ಶ್ರೀರಂಗಪಟ್ಟಣ: ಕ್ರಿಕೆಟ್ ಬೆಟ್ಟಿಂಗ್ ಜಾಲವನ್ನು ಬೇಧಿಸಿರುವ ಪಟ್ಟಣ ಪೊಲೀಸ್ ಠಾಣೆ ಸಿಪಿಐ ಬಿ.ಜಿ. ಕುಮಾರ್ ನೇತೃತ್ವದ ಪೊಲೀಸರ ತಂಡ ಮಂಗಳವಾರ 7 ಮಂದಿ ಆರೋಪಿಗಳನ್ನು ಬಂಧಿಸಿದೆ.

ಕ್ರಿಕೆಟ್ ಬೆಟ್ಟಿಂಗ್ ಧಂಧೆಯ ಮುಖ್ಯ ಆರೋಪಿ ಮೈಸೂರು ವಿಜಯನಗರ 4ನೇ ಹಂತದ ನಿವಾಸಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ಪ್ರಮೋದ್. ಆರ್, ಮೈಸೂರಿನ ಮೇಟಗಳ್ಳಿಯ ಸೇಲ್ಸ್ಮನ್ ಶ್ರೀನಿವಾಸ್, ಮೈಸೂರಿನ ಊಟಗಳ್ಳಿಯ ಕೊರಿಯರ್ ಬಾಯ್ ಮನೋಜ್, ಪಟ್ಟಣದ ಪೂರ್ಣಯ್ಯ ಬೀದಿಯ ಗಣೇಶ್, ಗಂಗಾಮತಸ್ಥರ ಬೀದಿಯ ಕೃಷ್ಣ, ಸತ್ಯ ಹಾಗೂ ಚಿಕ್ಕ ಬಂಡಿಕೇರಿ ಬೀದಿಯ ಅಶೋಕ್ ಜಿ.ಎಸ್ ಎಂಬವರನ್ನು ಬಂಧಿಸಲಾಗಿದೆ. ಈ ಧಂಧೆಯಲ್ಲಿ ಮೈಸೂರು ಮತ್ತು ಶ್ರೀರಂಗಪಟ್ಟಣದ ಇನ್ನೂ ಹಲವರು ಭಾಗಿಯಾಗಿದ್ದು ಪತ್ತೆ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳು ಕ್ರಿಕೆಟ್ ಬೆಟ್ಟಿಂಗ್ಗೆ ಬಳಸುತ್ತಿದ್ದ 8 ಮೊಬೈಲ್ ಫೋನ್ಗಳು, 18 ಡೆಬಿಟ್ ಕಾರ್ಡ್ಗಳು ಹಾಗೂ ಮುಖ್ಯ ಆರೋಪಿ ಪ್ರಮೋದ್.ಆರ್ ಎಂಬಾತ ಬೆಟ್ಟಿಂಗ್ನಿಂದ ಗಳಿಸಿದ್ದು ಎನ್ನಲಾದ ರೂ.4.30 ಲಕ್ಷ ನಗದು ಮತ್ತು ಒಂದು ಥಾರ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಪಿಐ ಬಿ.ಜಿ. ಕುಮಾರ್ ತಿಳಿಸಿದ್ದಾರೆ.

ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಮೈದಾನದಲ್ಲಿ ಮೊಬೈಲ್ ಫೋನ್ ಬಳಸಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಬೆಟ್ಟಿಂಗ್ ಜಾಲ ಬೆಳಕಿಗೆ ಬಂದಿದೆ. ಎಸ್ಪಿ ಶೋಭಾರಾಣಿ ವಿ.ಜೆ ಮತ್ತು ಡಿವೈಎಸ್ಪಿ ಯು.ಡಿ. ಕೃಷ್ಣಕುಮಾರ್ ಅವರ ಮಾರ್ಗದರ್ಶನದಲ್ಲಿ ಆರೋಪಿಗಳ ಪತ್ತೆ ಕಾರ್ಯಾಚರಣೆ ನಡೆದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-40-1149731812

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.