುಂಜನಕೆರೆಯ ಚನ್ನೇಶ್ವರ, ಹೆಬ್ಬಾಡಿಹುಂಡಿಯ ಬೀರೇಶ್ವರ, ಬಳ್ಳೇಕೆರೆ ಗ್ರಾಮದ ಬೀರೇಶ್ವರ ದೇವರು ಮತ್ತು ಬಸವನ ಮೆರವಣಿಗೆ ಜರುಗಿತು.

ಊರಿನ ಪ್ರಮುಖ ಬೀದಿಗಳಲ್ಲಿ ಒಂದರ ಹಿಂದೆ ಒಂದರಂತೆ ಸಾಗಿದ ಉತ್ಸವಗಳಿಗೆ ಪ್ರತಿ ಮನೆಗಳ ಮುಂದೆ ಪೂಜೆ, ಪುನಸ್ಕಾರಗಳು ನಡೆದವು. ಹರಕೆ ಹೊತ್ತ ಭಕ್ತರು ಬಾಯಿ ಬೀಗ, ಈಡುಗಾಯಿ, ಕರ್ಪೂರದ ಸೇವೆಗಳನ್ನು ಸಲ್ಲಿಸಿದರು. ದಾರಿಯುದ್ದಕ್ಕೂ ಕಹಳೆಗಳು ಮೊಳಗಿದವು. ಊರಿನ ದೇವಾಲಯಗಳು ಮತ್ತು ಮುಖ್ಯ ಬೀದಿಗಳು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸಿದವು.

ಗ್ರಾಮದ ಸಿದ್ದೇಶ್ವರಸ್ವಾಮಿ ದೇವಾಲಯ ಬಳಿಯ ರಂಗ ಸ್ಥಳದಲ್ಲಿ ವೀರಗಾಸೆ, ಚರ್ಮವಾದ್ಯ, ಕಹಳೆ, ಪಟದ ಕುಣಿತ ಕಲಾವಿದರಿಂದ ಎರಡು ತಾಸು ರಂಗ ಕುಣಿತ ನಡೆಯಿತು. ನೆರೆದಿದ್ದವರು ತಮಟೆಗಳ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಆಗಸದಲ್ಲಿ ಬಾಣ, ಬಿರುಸುಗಳ ರಂಗು ಉಗಾದಿ ಉತ್ಸವಕ್ಕೆ ಮತ್ತಷ್ಟು ಮೆರಗು ನೀಡಿತು.

ನಸುಕಿನ ವೇಳೆಗೆ ಒಂಭತ್ತು ದೇವರ ಕೂಟಗಳನ್ನು ಸಿದ್ದೇಶ್ವರ ದೇವಾಲಯ ಮುಂದೆ ಇಳಿಸಿ ಅಂತಿಮ ಪೂಜೆ ಸಲ್ಲಿಸಲಾಯಿತು. ಜಿಲ್ಲೆ, ಹೊರ ಜಿಲ್ಲೆಗಳಿಂದ ಬಂದಿದ್ದ ಭಕ್ತರು ಸರದಿಯಂತೆ ಪೂಜೆ ಸಲ್ಲಿಸಿದರು. ದೇವಾಲಯದ ಆವರಣದಲ್ಲಿ ‘ಪರ’ (ಅನ್ನ ಸಂತರ್ಪಣೆ) ಏರ್ಪಡಿಸಲಾಗಿತ್ತು. ಉಗಾದಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಭಕ್ತರು ರಾಗಿ ಮುದ್ದೆ, ಅವರೆ ಕಾಳು ಕೂಟು ಸವಿದರು. ಅನ್ನ ಸಂತರ್ಪಣೆಯೊಡನೆ ನಾಲ್ಕು ದಿನಗಳ ಉಗಾದಿ ಉತ್ಸವಕ್ಕೆ ತೆರೆ ಬಿದ್ದಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-40-191955591

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.