ಶ್ರೀರಂಗಪಟ್ಟಣ: ಪಟ್ಟಣದ ಕಸಾಬರ ಮಾರಿಗುಡಿ ಬೀದಿಯ ಒಂದು ವರ್ಷದ ಮಗು ಲಿವರ್ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಮಗುವಿನ ಚಿಕಿತ್ಸೆಗಾಗಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ದೇಣಿಗೆ ಸಂಗ್ರಹಿಸಿದರು.

ವೇದಿಕೆ ಅಧ್ಯಕ್ಷ ಬಿ. ಶಂಕರಬಾಬು ಅವರ ನೇತೃತ್ವದಲ್ಲಿ ಪಟ್ಟಣದ ವಿವಿಧೆಡೆ ದೇಣಿಗೆ ಸಂಗ್ರಹಿಸಲಾಯಿತು. ರೈತರ ಶಾಲೆ ಸಂಸ್ಥಾಪಕ ಗಂಜಾಂ ಸತ್ಯಮೂರ್ತಿ ದೇಣಿಗೆ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಿದರು. ಕುವೆಂಪು ವೃತ್ತ, ಪುರಸಭೆ ವೃತ್ತ, ಅಂಬೇಡ್ಕರ್ ವೃತ್ತ, ಖಾಸಗಿ ಬಸ್ ನಿಲ್ದಾಣ, ಮುಖ್ಯ ರಸ್ತೆಯಲ್ಲಿ ದೇಣಿಗೆ ಸಂಗ್ರಹ ಕಾರ್ಯ ನಡೆಯಿತು. ಪಟ್ಟಣದ ವಿವಿಧೆಡೆ ಅಂಗಡಿ, ಹೋಟೆಲ್, ಮನೆಗಳಿಗೆ ಭೇಟಿ ನೀಡಿ ದೇಣಿಗೆ ಸಂಗ್ರಹಿಸಿದರು.

‘ಪಟ್ಟಣದ ಕಸಾಬರ ಮಾರಿಗುಡಿ ಬೀದಿಯ ಮನೋಜ್ ಮತ್ತು ಸಹನಾ ದಂಪತಿಯ ಪುತ್ರ ಒಂದು ವರ್ಷದ ಅನ್ವಿಕ್ ಲಿವರ್ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಚಿಕಿತ್ಸೆಗೆ ₹25 ಲಕ್ಷ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ಕೂಲಿ ಕೆಲಸ ಮಾಡುವ ಮಗುವಿನ ಪೋಷಕರು ಹಣ ಹೊಂದಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಸ್ಥಿತಿಯನ್ನು ಕಂಡು ನಮ್ಮ ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯರ್ತರು ವಯಕ್ತಿಕವಾಗಿ ನೆರವು ನೀಡುವ ಜತೆಗೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿಕೊಟ್ಟಿದ್ದೇವೆ. ಮಗು ಪ್ರಾಣಾಪಾಯದಿಂದ ಪಾರಾದರೆ ನಮ್ಮ ಈ ಕಾರ್ಯ ಸಾರ್ಥವಾಗುತ್ತದೆ’ ಎಂದು ವೇದಿಕೆ ಅಧ್ಯಕ್ಷ ಬಿ. ಶಂಕರಬಾಬು ಹೇಳಿದರು.

ಸಂಗ್ರಹವಾದ ₹24,500ವನ್ನು ಮಗವಿನ ಪೋಷಕರಿಗೆ ನೀಡಲಾಯಿತು. ಮಗುವಿನ ಚಿಕಿತ್ಸೆಗಾಗಿ ಹಣ ಸಂಗ್ರಹಿಸಿಕೊಟ್ಟು ಮಾನವೀಯತೆ ಮೆರೆದ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ವೇದಿಕೆಯ ಸಂಘಟನಾ ಕಾರ್ಯದರ್ಶಿ ಕೆ.ಎಸ್. ಜಗದೀಶ್, ವೀಣಾಬಾಯಿ, ರವಿಕುಮಾರ್, ಅಂಕಶೆಟ್ಟಿ, ಧನುಷ್, ಮಿಥುನ್ ದೇಣಿಗೆ ಸಂಗ್ರಹ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-40-26547706

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.