ಶ್ರೀರಂಗಪಟ್ಟಣ: ತಾಲ್ಲೂಕಿನ ಬಲ್ಲೇನಹಳ್ಳಿ ಬಳಿ ಇರುವ ಅಡಿಕೆ ತೋಟದಲ್ಲಿ ಶುಕ್ರವಾರ ಚಿರತೆಯೊಂದು ಹಗಲು ಹೊತ್ತಿನಲ್ಲೇ ಓಡಾಡಿದ್ದು ಆಸುಪಾಸಿನ ಗ್ರಾಮಗಳ ಜನರಲ್ಲಿ ಆತಂಕ ಹುಟ್ಟಿಸಿದೆ.

ಬಲ್ಲೇನಹಳ್ಳಿಯಿಂದ ಸಬ್ಬನಕುಪ್ಪೆ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿರುವ ಅಣ್ಣೇಗೌಡ ಎಂಬವರ ಅಡಿಕೆ ತೋಟ ಮತ್ತು ಲೋಕಪಾವನಿ ನದಿ ತೀರದಲ್ಲಿ ಚಿರತೆ ಓಡಾಡಿದೆ. ಈ ದೃಶ್ಯವನ್ನು ರೈತರು ಸೆರೆ ಹಿಡಿದಿದ್ದಾರೆ. ಚಿರತೆ ಓಡಾಡಿರುವ ವಿಡಿಯೋ ವೈರಲ್ ಆಗಿದ್ದು ಜನರು ಭಯ ಭೀತರಾಗಿದ್ದಾರೆ.

ಬಲ್ಲೇನಹಳ್ಳಿ, ಕೂಡಲಕುಪ್ಪೆ, ಚಂದಗಿರಿಕೊಪ್ಪಲು, ಸಬ್ಬನಕುಪ್ಪೆ, ಮಲ್ಲೇಗೌಡನಕೊಪ್ಪಲು, ಚಿನ್ನೇನಹಳ್ಳಿ, ಎಂ. ಶೆಟ್ಟಹಳ್ಳಿ ಗ್ರಾಮಗಳ ಸರಹದ್ದಿನಲ್ಲಿ ಹಲವು ದಿನಗಳಿಂದ ಚಿರತೆ ಮೇಲಿಂದ ಮೇಲೆ ಕಾಣಿಸಿಕೊಳ್ಳುತ್ತಿದೆ. ದೊಡ್ಡ ಚಿರತೆಯ ಜತೆಗೆ ಮರಿ ಚಿರತೆಯೂ ಇದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಏ.30ರಂದು ಎಂ. ಶೆಟ್ಟಹಳ್ಳಿ ಗ್ರಾಮದ ಎಂ.ಎಸ್. ಕುಮಾರ್ ಅವರ ಮೇಕೆಯನ್ನು ಚಿರತೆ ಕೊಂದು ಹಾಕಿತ್ತು.

‘ಚಿರತೆ ಹಾವಳಿಯಿಂದ ಮಹಿಳೆಯರು, ಮಕ್ಕಳು, ವೃದ್ಧರು ಒಂಟಿಯಾಗಿ ಓಡಾಡಲು ಭಯಪಡುತ್ತಿದ್ದಾರೆ. ಸಂಜೆ ವೇಳೆ ಮನೆಯಿಂದ ಹೊರ ಬರಲು ಜನರು ಹೆದರುತ್ತಿದ್ದಾರೆ. ಚಿರತೆಯನ್ನು ಸೆರೆ ಹಿಡಿದು ದೂರದ ಕಾಡಿಗೆ ಬಿಡಬೇಕು’ ಎಂದು ಚಂದಗಿರಿಕೊಪ್ಪಲು ಜ್ಞಾನೇಶ್, ಬಲ್ಲೇನಹಳ್ಳಿ ಸಂತೋಷಕುಮಾರ್ ಆಗ್ರಹಿಸಿದ್ದಾರೆ. ‘ಬಲ್ಲೇನಹಳ್ಳಿ ಮತ್ತು ಆಸುಪಾಸಿನಲ್ಲಿ ಕಾಣಿಸಿಕೊಂಡಿರುವ ಚಿರತೆ ಸೆರೆಗೆ ಬೋನು ಇರಿಸಲಾಗುವುದು’ ಎಂದು ಉಪ ವಲಯ ಅರಣ್ಯಾಧಿಕಾರಿ ಬಿ.ಎಂ. ನಾಗರಾಜು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-40-917610736

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.