ಶ್ರೀರಂಗಪಟ್ಟಣ: ತಾಲ್ಲೂಕಿನ ಪಾಲಹಳ್ಳಿ ಗ್ರಾಮದ ಪ್ರಸಿದ್ಧ ಕುಸ್ತಿಪಟು ಪೈಲ್ವಾನ್ ವಿಜೇಂದ್ರ (65) ಬುಧವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದರು.

ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಸ್ವಗ್ರಾಮದ ಅವರ ತೋಟದಲ್ಲಿ ಸಂಜೆ ಅಂತ್ಯ ಸಂಸ್ಕಾರ ನಡೆಯಿತು.

ಪಾಲಹಳ್ಳಿಯ ಹೋರಿ ತಿಮ್ಮೇಗೌಡ ಅವರ ಗರಡಿಯ ಕೆಮ್ಮಣ್ಣು ಮಟ್ಟಿಯ ಮೇಲೆ ಪೈ. ವಿಜೇಂದ್ರ ತಮ್ಮ 20ನೇ ವಯಸ್ಸಿನಲ್ಲಿ ಕುಸ್ತಿ ತಾಲೀಮು ಆರಂಭಿಸಿದರು. ಅವರ ತಂದೆ ಪೈ. ತುಂಗಣ್ಣ ಕೂಡ ಕುಸ್ತಿಪಟುವಾಗಿದ್ದರಿಂದ ಸಹಜವಾಗಿಯೇ ಇವರಲ್ಲಿ ಕುಸ್ತಿ ಕಲೆ ಬಗ್ಗೆ ಆಸಕ್ತಿ ಬೆಳೆದಿತ್ತು. ಉಸ್ತಾದ್ ಪೈ. ಹೊಂಬಾಳೇಗೌಡ ಅವರಿಂದ ವಿಜೇಂದ್ರ ಅವರು ಕುಸ್ತಿ ಕಲೆಯ ವಿವಿಧ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದರು.

ಮೈಸೂರು ದಸರಾ ಉತ್ಸವದ ನಿಮಿತ್ತ ನಡೆಯುವ ಕುಸ್ತಿ ಪಂದ್ಯಾವಳಿಯಲ್ಲಿ, 1988ನೇ ಸಾಲಿನ ‘ದಸರಾ ಕುಮಾರ್’ ಪ್ರಶಸ್ತಿಯನ್ನು ಪೈ. ವಿಜೇಂದ್ರ ಜಯಿಸಿದರು. ಬೆಳ್ಳಿ ಗದೆ ಗೆದ್ದು ಬಂದ ಪೈ.ವಿಜೇಂದ್ರ ಅವರನ್ನು ಸ್ವಗ್ರಾಮದ ಬೀದಿ ಬೀದಿಗಳಲ್ಲಿ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮಾಡಲಾಯಿತು. ‘ದಸರಾ ಕೇಸರಿ’ ಪ್ರಶಸ್ತಿ ಕೂದಲೆಳೆ ಅಂತರದಲ್ಲಿ ತಪ್ಪಿದ ಕೊರಗು ವಿಜೇಂದ್ರ ಅವರನ್ನು ಕಾಡುತ್ತಿತ್ತು.

‘ಮೈಸೂರಿನ ಕುಂಬಾರಕೊಪ್ಪಲಿನಲ್ಲಿ 1994ರಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಪೈ. ವಿಜೇಂದ್ರ ಮತ್ತು ಮೈಸೂರಿನ ಪೈ.ರಮೇಶ್ ನಡುವೆ ಮಾರ್ಫಿಟ್ ಕುಸ್ತಿ ನಡೆದು ಪೈ. ವಿಜೇಂದ್ರ ಗೆಲುವು ಸಾಧಿಸಿದರು. ಆದರೆ ಕುಸ್ತಿ ಮುಗಿದ ಬಳಿಕ ಗೊಂದಲ ಉಂಟಾಗಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ನಡೆಸಿದ ಗೋಲಿಬಾರ್ನಲ್ಲಿ ಕುಸ್ತಿಪ್ರೇಮಿಯೊಬ್ಬರು ಸಾವನ್ನಪ್ಪಿದರು’ ಎಂದು ಪೈ.ವಿಜೇಂದ್ರ ಅವರ ಆಪ್ತರಾದ ನಿವೃತ್ತ ಉಪನ್ಯಾಸಕ ಪಿ.ಡಿ. ತಿಮ್ಮಪ್ಪ ಸ್ಮರಿಸುತ್ತಾರೆ.

‘ಪೈ. ವಿಜೇಂದ್ರ ಅವರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ನೂರಾರು ಕುಸ್ತಿ ಪಂದ್ಯಗಳಲ್ಲಿ ಕಾದಾಟ ನಡೆಸಿದ್ದಾರೆ. ರಾಷ್ಟ್ರ ಮಟ್ಟದ ಕುಸ್ತಿಪಟುಗಳಾದ ಬೆಳಗಾಂನ ಮೌಲಾಸಾಬ್, ಹೈದರಾಬಾದ್ನ ಅಲ್ಲುಮಿಯಾ, ಬೆಂಗಳೂರಿನ ಎಕ್ಬಾಲ್, ನಂಜನಗೂಡಿನ ರಿಯಾಜ್ ಅವರಂತಹ ಘಟಾನುಘಟಿ ಪೈಲ್ವಾನರನ್ನು ಚಿತ್ ಮಾಡಿದ್ದರು. ‘ವಿಜಯ ಸಿಂಹ’ ಎಂಬ ಬಿರುದನ್ನೂ ಪಡೆದಿದ್ದರು. ಇಂದು ಅವರು ನಮ್ಮೊಡನೆ ಇಲ್ಲ ಎಂಬುದನ್ನು ಊಹಿಸಿಕೊಳ್ಳಲು ಆಗುತ್ತಿಲ್ಲ’ ಎಂದು ಪಾಲಹಳ್ಳಿಯ ಹಿರಿಯ ಕುಸ್ತಿಪಟು ಪೈ.ಮುಕುಂದ ಕಂಬನಿ ಮಿಡಿದರು.

ಮೈಸೂರು ನಗರ ಪೊಲೀಸ್ ಕಮೀಷನರ್ ಆಗಿದ್ದ ಡಿ.ಎನ್. ಮುನಿಕೃಷ್ಣ ಅವರ ಜತೆ ನಿಕಟ ಸಂಪರ್ಕ ಹೊಂದಿದ್ದ ಪೈ. ವಿಜೇಂದ್ರ ಕ್ರೀಡಾ ಕೋಟಾದಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಕೆಲಸ ಪಡೆದು ನಿವೃತ್ತರಾಗಿದ್ದರು.

ಡಿ.ಎನ್. ಮುನಿಕೃಷ್ಣ, ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗ ನಿರ್ದೇಶಕ ವೆಂಕಟೇಶ್ ಸೇರಿದಂತೆ ನೂರಾರು ಹಿರಿ, ಕಿರಿಯ ಕುಸ್ತಿಪಟುಗಳು ಪೈ.ವಿಜೇಂದ್ರ ಅವರ ಅಂತಿಮ ದರ್ಶನ ಪಡೆದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-40-861892815

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.