ಶ್ರೀರಂಗಪಟ್ಟಣ: ಪಟ್ಟಣ ಸಮೀಪದ ಗಂಜಾಂ ಬಳಿಯ ದೊಡ್ಡ ಗೋಸಾಯಿಘಾಟ್ ಬಳಿ ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆಯನ್ನು ತಾಲ್ಲೂಕು ಆಡಳಿತ ನಿರ್ಬಂಧಿಸಿದ್ದರೂ ಅಸ್ಥಿ ವಿಸರ್ಜನೆ, ಪಿಂಡ ಪ್ರದಾನ ಇತರ ಕಾರ್ಯಗಳು ಅಡೆತಡೆಯಿಲ್ಲದೆ ನಡೆಯುತ್ತಿವೆ.

ದೊಡ್ಡ ಗೋಸಾಯಿಘಾಟ್ ಬಳಿಯ ಐತಿಹಾಸಿಕ ಕಾಶಿವಿಶ್ವನಾಥ ದೇಗುಲದ ಮುಂದೆಯೇ ಅಸ್ಥಿ ಕುಡಿಕೆ ಇಟ್ಟು ಪೂಜೆ ಮಾಡುವುದು, ಪಿಂಡ ಪೂಜೆ, ತಿಲ ತರ್ಪಣ, ನಾರಾಯಣ ಬಳಿ ಇತರ ಕೈಂಕರ್ಯಗಳು ನಿರಂತರವಾಗಿ ನಡೆಯುತ್ತಿವೆ. ಅಸ್ಥಿ (ಚಿತಾ ಭಸ್ಮ)ಯನ್ನು ನದಿಯಲ್ಲಿ ವಿಸರ್ಜಿಸಬಾರದು ಎಂಬ ನಿಯಮವನ್ನು ಪುರೋಹಿತರು ಉಲ್ಲಂಘಿಸಿಸುತ್ತಿದ್ದಾರೆ.

ಪ್ರತಿ ದಿನ ಸಾಕಷ್ಟು ಮಂದಿ ಸ್ಥಳೀಯ ಪುರೋಹಿತರ ನೇತೃತ್ವದಲ್ಲಿ ಕಾವೇರಿ ನದಿಯಲ್ಲಿ ಚಿತಾಭಸ್ಮವನ್ನು ವಿಸರ್ಜಿಸುತ್ತಿದ್ದಾರೆ. ಪಿಂಡ ಪ್ರದಾನ ಮಾಡುವವರು ಕೂಡ ಅನ್ನದ ಉಂಡೆ, ಅರಿಸಿನ, ಕುಂಕುಮ, ಎಳ್ಳು, ವಸ್ತ್ರ ಇತರ ವಸ್ತುಗಳನ್ನು ನದಿಗೆ ಹಾಕುತ್ತಿದ್ದಾರೆ. ಕೆಲವರು ತಮ್ಮ ಬಟ್ಟೆಗಳನ್ನು ಕೂಡ ನದಿಯಲ್ಲಿ ಬಿಡುತ್ತಿದ್ದಾರೆ. ಇದರಿಂದಾಗಿ ಇಲ್ಲಿ ನದಿಗೆ ಇಳಿದರೆ ಮೂಳೆ ಮತ್ತು ಮಡಕೆ ಚೂರುಗಳು ಕಾಲಿಗೆ ಚುಚ್ಚುತ್ತಿವೆ. ನದಿಗೆ ಇಳಿಯಲು ಜನರು ಹಿಂಜರಿಯುತ್ತಾರೆ.

ನದಿಯ ಮಾಲಿನ್ಯ ತಡೆಯಲು ಇಲ್ಲಿ ಚಿತಾಭಸ್ಮ ವಿಸರ್ಜಿಸುವುದನ್ನು ನಿಷೇಧಿಸಿ ಫಲಕ ಹಾಕಲಾಗಿದೆ. ವಿಪರ್ಯಾಸವೆಂದರೆ ಈ ಫಲಕದ ಪಕ್ಕದಲ್ಲೇ ಅಸ್ಥಿ ಮತ್ತು ಪಿಂಡಕ್ಕೆ ಪೂಜೆ ಮಾಡಿ ನದಿಯಲ್ಲಿ ವಿಸರ್ಜನೆ ಮಾಡಲಾಗುತ್ತಿದೆ.

‘ದೊಡ್ಡ ಗೋಸಾಯಿಘಾಟ್ನಲ್ಲಿ ಚಿತಾಭಸ್ಮಕ್ಕೆ ಪೂಜೆ ಮಾಡಿದ ಬಳಿಕ ತುಸು ದೂರ ತೆರಳಿ ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜಿಸಲಾಗುತ್ತದೆ. ದೇವಾಲಯ ಬಳಿ ಪಿಂಡ ಪೂಜೆ, ಪಿಂಡ ಪ್ರದಾನ ಮಾತ್ರ ನಡೆಯುತ್ತವೆ’ ಎಂದು ಸ್ಥಳದಲ್ಲಿ ಪಿಂಡ ಪೂಜೆ ಮಾಡಿಸುತ್ತಿದ್ದ ಪುರೋಹಿತ ಗೋಪಾಲಕೃಷ್ಣ ಶರ್ಮಾ ತಿಳಿಸಿದರು.

‘ದುರ್ನಾತ ಬೀರುತ್ತಿರುವ ನದಿಯ ನೀರು’

‘ಹೂವು, ಅಸ್ಥಿ, ಬಟ್ಟೆ, ಇಸ್ತ್ರಿ ಎಲೆಗಳನ್ನು ತಂದು ಕಾವೇರಿ ನದಿಗೆ ಹಾಕಲಾಗುತ್ತಿದೆ. ನದಿಯ ಒಳಗೆ ಮತ್ತು ದಡದಲ್ಲಿ ಯಥೇಚ್ಛವಾಗಿ ಬಟ್ಟೆಗಳು ಬಿದ್ದಿವೆ. ವಾಮಾಚಾರ ಮಾಡುವವರು ಕೋಳಿಗಳನ್ನು ಕೊಯ್ದು ನದಿಗೆ ಎಸೆಯುತ್ತಿದ್ದಾರೆ. ನದಿಯ ನೀರು ವಾಸನೆ ಬೀರುತ್ತಿದೆ. ನದಿ ದಡದಲ್ಲಿ ಫಲಕ ಹಾಕಿದ್ದರೂ ಯಾರು ಲೆಕ್ಕಿಸುತ್ತಿಲ್ಲ. ಹೀಗೇ ಆದರೆ ಕಾವೇರಿ ನದಿ ಕೊಳಚೆ ನೀರಿನ ಚರಂಡಿಯಾಗಲಿದೆ’ ಎಂದು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಟಿ.ಎಸ್. ಹರ್ಷ ಕಳವಳ ವ್ಯಕ್ತಪಡಿಸಿದ್ದಾರೆ.

ಶೌಚಾಲಯ ಬಂದ್: ಪ್ರವಾಸಿಗರ ಪರದಾಟ

‘ದೊಡ್ಡ ಗೋಸಾಯಿಘಾಟ್ ಬಳಿ ಕೆಲವರು ಕದ್ದುಮುಚ್ಚಿ ಅಸ್ಥಿ ವಿಸರ್ಜನೆ ಮಾಡುತ್ತಿದ್ದಾರೆ. ಶೌಚಾಲಯ ಬಂದ್ ಆಗಿ ವರ್ಷಗಳೇ ಕಳೆದಿದ್ದು ಇಲ್ಲಿಗೆ ಬರುವ ಪ್ರವಾಸಿಗರು ದೇಹಬಾಧೆ ತೀರಿಸಕೊಳ್ಳಲು ಬಯಲನ್ನೇ ಆಶ್ರಯಿಸಿದ್ದಾರೆ. ನದಿಗೆ ಇಳಿಯುವ ಸ್ಥಳದಲ್ಲಿ ಕಲ್ಲು ಚಪ್ಪಡಿಗಳು ಜಾರಿಕೊಂಡಿವೆ. ಈ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದೇನೆ’ ಎಂದು ಕಾಶಿ ವಿಶ್ವನಾಥ ದೇಗುಲದ ಅರ್ಚಕ ಕುಮಾರ ಸುಬ್ರಹ್ಮಣ್ಯ ಹೇಳಿದರು.

ಕಾಶಿವಿಶ್ವನಾಥ ದೇವಾಲಯದ ಬಳಿ ಅಸ್ಥಿ ವಿಸರ್ಜನೆ ಮಾಡುವುದನ್ನು ನಿರ್ಬಂಧಿಸಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.
-ಚೇತನಾ ಯಾದವ್, ತಹಶೀಲ್ದಾರ್, ಶ್ರೀರಂಗಪಟ್ಟಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.